22.4 C
ಬೆಂಗಳೂರು
October 6, 2026
kranthikidi.com
ತಾಜಾಸುದ್ದಿಸಿನಿಮಾ

ವಿಶ್ವದ ಗಮನ ಸೆಳೆದ ಧುರಂಧರ್ – ಸಿನಿಮಾಗಳನ್ನು ಹಿಂದಿಕ್ಕಿ ಹೊಸ ದಾಖಲೆ

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಇದೀಗ ಬಾಕ್ಸ್ ಆಫೀಸ್ ಬಳಿಕ ಒಟಿಟಿಯಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರಕ್ಕೆ ನೆಟ್‌ಫ್ಲಿಕ್ಸ್ ಸಹ-ಸಿಇಒ ಟೆಡ್ ಸರಾಂಡೋಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧುರಂಧರ್ ಈ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ. ಹಾಲಿವುಡ್‌ ಸಿನಿಮಾಗಳಿಗಿಂತ ಹೆಚ್ಚು ವೀಕ್ಷಕರನ್ನು ಗಳಿಸಿದೆ ಎಂದು ಅವರು ಹೇಳಿದ್ದಾರೆ. ಧುರಂಧರ್ ಮೊದಲ ಭಾಗ 2026ರ ಜನವರಿಯಿಂದ ಜೂನ್‌ವರೆಗೆ ನೆಟ್‌ಫ್ಲಿಕ್ಸ್‌ನಲ್ಲಿ 3.7 ಕೋಟಿ ವೀಕ್ಷಣೆಗಳನ್ನು ಕಂಡಿದೆ. 22 ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನ ಟಾಪ್ ಪಟ್ಟಿಯಲ್ಲೂ ಸಿನಿಮಾ ಸ್ಥಾನ ಪಡೆದಿದೆ.

ಇನ್ನು ಧುರಂಧರ್ ಸಿನಿಮಾದ ಎರಡು ಸರಣಿಗಳು ಒಟ್ಟಾಗಿ ವಿಶ್ವಾದ್ಯಂತ 3,100 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿವೆ. ʼಧುರಂಧರ್: ದಿ ರಿವೆಂಜ್ʼ ಭಾರತದಲ್ಲಿ 1,000 ಕೋಟಿ ರೂ. ನಿವ್ವಳ ಗಳಿಕೆ ದಾಟಿದ ಮೊದಲ ಬಾಲಿವುಡ್ ಸಿನಿಮಾ ಎಂಬ ದಾಖಲೆ ಮಾಡಿದೆ ಎಂದು ತಿಳಿಸಲಾಗಿದೆ. ಭಾರತ ಚಿತ್ರರಂಗ ಯಾವಾಗ ʼಸ್ಕ್ವಿಡ್ ಗೇಮ್ʼ ಅಥವಾ ‘ಮನಿ ಹೀಸ್ಟ್’ನಂತಹ ಗ್ಲೋಬಲ್‌ ಹಿಟ್‌ ಸಿನಿಮಾಗಳನ್ನು ಕೊಡುತ್ತೆ ಎಂಬ ಪ್ರಶ್ನೆಗೂ ಟೆಡ್ ಸರಾಂಡೋಸ್ ಉತ್ತರಿಸಿದ್ದಾರೆ. ಭಾರತ ಅಂತಹ ಒಂದು ಜಾಗತಿಕ ಕ್ಷಣಕ್ಕಾಗಿ ಕಾಯಬೇಕಿಲ್ಲ. ಭಾರತದಲ್ಲಿ ಸಿನಿಮಾಗಳಿಗೆ ಇರುವ ದೊಡ್ಡ ಇತಿಹಾಸ ಮತ್ತು ಕಥೆಗಳ ವೈವಿಧ್ಯವೇ ಜಾಗತಿಕ ಮಟ್ಟದಲ್ಲಿ ದೊಡ್ಡ ಯಶಸ್ಸು ತಂದುಕೊಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸಿನಿಮಾ ಜಗತ್ತು ಬಹಳ ಹಳೆಯದು ಮತ್ತು ಶ್ರೀಮಂತವಾಗಿದೆ. ಇಲ್ಲಿನ ಕಥೆಗಳು, ಸಂಸ್ಕೃತಿ ಮತ್ತು ವಿಭಿನ್ನ ರೀತಿಯ ಸಿನಿಮಾಗಳು ವಿಶ್ವದ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯ ಹೊಂದಿವೆ ಎಂದು ಸರಾಂಡೋಸ್ ಹೇಳಿದ್ದಾರೆ. ರಣವೀರ್ ಸಿಂಗ್ ಸಿನಿಮಾಗೆ ಮತ್ತೊಂದು ದೊಡ್ಡ ಮೈಲಿಗಲ್ಲು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ‘ಧುರಂಧರ್’ ಇದೀಗ ನೆಟ್‌ಫ್ಲಿಕ್ಸ್‌ನಲ್ಲೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಚಿತ್ರತಂಡಕ್ಕೆ ಮತ್ತೊಂದು ದೊಡ್ಡ ಗೆಲುವಾಗಿದೆ. ರಣವೀರ್ ಸಿಂಗ್ ಅಭಿನಯ, ಆದಿತ್ಯ ಧರ್ ಅವರ ನಿರ್ದೇಶನ ಹಾಗೂ ಚಿತ್ರದ ಕಥಾಹಂದರಕ್ಕೆ ಸಿಕ್ಕಿರುವ ಈ ಪ್ರತಿಕ್ರಿಯೆ ಬಾಲಿವುಡ್‌ನಲ್ಲಿ ಮಾತ್ರವಲ್ಲ, ಭಾರತೀಯ ಸಿನಿಮಾಗಳ ಮೇಲಿನ ಜಾಗತಿಕ ಆಸಕ್ತಿಯನ್ನೂ ಮತ್ತೊಮ್ಮೆ ತೋರಿಸಿದೆ. ಇದನ್ನೂ ಓದಿ : ಶಿವಾನಂದ ನೀಲಣ್ಣವರ್‌ಗೆ ಇಡಿ ಶಾಕ್ – ಎರಡು ದಿನಗಳಿಂದ ತಲಾಶ್‌..!

Related posts

ಕೆಪಿಎಸ್‌ಸಿ ನೇಮಕಾತಿ; 2024ನೇ ಸಾಲಿನ ಈ ಹುದ್ದೆಗಳಿಗೆ ಅರ್ಜಿ ಹಾಕಿರುವವರಿಗೆ ಮಹತ್ವದ ಸೂಚನೆ..!

Kalpana Editor

ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತ; ಆರೋಪಿ ಪುಣ್ಯೇಶ್ ಅರೆಸ್ಟ್‌..!

Kalpana Editor

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಅಭ್ಯಾಸಗಳನ್ನು ಪಾಲಿಸಿ..!

kknewskannada1987@gmail.com