22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಬೈಕ್ ಸವಾರನ ಮೇಲೆ ದರ್ಪ ಆರೋಪ; ನ್ಯಾಯಾದೀಶೆ ಗಾಯತ್ರಿ ವರ್ಗಾವಣೆ..!

ಬೆಂಗಳೂರು : ಕೋಲಾರ ಜಿಲ್ಲೆಯ ಮಾಲೂರು ಜಿಎಂಎಫ್‌ಸಿ ನ್ಯಾಯಾದೀಶೆ ಗಾಯತ್ರಿ ಅವರನ್ನು ಬೀದರ್ ಹುಮನಾಬಾದ್‌ನ ಜಿಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ಹೈಕೋರ್ಟ್ ರಿಜಿಸ್ಟರ್ ಚಂದ್ರಶೇಖರ ರೆಡ್ಡಿ ಅವರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಮಾಲೂರು ಜೆಎಂಎಫ್‌ಸಿ ನ್ಯಾಯಾಧೀಶೆ ಗಾಯತ್ರಿ ಅವರು ತನ್ನ ಇನ್ನೋವಾ ಕಾರಿನಲ್ಲಿ ಹೋಗುವಾಗ, ಬೈಕ್ ಸವಾರ ವಿನಯ್ ಎಂಬಾತ ಅತಿವೇಗವಾಗಿ ಬಂದು ಕಾರನ್ನು ಓವರ್‌ಟೇಕ್ ಮಾಡಿ, ಕೈ ತೋರಿಸಿ ಹೋಗಿದ್ದ ಅನ್ನೋ ಆರೋಪ ಕೇಳಿಬಂದಿತ್ತು. ಅಷ್ಟಕ್ಕೆ ಕೋಪಗೊಂಡ ನ್ಯಾಯಾಧೀಶರು, ಬೈಕನ್ನು ಬೆನ್ನತ್ತಿ ಸವಾರ ವಿನಯ್ ಮೇಲೆ ದರ್ಪ ತೋರಿಸಿ ರಂಪಾಟ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು.

ನಂತರ ಬೈಕ್ ಸವಾರನ ಮೇಲೆ ನ್ಯಾಯಾಧೀಶೆ ಗಾಯತ್ರಿ ಅವರು ಎಫ್‌ಐಆರ್ ಕೂಡ ದಾಖಲು ಮಾಡಿದ್ದರು. ಈ ಎಫ್‌ಐಅರ್ ರದ್ದು ಮಾಡುವಂತೆ ಬೈಕ್ ಸವಾರ ವಿನಯ್ ಹೈಕೋರ್ಟ್ ಮೊರೆ ಹೋಗಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಪೀಠ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಧೀಶೆ ಗಾಯತ್ರಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಿಜಿಸ್ಟರ್‌ಗೆ ಸೂಚಿಸಿದ್ದರು. ಈ ಪರಿಶೀಲನೆ ನಡೆಸಿದ ರಿಜಿಸ್ಟರ್ ಚಂದ್ರಶೇಖರ ರೆಡ್ಡಿ ಅವರು ನ್ಯಾಯಾಧೀಶೆ ಗಾಯತ್ರಿ ಅವರನ್ನು ಬೀದರ್‌ಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ : ಇಂದು ಬಂಗಾರಪೇಟೆ ಪಟ್ಟಣ ಬಂದ್‌; ನಾರಾಯಣಸ್ವಾಮಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ, ಬೆಂಬಲಿಗರ ಆಕ್ರೋಶ..!

Related posts

ಬೆಂಗಳೂರಿಂದ ಹೊಳೆನರಸೀಪುರಕ್ಕೆ ಚೆನ್ನಮ್ಮ ಪಾರ್ಥಿವ ಶರೀರ ಅಂತಿಮ ಯಾತ್ರೆ..!

Kalpana Editor

ಬ್ರೇಕಪ್ ವದಂತಿಗೆ ಪ್ರತಿಕ್ರಿಯೆ ಕೊಟ್ಟ ನಟಿ ಅನುಪಮಾ ಪರಮೇಶ್ವರನ್

kknewskannada1987@gmail.com

ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಯಲ್ಲಿ ಇಲಿ, ಹೆಗ್ಗಣ; ಹೌಹಾರಿದ ಅಧಿಕಾರಿಗಳು

kknewskannada1987@gmail.com