21.6 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿಸಿನಿಮಾ

ಬಿಗ್​​ಬಾಸ್ ಕನ್ನಡ ಸೀಸನ್ 13ರ ಪ್ರೋಮೊ ಬಿಡುಗಡೆ; ಬಿಗ್​​ಬಾಸ್ ಬಾಗಿಲು ತೆರೆದ ಕಿಚ್ಚ ಸುದೀಪ್

ಕನ್ನಡದ ಬಲು ಜನಪ್ರಿಯ ರಿಯಾಲಿಟಿ ಶೋ ಬಿಗ್​​ಬಾಸ್ ಈ ವರ್ಷ ತುಸು ಬೇಗನೆ ಶುರುವಾಗುತ್ತಿದೆ. ಪ್ರತಿ ಬಾರಿ ವರ್ಷಾಂತ್ಯಕ್ಕೆ ಶುರು ಆಗುತ್ತಿದ್ದ ಬಿಗ್​​ಬಾಸ್ ರಿಯಾಲಿಟಿ ಶೋ ಈ ಬಾರಿ ತುಸು ಬೇಗನೆ ಶುರು ಆಗಲಿದ್ದು, ಸುದೀಪ್ ಅವರ ಮೊದಲ ಪ್ರೋಮೊ ಬಿಡುಗಡೆ ಆಗಿದೆ. ಆ ಮೂಲಕ ಈ ವರ್ಷದ ಬಿಗ್​​ಬಾಸ್​​ಗೆ ಚಾಲನೆ ದೊರೆತಂತಾಗಿದೆ. ಪ್ರತಿ ಬಾರಿಯೂ ಅದ್ಧೂರಿಯಾಗಿ ಬಿಗ್​​ಬಾಸ್ ಪ್ರೋಮೊ ಅನ್ನು ಅದ್ಧೂರಿಯಾಗಿ ಚಿತ್ರೀಕರಿಸಿ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿಯೂ ಅದನ್ನೇ ಪುನರಾವರ್ತಿಸಲಾಗಿದೆ.

ಸುದೀಪ್ ಅವರು ದೊಡ್ಡ ಬಾಗಿಲನ್ನು ತೆರೆದು ಸ್ಟೈಲ್ ಆಗಿ ಎಂಟ್ರಿ ಕೊಡುತ್ತಿರುವ ದೃಶ್ಯ ಪ್ರೋಮೊನಲ್ಲಿದೆ. ಪ್ರೋಮೊನಲ್ಲಿ ಗಮನ ಸೆಳೆಯುತ್ತಿರುವುದು ಹಿನ್ನೆಲೆಯಲ್ಲಿ ಸುದೀಪ್ ಆಡಿರುವ ಮಾತುಗಳು, ‘ಕರ್ನಾಟಕದ ಜನ ಯಾರಿಗಾದರೂ ಕಾದಿದ್ದು ಇತಿಹಾಸದಲ್ಲೇ ಇಲ್ಲ. ಆದರೆ ಪ್ರತಿ ವರ್ಷ ಒಂದು ವಿಷಯಕ್ಕಾಗಿ ಕಾಯುತ್ತಾರೆ’ ಎಂದು ಬಿಗ್​​ಬಾಸ್​​ಗಾಗಿ ವೀಕ್ಷಕರು ಕಾಯುತ್ತಿದ್ದಾರೆ ಎಂದಿದ್ದಾರೆ. ‘ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು’ ಎನ್ನುವ ಸುದೀಪ್, ಸ್ಟೈಲ್ ಆಗಿ ‘ಮತ್ತೆ ಶುರುಮಾಡೋಣ್ವ’ ಎಂದು ಬಿಗ್​​ಬಾಸ್​​ನ ಹೊಸ ಸೀಸನ್​​ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಪ್ರೋಮೊ ಅದ್ಧೂರಿಯಾಗಿಯೂ ಭಿನ್ನವಾಗಿಯೂ ಇದೆ. ಪ್ರೋಮೊನಲ್ಲಿ ಸುದೀಪ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ವರ್ಷದ್ದು, 13ನೇ ಸೀಸನ್ ಆಗಿದ್ದು, ಸಾಕಷ್ಟು ಭಿನ್ನತೆಯನ್ನು ಈ ಸೀಸನ್​​ನಲ್ಲಿ ತರುವ ಪ್ರಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವರ್ಷ ಸಾಮಾನ್ಯರನ್ನು ಸಹ ಬಿಗ್​​ಬಾಸ್ ಮನೆಯ ಒಳಗೆ ಕಳಿಸಲಾಗುತ್ತಿದೆ. ಜೊತೆಗೆ ಪ್ರತಿ ವರ್ಷದಂತೆ ಸಿನಿಮಾ, ಟಿವಿ ಮತ್ತು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಇದ್ದೇ ಇರಲಿದ್ದಾರೆ. ಸುದೀಪ್ ಸಹ ಪ್ರತಿ ಬಾರಿಯಂತೆ ಈ ಬಾರಿಯೂ ಶೋನ ನಿರೂಪಣೆ ಮಾಡಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ವರ್ಷ ಒಂದು ತಿಂಗಳು ಮುಂಚಿತವಾಗಿಯೇ ಶೋ ಪ್ರಾರಂಭ ಆಗಲಿದೆ. ಇದನ್ನೂ ಓದಿ : ದುರಹಂಕಾರವೇ ವಿನಾಶಕ್ಕೆ ದಾರಿ; ಉದಯನಿಧಿ ರಿಲೀಸ್‌ ಬಳಿಕ ಟಿವಿಕೆ ವಿರುದ್ಧ ಎಂ.ಕೆ ಸ್ಟಾಲಿನ್‌ ಗುಡುಗು

Related posts

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ; ಖರ್ಗೆ ಆರೋಪ..!

Kalpana Editor

ಸಚಿವ ಕೃಷ್ಣಭೈರೇಗೌಡ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ..!

Kalpana Editor

ಸಿದ್ದಗಂಗಾ ಮಠಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ; ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ..!

Kalpana Editor