23 C
ಬೆಂಗಳೂರು
August 6, 2026
kranthikidi.com
ಆರೋಗ್ಯತಾಜಾಸುದ್ದಿ

ದೂರ ಪ್ರಯಾಣದ ವೇಳೆ ವಾಂತಿ ಬರದಂತೆ ತಡೆಯಲು ಈ ಟಿಪ್ಸ್‌ ಪಾಲಿಸಿ..!

ಲಾಂಗ್‌ ಟ್ರಿಪ್‌ ವೇಳೆ ಅಥವಾ ದೂರದೂರಿಗೆ ಕಾರ್‌, ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಅನೇಕರಿಗೆ ವಾಕರಿಗೆ, ತಲೆ ತಿರುಗುವುದು, ಸಸ್ತು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಹೊಟ್ಟೆಯಲ್ಲಿ ತಳಮಳ ಉಂಟಾಗಿ ವಾಂತಿ ಬಂದ ಅನುಭವವಾದರೆ ಇನ್ನೂ ಕೆಲವರು ಪ್ರಯಾಣದುದ್ದಕ್ಕೂ ವಾಂತಿ ಮಾಡುತ್ತಾರೆ. ಈ ಸಮಸ್ಯೆ ಇಡೀ ಟ್ರಿಪ್‌ನ ಖುಷಿಯನ್ನು ಹಾಳು ಮಾಡಿಬಿಡುತ್ತದೆ.

ಈ ಒಂದು ಕಾರಣದಿಂದಾಗಿ ಹಲವರು ದೂರ ಪ್ರಯಾಣ ಮಾಡಲು ಹಿಂಜರಿಯುತ್ತಾರೆ. ಇನ್ನೂ ಕೆಲವರು ಈ ಮೋಷನ್‌ ಸಿಕ್ನೆಸ್‌ ಅನ್ನು ತಡೆಯಲು ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಆದರೆ ಪ್ರಯಾಣಕ್ಕೂ ಮುನ್ನ ಈ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಮೋಷನ್‌ ಸಿಕ್ನೆಸ್‌ ಇಲ್ಲದೆ ಆರಾಮವಾಗಿ ಪ್ರಯಾಣಿಸಬಹುದು. ಅಲ್ಲದೆ ಈ ಕೆಲವೊಂದು ಮನೆ ಮದ್ದುಗಳು ಸಹ ವಾಂತಿ ತಡೆಯಲು ಸಹಕಾರಿಯಾಗಿದೆ.

ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಬೇಡಿ : ಖಾಲಿ ಹೊಟ್ಟೆಯಲ್ಲಿ ಎಂದಿಗೂ ಪ್ರಯಾಣಿಸಬಾರದು, ಈ ತಪ್ಪಿನಿಂದ ಪ್ರಯಾಣದ ವೇಳೆ ವಾಕರಿಕೆ ಮತ್ತು ತಲೆತಿರುಗುವಿಕೆ ಮುಂತಾದ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಆದ್ದರಿಂದ ದೂರ ಪ್ರಯಾಣಕ್ಕೂ ಮುನ್ನ, ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ ಮತ್ತು ಭಾರವಾದ, ಹುರಿದ ಅಥವಾ ಎಣ್ಣೆಯುಕ್ತ ಆಹಾರವನ್ನು ತಪ್ಪಿಸಬೇಕು.

ಸರಿಯಾದ ಆಸನವನ್ನು ಆರಿಸಿ : ನಿಮಗೆ ಮೋಷನ್‌ ಸಿಕ್ನೆಸ್‌ ಇದ್ದರೆ ನೀವು ಪ್ರಯಾಣದ ಸಂದರ್ಭದಲ್ಲಿ ಯಾವಾಗಲೂ ಬಸ್ ಅಥವಾ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿ. ಇದು ನಿಮಗೆ ಮುಂದಿನ ರಸ್ತೆಯ ಸ್ಪಷ್ಟ ನೋಟವನ್ನು ನೀಡುತ್ತದೆ ಮತ್ತು ನಿಮ್ಮ ಮೆದುಳಿಗೆ ಕಾರಿನ ವೇಗವನ್ನು ಗ್ರಹಿಸಲು ಸುಲಭವಾಗುತ್ತದೆ. ಅಲ್ಲದೆ ಮುಂದಿನ ದೃಶ್ಯಾವಳಿಗಳನ್ನು ನೋಡುವುದರಿಂದ ಮೆದುಳು-ಕಣ್ಣಿನ ಸಮನ್ವಯವು ಸುಧಾರಿಸುತ್ತದೆ, ಇದು ಮೋಷನ್‌ ಸಿಕ್ನೆನ್‌ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ತಾಜಾ ಗಾಳಿಯನ್ನು ಪಡೆಯಿರಿ : ಕಾರಿನ ಗ್ಲಾಸ್‌ ಅನ್ನು ಸಂಪೂರ್ಣವಾಗಿ ಮುಚ್ಚಿ, ಎಸಿ ಹಾಕಿ ಪ್ರಯಾಣಿಸಿದರೆ ವಾಂತಿ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರಯಾಣ ಮಾಡುವಾಗ, ಕಾರಿನ ಗ್ಲಾಸ್‌ ಸ್ವಲ್ಪ ತೆರೆದಿಡಿ ಅಥವಾ ಸ್ವಲ್ಪ ತಾಜಾ ಗಾಳಿಯನ್ನು ಪಡೆಯಲು ಪ್ರಯತ್ನಿಸಿ. ಇದು ಆತಂಕ ಅಥವಾ ಪ್ಯಾನಿಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಪ್ರಯಾಣಿಸುವಾಗ ಮೊಬೈಲ್‌ ಫೋನ್‌ ನೋಡುವುದು, ಪುಸ್ತಕ ಓದುವುದನ್ನು ಕೂಡ ತಪ್ಪಿಸಬೇಕು.

