22.2 C
ಬೆಂಗಳೂರು
August 7, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್ ರಾಜೀನಾಮೆ..!

ಕಲಬುರಗಿ : ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ರಾಜೀನಾಮೆ ಸಲ್ಲಿಸಿರುವುದಾಗಿ ಬುಧವಾರ (ಆ.5) ಸ್ಪಷ್ಟಪಡಿಸಿದ್ದಾರೆ. ಆದರೆ, ತಾವು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಹಾಗೂ ದಾರಿತಪ್ಪಿಸುವಂತದ್ದು ಎಂದು ಹೇಳಿದ್ದಾರೆ.

ಈ ಕುರಿತು ಪ್ರಕಟಿಸಿರುವ ಹೇಳಿಕೆಯಲ್ಲಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಾವು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ಪ್ರಸಾರವಾಗುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ತಮ್ಮ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದು, ಶಾಸಕ ಸ್ಥಾನವು ಜನರು ನೀಡಿರುವ ಜವಾಬ್ದಾರಿ. ಆ ಜನಾದೇಶಕ್ಕೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ಸಚಿವ ಸ್ಥಾನ ಇರಲಿ ಅಥವಾ ಇಲ್ಲದಿರಲಿ, ಕ್ಷೇತ್ರದ ಜನರ ಸೇವೆಗೆ ಸದಾ ಬದ್ಧನಾಗಿರುವುದಾಗಿ ತಿಳಿಸಿದ್ದಾರೆ.

ಪಕ್ಷದ ಮೇಲಿನ ತಮ್ಮ ನಿಷ್ಠೆ ಅಚಲವಾಗಿದ್ದು, ಸಮಾಜವಾದಿ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಪರವಾದ ಬದ್ಧತೆ ಎಂದಿಗೂ ಬದಲಾಗುವುದಿಲ್ಲ ಎಂದು ಪುನರುಚ್ಚರಿಸಿರುವ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು ಎಂದು ಮನವಿ ಮಾಡಿದ್ದಾರೆ.

ಐದು ದಶಕಗಳಿಂದ ಸಮಾಜವಾದಿ ಮೌಲ್ಯಗಳೊಂದಿಗೆ ರೈತರು, ಕಾರ್ಮಿಕರು, ದಲಿತರು ಹಾಗೂ ಅಹಿಂದ ವರ್ಗಗಳ ಪರ ಹೋರಾಟ ನಡೆಸಿದ್ದೇನೆ. ನಾಲ್ಕು ಬಾರಿ ಶಾಸಕ, ವಿಧಾನ ಪರಿಷತ್ ಸದಸ್ಯ, ಉಪಸಭಾಪತಿ ಹಾಗೂ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದರೂ ಸಚಿವ ಸ್ಥಾನದಿಂದ ಹೊರಗಿಡಲಾಗಿದೆ. ಇದು ನನಗೆ ಸಿಕ್ಕ ಪ್ರತಿಫಲವೇ ಎಂಬುದನ್ನು ಜನರೇ ನಿರ್ಧರಿಸಲಿ ಎಂದು ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ. ಇದನ್ನೂ ಓದಿ : ಬೈಕ್ ಸವಾರನ ಮೇಲೆ ದರ್ಪ ಆರೋಪ; ನ್ಯಾಯಾದೀಶೆ ಗಾಯತ್ರಿ ವರ್ಗಾವಣೆ..!

Related posts

ʻಕಾವೇರಿ ಕಿಚ್ಚುʼ – ತಮಿಳುನಾಡು ಸಿಎಂ ವಿಜಯ್‌ ಭೇಟಿ ಮುಂದೂಡಿಕೆಗೆ ಸಿಎಂ ಡಿಕೆಶಿ ಮನವಿ

Kalpana Editor

ʻರಾಮಮಂದಿರ ದೇಣಿಗೆ ಕಳವುʼ ಚರ್ಚೆಗೆ ಒತ್ತಾಯ – ಲೋಕಸಭೆಯಲ್ಲೂ ಗದ್ದಲ, ಕಲಾಪ ಮುಂದೂಡಿಕೆ..!

Kalpana Editor

ಮಣಿಪಾಲದಲ್ಲಿ ಶಾಲಾ ಬಸ್ ಅಪಘಾತ; ಡಿವೈಡರ್ ಮೇಲೇರಿದ ಬಸ್..!

Kalpana Editor