29.2 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿಸಿನಿಮಾ

ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ನಟ ಅಜಿತ್ – ಅಪರೂಪದ ನಡೆ..!

ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಅವರ ಶೈಲಿಯೇ ವಿಭಿನ್ನವಾಗಿದ್ದು, ಸಾಮಾನ್ಯವಾಗಿ ಅವರು ತಮ್ಮ ಸಿನಿಮಾಗಳ ಯಾವುದೇ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ, ಆಡಿಯೋ ಲಾಂಚ್‌ಗೆ ಬರೋದಿಲ್ಲ, ಅಭಿಮಾನಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಎಂಟರ್‌ಟೇನ್ ಮಾಡಲು ಹೋಗುವುದಿಲ್ಲ. ಸ್ಟಾರ್ ಇಮೇಜ್‌ನಿಂದ ಯಾವಾಗಲೂ ದೂರ ಉಳಿಯುವ ಅಜಿತ್ ಕುಮಾರ್‌, ಅವರು ಇತ್ತೀಚೆಗೆ ತಮ್ಮ ಪುಟ್ಟ ಅಭಿಮಾನಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಸದಾ ಸೈಲೆಂಟ್ ಆಗಿರುವ ನಟನ ಈ ಅಪರೂಪದ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಿನಿಮಾ ಹೊರತುಪಡಿಸಿ ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ಅಜಿತ್ ಕುಮಾರ್, ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಸ್ನೇಹಿತನ ಮಕ್ಕಳು ಅಜಿತ್ ಅವರ ದೊಡ್ಡ ಅಭಿಮಾನಿಗಳು. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗಿರುವ ಈ ವಿಡಿಯೋದಲ್ಲಿ, ರೇಸಿಂಗ್ ಡ್ರೆಸ್ ಧರಿಸಿರುವ ಅಜಿತ್ ಹೆಲ್ಮೆಟ್ ಹಿಡಿದುಕೊಂಡು ವಿಡಿಯೋ ಕಾಲ್ ಬಂದಾಗ ಅವರ ಖುಷಿಗೆ ಪಾರವೇ ಇರಲಿಲ್ಲ. ಅಜಿತ್ ಕುಮಾರ್ ಅವರು ತಮ್ಮ ಗೆಳೆಯನ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿದ್ದಾರೆ.

ಮಾತನಾಡುವಾಗ ಅಜಿತ್ ಅವರು ಆ ಇಬ್ಬರು ಮಕ್ಕಳ ದಿನಚರಿ ಮತ್ತು ಓದಿನ ಬಗ್ಗೆ ಅತ್ಯಂತ ಪ್ರೀತಿಯಿಂದ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ‘ಮುಂದಿನ ಬಾರಿ ನಾನು ಖಂಡಿತಾ ನಿಮ್ಮನ್ನು ಖುದ್ದಾಗಿ ಬಂದು ಭೇಟಿ ಮಾಡುತ್ತೇನೆ ಎಂದರು. “ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಜೀವನ ಸುಂದರವಾಗಿರಲಿ” ಎಂದು ಹಾರೈಸಿದ್ದಾರೆ. ಈ ವಿಡಿಯೋ ಕಾಲ್ ಮುಗಿಯುತ್ತಿದ್ದಂತೆ ಆ ಅಣ್ಣ-ತಂಗಿ ಇಬ್ಬರೂ ಸೂಪರ್‌ಸ್ಟಾರ್ ಜೊತೆ ಮಾತನಾಡಿದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ ಎಂದು ತಿಳಿದಿದೆ. ಇದನ್ನೂ ಓದಿ : ಜಿಲ್ಲೆಯಲ್ಲಿ ಮಳೆ ಕೊರತೆ; ಬರಿದಾಗುತ್ತಿದೆ ಜೀವನದಿ ಹೇಮಾವತಿ ಜಲಾಶಯದ ಒಡಲು..!

ಅಭಿಮಾನಿಗಳ ಜೊತೆ ಹೆಚ್ಚು ಸಂಪರ್ಕಕ್ಕೆ ಸಿಗದ ನಟನ ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ವಿಡಿಯೋ ಕೆಳಗೆ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ‘ನೀವೇ ಅತ್ಯಂತ ಅದೃಷ್ಟವಂತ ಹುಡುಗಿ’ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ‘ನಿಮ್ಮ ತಂದೆ ಸಾಕ್ಷಾತ್ ಆ ದೇವರ (ಅಜಿತ್) ಜೊತೆಯೇ ಸ್ನೇಹ ಬೆಳೆಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ‘ಇದು ಗಾಡ್ ಲೆವೆಲ್ ಫ್ಯಾಮಿಲಿ ಫ್ರೆಂಡ್‌ಶಿಪ್’ ಎಂದು ಅಭಿಮಾನಿಗಳು ಅಜಿತ್ ಅವರ ಸರಳತೆಯನ್ನು ಕೊಂಡಾಡುತ್ತಿದ್ದಾರೆ.

90ರ ದಶಕದಿಂದಲೇ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಜಿತ್, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದರೂ, ಅದ್ದೂರಿ ಪ್ರಚಾರದಿಂದ ದೂರವೇ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ರೇಸಿಂಗ್ ಸೀಸನ್‌ನ ಬ್ರೇಕ್ ಸಮಯದಲ್ಲಿ ಮಾತ್ರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2025ರಲ್ಲಿ ಅವರ ನಟನೆಯ ‘ವಿದಾಮುಯರ್ಚಿ’ ಮತ್ತು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳು ತೆರೆಕಂಡಿದ್ದವು. ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಅಜಿತ್, ದುಃಖದ ನಡುವೆಯೂ ಮತ್ತೆ ರೇಸಿಂಗ್ ಟ್ರ್ಯಾಕ್‌ಗೆ ಮರಳಿದ್ದಾರೆ ಎಂದು ಹೇಳಲಾಗಿದೆ.

Related posts

ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ನಾನು ದೆಹಲಿಗೆ ಹೋಗಲ್ಲ – ಯು.ಟಿ ಖಾದರ್

Kalpana Editor

ಭೀಮಾತೀರದಲ್ಲಿ ಸಾಮೂಹಿಕ ಹತ್ಯೆ ಕೇಸ್‌ – 12 ಆರೋಪಿಗಳ ಅರೆಸ್ಟ್‌..!

Kalpana Editor

ಕರ್ನಾಟಕದ 4 ರಾಜ್ಯಸಭೆ, 7 ಪರಿಷತ್ ಸ್ಥಾನಗಳ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ..!

Kalpana Editor