27.3 C
ಬೆಂಗಳೂರು
October 12, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಮನೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ – ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ಶಂಕೆ..!

ಬೆಂಗಳೂರು : ಟಿ.ದಾಸರಹಳ್ಳಿಯ ಬಾಗಲಗುಂಟೆ ಹಾವನೂರು ಬಡಾವಣೆಯಲ್ಲಿ ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ. ಅಸ್ಥಿಪಂಜರ 50 ವರ್ಷ ವಯಸ್ಸಿನ ದಾಕ್ಷಾಯಿಣಿ ಅವರದ್ದು ಎಂದು ಗುರುತಿಸಲಾಗಿದೆ. ಮೃತಪಟ್ಟು ಒಂದೂವರೆ ವರ್ಷವಾದರೂ ಗೊತ್ತಾಗಿರಲಿಲ್ಲ.

10 ವರ್ಷಗಳ ಹಿಂದೆ ಗಂಡ ಉಮೇಶ್‌ ಮೃತಪಟ್ಟಿದ್ದರು. ಮಗನೂ ಕೂಡಾ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದ. ಬಳಿಕ ದಾಕ್ಷಾಯಿಣಿ ಅವರು ಒಬ್ಬರೇ ವಾಸವಾಗಿದ್ದರು. ಒಂದು ವರ್ಷದಿಂದ ಮನೆ ಇದ್ದ ಹಾಗೆಯೇ ಇತ್ತು.

ರಾತ್ರಿ 8 ಗಂಟೆ ಸುಮಾರಿಗೆ ಮನೆ ಡೋರ್ ಓಪನ್ ಆಗಿರೋದನ್ನ ನೋಡಿ ಸ್ಥಳೀಯರು, ಪೊಲೀಸರಿಗೆ ಕರೆ ಮಾಡಿದರು. ಯಾರೋ ಕಳ್ಳತನ ಮಾಡಲು ಬಂದಿರಬಹುದು ಎಂದು ಕರೆ ಮಾಡಿದ್ದರು. ಪೊಲೀಸರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮನೆಯ ಬಾತ್ ರೂಂನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಒಂದೂವರೆ ವರ್ಷದ ಹಿಂದೆ ಮಹಿಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳ ಪರಿಶೀಲಿಸಿದ ಬಾಗಲಗುಂಟೆ ಪೊಲೀಸರು, ಅಸ್ಥಿಪಂಜರವನ್ನು ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ರಸ್ತೆ ಬದಿ ನಿಂತಿದ್ದ, ಸಿಲಿಂಡರ್ ಲಾರಿಗೆ ಕಾರು ಡಿಕ್ಕಿ – ಮೂವರು ಸಾವು..!

Related posts

300 ಅಡಿ ಕುಸಿದ ಏರ್ ಇಂಡಿಯಾ ವಿಮಾನ; 12 ಮಂದಿಗೆ ಗಾಯ..!

kknewskannada1987@gmail.com

ಭಟ್ಕಳ ದುರಂತ; ಕಪ್ಪೆಚಿಪ್ಪು ಆರಿಸಲು ಹೋದವರ ಸಾವಿನ ಸಂಖ್ಯೆ 11ಕ್ಕೆ ಏರಿಕೆ..!

Kalpana Editor

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ; ಕೋಲಾರ–ಚಿಕ್ಕಬಳ್ಳಾಪುರ ಶಾಸಕರ ಸಭೆ..!

kknewskannada1987@gmail.com