20.8 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿದೇಶ

ಉಪವಾಸ ಅಂತ್ಯಗೊಳಿಸುವ ಯೋಜನೆಯನ್ನು ರಾಹುಲ್ ನಿರ್ಲಕ್ಷಿಸಿದ್ರು – ವಾಂಗ್ಚುಕ್ ಬೇಸರ..!

ನವದೆಹಲಿ : ನನ್ನ ಉಪವಾಸ ಅಂತ್ಯಗೊಳಿಸುವ ಯೋಜನೆಯನ್ನು ರಾಹುಲ್‌ ಗಾಂಧಿ ನಿರ್ಲಕ್ಷಿಸಿದ್ದರು ಎಂದು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಬೇಸರ ವ್ಯಕ್ತಪಡಿಸಿದ್ದಾರೆ. ಜಂತರ್ ಮಂತರ್‌ನಲ್ಲಿ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲು ರಾಹುಲ್ ಗಾಂಧಿ ಅವರಿಂದ ಜ್ಯೂಸ್ ನೀಡಲು ನನ್ನ ಪತ್ನಿ ಗೀತಾಂಜಲಿ ಪ್ರಯತ್ನಿಸಿದ್ದರು.

ಆದರೆ, ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಕಾಂಗ್ರೆಸ್ ನಾಯಕ ಮತ್ತು ಇತರ ರಾಜಕೀಯ ಪಕ್ಷಗಳ ಬಗ್ಗೆ ನನಗೆ ನಿರಾಶೆಯಾಗಿದೆ ಎಂದು ವಾಂಗ್ಚುಕ್ ಹೇಳಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ನನಗೆ ಸೂಪ್‌ ನೀಡುತ್ತಿರುವ ಫೋಟೊವನ್ನು, ನಾನು ಉಪವಾಸ ಅಂತ್ಯಗೊಳಿಸುವವರೆಗೆ ಬಿಡುಗಡೆ ಮಾಡಲ್ಲ ಅಂತ ಮಾತುಕೊಟ್ಟಿದ್ದರು.

ಆದರೆ, ಅವರು ಕೂಡ ಭರವಸೆಯನ್ನು ಮುರಿದರು. ಆದ್ದರಿಂದ ನಾನು ಈ ಎಲ್ಲಾ ನಾಯಕರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ ಎಂದು ಅಸಾಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಬಗ್ಗೆ ನಾಲ್ಕೈದು ಅತ್ಯಂತ ಕಠಿಣ ಟೀಕೆಗಳು ಬಂದವು. ಅವರು ಪ್ರತಿಕ್ರಿಯಿಸಲಿಲ್ಲ. ಆದರೆ ಪರಿಸರ ವ್ಯವಸ್ಥೆಯು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿತು. ನನ್ನನ್ನು ಟ್ರೋಲ್ ಮಾಡಿತು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ : ಇಂದು ಆಷಾಢ ಮಾಸದ ಕಡೆಯ ಶುಕ್ರವಾರ; ಚಾಮುಂಡಿ ಬೆಟ್ಟಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ..!

Related posts

ಬೆನ್ನುತಟ್ಟಿ ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ

Kalpana Editor

ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿ ಎಂದು ನಿಖಿಲ್ ಖಡಕ್ ಎಚ್ಚರಿಕೆ..!

Kalpana Editor

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 38ಕ್ಕೆ ಏರಿಕೆ..!

kknewskannada1987@gmail.com