ಕಾರಿನೊಳಗೆ ಏರ್‌ ಫ್ರೆಶ್ನರ್‌ ಹಾಕಬೇಡಿ : ಕಾರಿನೊಳಗಿನ ಏರ್ ಫ್ರೆಶ್ನರ್‌ಗಳ ಬಲವಾದ ವಾಸನೆ ಸಹ ಕೆಲವರಿಗೆ ವಾಂತಿ ಉಂಟಾಗಲು ಕಾರಣವಾಗಬಹುದು. ಆದ್ದರಿಂದ ಏರ್‌ ಫ್ರೆಶ್ನರ್‌ ಹಾಕಲು ಬಿಡಬೇಡಿ. ಅಲ್ಲದೆ ಈ ವಾಸನೆಯಿಂದ ನಿಮಗೆ ಅನಾನುಕೂಲವಾಗಿದ್ದರೆ, ಕಾರನ್ನು ನಿಲ್ಲಿಸಿ ಮತ್ತು ತಾಜಾ ಗಾಳಿಯಲ್ಲಿ ಪಡೆಯಲು ಕಾರಿನಿಂದ ಹೊರಗಿಳಿದು ಸ್ವಲ್ಪ ತಾಜಾ ಗಾಳಿಯನ್ನು ತೆಗೆದುಕೊಳ್ಳಿ. ಇದರಿಂದ ದೇಹವು ಹಗುರವಾಗುತ್ತದೆ. ದೇಹವು ಹೆಚ್ಚು ಹಗುರವಾಗಿರುತ್ತದೆ.

ಶುಂಠಿ ಬಳಕೆ : ಮೋಷನ್‌ ಸಿಕ್ನೆಸ್‌ ಕಡಿಮೆ ಮಾಡಲು ಶುಂಠಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರಯಾಣದ ಮೊದಲು, ನೀವು ಶುಂಠಿ ಚಹಾವನ್ನು ಕುಡಿಯಬಹುದು ಅಥವಾ ಸಣ್ಣ ತುಂಡು ಶುಂಠಿಯನ್ನು ಅಗಿಯಬಹುದು. ಶುಂಠಿಯಲ್ಲಿರುವ ನೈಸರ್ಗಿಕ ಪದಾರ್ಥಗಳು ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಂಬೆ ಮತ್ತು ಪುದೀನ ಬಳಕೆ : ಪ್ರಯಾಣಕ್ಕೂ ಮುನ್ನ ನಿಂಬೆ ಅಥವಾ ಪುದೀನ ಚಹಾ ಕುಡಿಯುವ ಮೂಲಕವೂ ವಾಂತಿಯನ್ನು ತಡೆಯಬಹುದು. ಇದಲ್ಲದೆ ಪುದೀನ ಕ್ಯಾಂಡಿಯ ಪರಿಮಳವು ಸಹ ವಾಕರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ಕಾಂಗ್ರೆಸ್ ಯುವಕರ ರಕ್ತ ಹೀರಿ ಬದುಕುತ್ತಿದೆ – ಛಲವಾದಿ ನಾರಾಯಣಸ್ವಾಮಿ

Related posts

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; ಆರೆಂಜ್ ಅಲರ್ಟ್​..!

Kalpana Editor

ಬಿರುಗಾಳಿ ಸಹಿತ ಭಾರೀ ಮಳೆ; ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ..!

Kalpana Editor

ಉದ್ಯಮಿ ಆದಿಕೇಶವುಲು ಮೊಮ್ಮಗನ ದರ್ಪ; ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆಆರೋಪ..!

kknewskannada1987@gmail.com