21.6 C
ಬೆಂಗಳೂರು
August 7, 2026
kranthikidi.com
ತಾಜಾಸುದ್ದಿಸಿನಿಮಾ

ನವೆಂಬರ್ 6ಕ್ಕೆ ಬೆಳ್ಳಿತೆರೆ ಮೇಲೆ ʻರಾಮಾಯಣʼ ಸಿನಿಮಾ ದೈವಿಕ ಪರ್ವ ಶುರು..!

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯವಾದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಬಹಿರಂಗಗೊಂಡಿದೆ. ಚಿತ್ರದ ಮೊದಲ ಭಾಗವು ದೀಪಾವಳಿಗೆ ಅಂದರೆ ಇದೇ ನವೆಂಬರ್ 6ರಂದು ಅದ್ದೂರಿಯಾಗಿ ತೆರೆಗೆಪ್ಪಳಿಸಲಿದೆ. ನಮಿತ್ ಮಲ್ಹೋತ್ರಾ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸೋನಿ ಪಿಕ್ಚರ್ಸ್‌ ತನ್ನ ಅಧಿಕೃತ ಎಕ್ಸ್ ಖಾತೆ ಮೂಲಕ ಈ ದಿನಾಂಕವನ್ನು ಘೋಷಿಸಿದೆ.

ಚಿತ್ರ ತಂಡ ಈ ಮೊದಲು ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಟ್ರೇಲರ್‌ ರಿಲೀಸ್‌ ಮಾಡಿತ್ತು. ಇದೀಗ ಆಂಗ್ಲ ಭಾಷೆಯ ಟ್ರೇಲರ್‌ ರಿಲೀಸ್‌ ಮಾಡಿದ್ದು, ಕೊನೆಯಲ್ಲಿ ಸಿನಿಮಾ ರಿಲೀಸ್‌ ದಿನಾಂಕವನ್ನು ಹಂಚಿಕೊಂಡಿದೆ. ವಿಶೇಷವೆಂದರೆ ಇದು ಸಾಮಾನ್ಯ ಡಬ್ ಮಾಡಿದ ಟ್ರೇಲರ್ ಅಲ್ಲ. ಬದಲಿಗೆ ಪಾತ್ರಗಳು ನೇರವಾಗಿ ಇಂಗ್ಲಿಷ್ ಸಂಭಾಷಣೆಗಳನ್ನು ಮಾತನಾಡುವಂತೆ ಇದನ್ನು ಸಿದ್ಧಪಡಿಸಲಾಗಿದೆ.

ಎಐ ತಂತ್ರಜ್ಞಾನ ಬಳಸಿ ಇದನ್ನು ರಚಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದರೂ, ನಿರ್ಮಾಪಕರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವಿವಿಧ ಭಾಷೆಗಳ ಪ್ರೇಕ್ಷಕರಿಗೆ ತಕ್ಕಂತೆ ಸಿನಿಮಾವನ್ನು ತಲುಪಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸುವುದಾಗಿ ನಮಿತ್ ಮಲ್ಹೋತ್ರಾ ಹಿಂದೆ ತಿಳಿಸಿದ್ದರು.

ಜುಲೈನಲ್ಲಿ ಬಿಡುಗಡೆಯಾಗಿದ್ದ ಟ್ರೇಲರ್‌ನಲ್ಲಿ ರಾವಣನು ಮೂರು ಲೋಕಗಳ ಅಧಿಪತಿ ಎಂದು ಘೋಷಿಸಿಕೊಂಡು ವಿನಾಶ ಸೃಷ್ಟಿಸುವುದರೊಂದಿಗೆ ಕಥೆ ಆರಂಭವಾಗುತ್ತದೆ. ನಂತರ ಧರ್ಮವನ್ನು ಸ್ಥಾಪಿಸಲು ವಿಷ್ಣು ರಾಮನಾಗಿ ಅವತರಿಸುವುದನ್ನು ತೋರಿಸಲಾಗಿದೆ. ರಾಮ-ಸೀತೆ ವಿವಾಹ, ರಾಮನಿಗೆ 14 ವರ್ಷಗಳ ವನವಾಸ, ಸೀತೆ ಮತ್ತು ಲಕ್ಷ್ಮಣರ ಜೊತೆಗೆ ಅರಣ್ಯಕ್ಕೆ ತೆರಳುವಿಕೆ, ರಾವಣನಿಂದ ಸೀತಾಪಹರಣ ಹಾಗೂ ಅಂತಿಮವಾಗಿ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಮಹಾಯುದ್ಧವನ್ನು ಈ ಸಿನಿಮಾದಲ್ಲಿ ಅಳೆದು ತೂಗಲಾಗಿದೆ.

ಭಾರತೀಯರ ಅತಿ ಪವಿತ್ರ ಮಹಾಕಾವ್ಯವನ್ನು ಕೇವಲ ಎರಡು ಭಾಗಗಳಲ್ಲಿ ಅಡಕಗೊಳಿಸುವುದು ದೊಡ್ಡ ಸವಾಲಾಗಿತ್ತು ಎಂದು ನಟ ರಣ್‌ಬೀರ್ ಕಪೂರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 4,000 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ರಾಮಾಯಣದ ಮೌಲ್ಯಗಳು, ಧರ್ಮ, ಧೈರ್ಯ ಹಾಗೂ ಜೀವಮಾನದ ಪಾಠಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಮಾಯಣ ಮೊದಲ ಭಾಗವು ನವೆಂಬರ್ 6, 2026ರಂದು ಬಿಡುಗಡೆಯಾಗಲಿದ್ದು, ಇದರ ಎರಡನೇ ಭಾಗವು 2027ರ ದೀಪಾವಳಿ ಆಸುಪಾಸಿನಲ್ಲಿ ತೆರೆಗೆಪ್ಪಳಿಸುವ ನಿರೀಕ್ಷೆಯಿದೆ. ಆದರೆ ಭಾಗ 2ರ ನಿಖರವಾದ ದಿನಾಂಕವನ್ನು ಇನ್ನೂ ಘೋಷಿಸಬೇಕಿದೆ. ಇದನ್ನೂ ಓದಿ : ಉಪವಾಸ ಅಂತ್ಯಗೊಳಿಸುವ ಯೋಜನೆಯನ್ನು ರಾಹುಲ್ ನಿರ್ಲಕ್ಷಿಸಿದ್ರು – ವಾಂಗ್ಚುಕ್ ಬೇಸರ..!

Related posts

ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಮೊದಲ ‘ಬ್ಲೂ ಲೈನ್’ ರೈಲು ಆಗಮನ

Kalpana Editor

ಇವತ್ತು ರಾತ್ರಿಯೇ ಸಚಿವ ಸಂಪುಟ ವಿಸ್ತರಣೆ ಫೈನಲ್‌ ಆಗಬಹುದು – ಸಿದ್ದರಾಮಯ್ಯ

Kalpana Editor

KPSC ಅಕ್ರಮ ಹಾಗೂ ಪಶುವೈದ್ಯಾಧಿಕಾರಿ ನೇಮಕಾತಿ ಭ್ರಷ್ಟಾಚಾರ ಖಂಡಿಸಿ; ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ..!

Kalpana Editor