21.5 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಲ್ಲಿಕೆ; ಹೊರಟ್ಟಿ ಸ್ಪಷ್ಟನೆ..!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯೊಂದರಲ್ಲಿ, ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್‌ ಅವರ ಸುದೀರ್ಘ ಮನವೊಲಿಕೆಯ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಈ ಮೊದಲು ಮುಂಗಾರು ಅಧಿವೇಶನ ಆರಂಭವಾದ ಬಳಿಕ ಅಂದರೆ ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು. ಈಗ ಯಾವುದೇ ಒತ್ತಡವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದಲೇ ತಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ನೂತನ ಸಭಾಪತಿ ಆಯ್ಕೆಯಾಗುವವರೆಗೆ ಬಸವರಾಜ ಹೊರಟ್ಟಿ ಅವರೇ ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೇಲ್ಮನೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ ಬಲ ಹೆಚ್ಚಿರುವುದರಿಂದ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್, ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಕಾಂಗ್ರೆಸ್ ವರಿಷ್ಠರು ಈಗಾಗಲೇ ಅಂತಿಮಗೊಳಿಸಿದ್ದಾರೆ.

ಆಗಸ್ಟ್​​ 14ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ನಿನ್ನೆಯೇ ಹೊರಟ್ಟಿ ಅವರು ಘೋಷಿಸಿದ್ದರು. ಈ ನಡುವೆ ಇಂದು ಅವರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಭೇಟಿ ಹಿಂದನ ಕಾರಣವನ್ನು ಅವರು ಟಿವಿ9 ಜೊತೆ ಬಿಚ್ಚಿಟ್ಟಿದ್ದು, ಕೊನೇಯದಾಗಿ ಧನ್ಯವಾದ ಹೇಳಲು ಡಿಕೆಶಿ ಅವರ ಮನೆಗೆ ತೆರಳಿದ್ದೆ.

ಇಲ್ಲಿಯವರೆಗೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ಎಂದು ತಿಳಿಸಿರೋದಾಗಿ ಹೇಳಿದ್ದಾರೆ. ಕಾಂಗ್ರೆಸಿರ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಈಗ ಆ ಬಗ್ಗೆ ಮಾತನಾಡುತ್ತಿರೋದೇಕೆ. 23 ಮಂದಿ ಕಾಂಗ್ರೆಸ್​​ ಸದಸ್ಯರೇ ನನ್ನ ಕೆಲಸವನ್ನ ಕೊಂಡಾಡಿದ್ದಾರೆ. ಈಗ ಈ ರೀತಿ ಹೇಳಿದರೆ ಆಗಿನ ಹೇಳಿಕೆಗೆ ಏನು ಅರ್ಥವಿದೆ ಎಂದೂ ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ : ಯಡಿಯೂರಪ್ಪ ಎಷ್ಟು ದಿನ ಒಬ್ಬರೇ ಸಿಎಂ ಆಗಿರಲಿಲ್ವಾ..? – ಬಿಜೆಪಿಗೆ ಡಿಕೆಶಿ ಟಾಂಗ್

Related posts

9 ಯೋಧರಿಗೆ ಕೀರ್ತಿ ಚಕ್ರ ಸೇರಿ 78 ಜನರಿಗೆ ಶೌರ್ಯ ಪ್ರಶಸ್ತಿ ಘೋಷಣೆ..!

kknewskannada1987@gmail.com

ಗ್ರಾಹಕರಿಗೆ ಶಾಕ್‌ – ಗೃಹಬಳಕೆ ಸಿಲಿಂಡರ್ ಬೆಲೆ 29 ರೂ. ಏರಿಕೆ..!

Kalpana Editor

ಬೈಕ್ ಟ್ಯಾಕ್ಸಿ ವಿರುದ್ಧ RTO ಬಿಗ್ ಆಪರೇಷನ್ – ವಾಹನಗಳು ಸೀಜ್..!

kknewskannada1987@gmail.com