23 C
ಬೆಂಗಳೂರು
August 6, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ತಿಮ್ಮಾಪುರ್-ನಂಜಯ್ಯಮಠ ಆಡಿಯೋ ಬಗ್ಗೆ ಛಲವಾದಿ ದೂರು ಕೊಡಲಿ; ಪ್ರಿಯಾಂಕ್ ಖರ್ಗೆ

ಬೆಂಗಳೂರು : ಮಾಜಿ ಸಚಿವ ತಿಮ್ಮಾಪುರ್-ನಂಜಯ್ಯಮಠ ಆಡಿಯೋ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಅವರು ದೂರು ಕೊಡಲಿ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಿಮ್ಮಾಪುರ್ ಮತ್ತು ನಂಜಯ್ಯಮಠ ಸ್ಪಷ್ಟವಾಗಿ ಹೇಳಿದ್ದಾರೆ. ಆಡಿಯೋ ಛಲವಾದಿ ನಾರಾಯಣಸ್ವಾಮಿ ಅವರ ಬಳಿ ಇದೆ.

ನಾನೇ ಈಗ ಗೃಹ ಸಚಿವ. ನನಗೆ ದೂರು ಕೊಡಿ. ಫಾರೆನ್ಸಿಕ್ ಲ್ಯಾಬ್‌ಗೆ ಕಳಿಸಿ ರಿಪೋರ್ಟ್ ತರಿಸುತ್ತೇನೆ. ನಿಮಗೆ ಎಲ್ಲಿಂದ ಬಂತು ಅಂತ ನೀವು ಹೇಳಿ, ಅವರು ಮಾತಾಡಿದ್ದಾರಾ ಇಲ್ಲವಾ ನಾನು ಹೇಳ್ತೀನಿ‌. ಒಂದು ಕಂಪ್ಲೆಂಟ್ ಕೊಡಿ ಎಂದಿದ್ದಾರೆ.

ಸುಮ್ಮನೆ ಆಡಿಯೋ ಸಿಕ್ಕಿದೆ ಅಂತ ನಾವು ರಿಯಾಕ್ಟ್ ಮಾಡೋದು ಸರಿಯಲ್ಲ. ನಾರಾಯಣಸ್ವಾಮಿ ನನ್ನ ಬೆಸ್ಟ್ ಫ್ರೆಂಡ್, ದೂರು ಕೊಡಲಿ. ಅವರು ಹೇಳಿದ್ದನ್ನು ನಾವು ಗಂಭೀರವಾಗಿ ತಗೋಬೇಕು. ದೂರು ಕೊಡಲಿ ನಾನು ಸತ್ಯಾಂಶವನ್ನು ಸದನದಲ್ಲಿ ಆ ಮಂಡನೆ ಮಾಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ 220ನೇ ಫಲ-ಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆ ಶಿವಕುಮಾರ್ ಚಾಲನೆ..!

Related posts

ವಿಚ್ಛೇದನ ಅರ್ಜಿ ವಿಚಾರಣೆ ಹಂತದಲ್ಲೇ ‘ಶುಭ’ ಸುದ್ದಿ ಕೇಳಿಬಂತು..!

Kalpana Editor

ಪ್ರೀತಿಸಿ ಮದುವೆಯಾಗಿದ್ದವಳನ್ನ ರಹಸ್ಯವಾಗಿಟ್ಟಿದ್ದ ಪತಿ; ಮನನೊಂದು ನವವಿವಾಹಿತೆ ಆತ್ಮಹತ್ಯೆ…!

Kalpana Editor

ಬೆಂಗಳೂರಿನಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ ಆರಂಭ..!

Kalpana Editor