22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿಸಿನಿಮಾ

ಬಿಗ್‌ಬಾಸ್ ಕನ್ನಡ 13ರ ವೇದಿಕೆ ಸಜ್ಜು – “ಅಗ್ನಿಪರೀಕ್ಷೆ” ಗೆ ಮುಹೂರ್ತ ಫಿಕ್ಸ್..!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ʻಬಿಗ್‌ಬಾಸ್ ಕನ್ನಡ ಸೀಸನ್‌ 13ರʼ ಆರಂಭಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದ ಬಿಗ್‌ಬಾಸ್ ಕನ್ನಡ ಸೀಸನ್‌ 13 ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇದೀಗ ವಾಹಿನಿ ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು, ಇದೇ ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.

ರಿಲೀಸ್‌ ಆದ ಪ್ರೋಮೋದಲ್ಲಿ “Thank You Karnataka” ಎಂದು ಶುರುವಾಗಿ.. ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡೋ ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನ ತಲುಪಿವೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್‌ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ. ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ಕಿಚ್ಚ ಸುದೀಪ್ ಅವರ ಪ್ರೋಮೋ ಬಿಡುಗಡೆಯಾಗಿದ್ದು, ಈ ಮೂಲಕ ಹೊಸ ಸೀಸನ್‌ಗೆ ಅಧಿಕೃತವಾಗಿ ಕೌಂಟ್‌ಡೌನ್‌ ಶುರುವಾಗಿತ್ತು. The Bigg Wait is Over!” ಕ್ಯಾಪ್ಷನ್‌ ಬರೆದಿರುವ ಪ್ರೋಮೋದಲ್ಲಿ ಬ್ಲ್ಯಾಕ್‌ ಸೂಟ್‌ನಲ್ಲಿ ಸ್ಟೈಲಿಷ್‌ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್, ʻಕರ್ನಾಟಕದ ಜನ ಯಾರಿಗೂ ಕಾಯೋದಿಲ್ಲ… ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು… ಮತ್ತೆ ಶುರು ಮಾಡೋಣ್ವಾ?ʼ ಎಂದ್ರು.

ಎನ್ನುವ ಡೈಲಾಗ್‌ ಎಲ್ಲರ ಗಮನ ಸೆಳೆದಿತ್ತು. ಇದೀಗ ಇನ್ನೊಂದು ಪ್ರೋಮೋ ರಿಲೀಸ್‌ ಮಾಡುವ ಮೂಲಕ ಕುತೂಹಲ ಇನ್ನಷ್ಟು ಹೆಚ್ಚಿಸಿದೆ. ಈ ಬಾರಿಯ ಮತ್ತೊಂದು ವಿಶೇಷ ಅಂದ್ರೆ ಕಾಮನ್‌ ಮ್ಯಾನ್‌ ಎಂಟ್ರಿ. ಈಗಾಗಲೇ ಆಡಿಷನ್‌ ಪ್ರಕ್ರಿಯೆ ಮುಗಿದಿದ್ದು, ಸಾವಿರಾರು ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದಾರೆ. ಅವರಲ್ಲಿ ಯಾರಿಗೆ ಬಿಗ್‌ಬಾಸ್‌ ಮನೆಯೊಳಗೆ ಹೋಗುವ ಅವಕಾಶ ಸಿಗಲಿದೆ ಅನ್ನೋದು ಗ್ರ್ಯಾಂಡ್‌ ಪ್ರೀಮಿಯರ್‌ ದಿನವೇ ಗೊತ್ತಾಗಲಿದೆ. ಇದನ್ನೂ ಓದಿ : ಸಚಿವ ಸ್ಥಾನ ಸಿಗದ ಬೇಸರ; ನಿಗಮ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ದದ್ದಲ್‌ ರಾಜೀನಾಮೆ..!

Related posts

ಕೆಂಪೇಗೌಡರು ಹುಟ್ಟಿದ್ದು, ಒಕ್ಕಲಿಗನಾಗಿ ಬೆಳೆದಿದ್ದು, ವಿಶ್ವಮಾನವನಾಗಿ; ಸಿಎಂ ಡಿ.ಕೆ. ಶಿವಕುಮಾರ್

Kalpana Editor

ಮಳೆಗೆ ಸೇತುವೆ ಕುಸಿತ; ಚಿಂಚೋಳಿ – ಭಾಲ್ಕಿ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತ..!

Kalpana Editor

ತುಂಗಭದ್ರಾ ಜಲಾಶಯಕ್ಕೆ ಜೀವಕಳೆ; ಕಲ್ಯಾಣ ಕರ್ನಾಟಕ ರೈತರಲ್ಲಿ ಹರ್ಷ

Kalpana Editor