22.2 C
ಬೆಂಗಳೂರು
August 6, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ಆರೋಪಿ ದರ್ಶನ್‌ಗೆ ಅತಿದೊಡ್ಡ ಸಂಕಷ್ಟ; ಪ್ರಕರಣದ ಎ-14 ಪ್ರದೋಷ್‌ನಿಂದ ಮಾಫಿ ಸಾಕ್ಷಿಗೆ ಅರ್ಜಿ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ದರ್ಶನ್‌ಗೆ ಅತಿದೊಡ್ಡ ಸಂಕಷ್ಟ ಎದುರಾಗಿದೆ. ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಎ-14 ಪ್ರದೋಷ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ನಾನು ಸತ್ಯವನ್ನೇ ಹೇಳುತ್ತೇನೆ.. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಆರೋಪಿ ಪ್ರದೋಷ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಇಂದು ಮಧ್ಯಾಹ್ನ 12 ಗಂಟೆಗೆ ನ್ಯಾಯಾಧೀಶರ ಮುಂದೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರೋಪಿಯನ್ನು ವಿಚಾರಣೆಗೆ ಹಾಜರುಪಡಿಸಲಾಗುವುದು. ನ್ಯಾಯಾಧೀಶರ ಮುಂದೆ ಹಾಜರಾಗಿ ಪ್ರಕರಣದಲ್ಲಿ ಘಟನಾವಳಿಗಳ ಬಗ್ಗೆ ಆರೋಪಿ ಹೇಳಲಿದ್ದಾನೆ. ಈ ಹಿಂದೆ ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿಯಾಗಿದ್ದ. ಹೀಗಾಗಿ, ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಈಗ ದರ್ಶನ್ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದಾನೆ.

ಸ್ಟೋನಿ ಬ್ರೂಕ್‌ನಿಂದ ಬಂದ ದರ್ಶನ್ ಜೊತೆ ಪ್ರದೋಷ್ ಶೆಡ್‌ಗೆ ಹೋಗಿದ್ದ.‌ ಹಲ್ಲೆ ಮಾಡುವಾಗ ಸ್ಥಳದಲ್ಲಿಯೇ ಆರೋಪಿ ಇದ್ದ. ರೇಣುಕಾಸ್ವಾಮಿಯು ʼಹೊಡೆಯೋದು ಸಾಕು ನಿಲ್ಲಿಸಿ ಸತ್ತು ಹೋಗ್ತಾನೆ ಎಂದಿದ್ದʼ ( ಪೊಲೀಸರ ಹೇಳಿಕೆಯಲ್ಲಿ ಇದೆ). ಶವ ಸಾಗಿಸುವ ಸಲುವಾಗಿ ಸಬ್ ಇನ್ಸ್ಪೆಕ್ಟರ್‌ಗೆ ಪ್ರದೋಷ್‌ ಫೋನ್ ಮಾಡಿದ್ದ. ಬಳಿಕ ಶವ ಸಾಗಾಟದ ತನಕವೂ ದರ್ಶನ್ ಜೊತೆಯಲ್ಲಿಯೇ ಪ್ರದೋಷ್‌ ಇದ್ದ ಎನ್ನಲಾಗಿದೆ. ಇದನ್ನೂ ಓದಿ : ಬಿಗ್‌ಬಾಸ್ ಕನ್ನಡ 13ರ ವೇದಿಕೆ ಸಜ್ಜು – “ಅಗ್ನಿಪರೀಕ್ಷೆ” ಗೆ ಮುಹೂರ್ತ ಫಿಕ್ಸ್..!

Related posts

ಶತಾವಧಾನಿ ಗಣೇಶ್, ಅಂಕೇಗೌಡ ಸೇರಿ 66 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಧಾನ..!

Kalpana Editor

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದಿದ್ದ, ವಿದ್ಯಾರ್ಥಿನಿ ಆತ್ಮಹತ್ಯೆ..!

Kalpana Editor

ಜಮೀರ್‌ ಸಚಿವ, ಡಿಸಿಎಂ ಆಗದಂತೆ ಷಡ್ಯಂತ್ರ – ವೈರಲ್ ಆಡಿಯೋ ಬಗ್ಗೆ ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ..!

Kalpana Editor