29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಪೊಲೀಸ್ ಕಾನ್‌ಸ್ಟೇಬಲ್‌ ಪರೀಕ್ಷೆ ಗೊಂದಲ; ಪ್ರಿಯಾಂಕ್‌ ರಾಜೀನಾಮೆಗೆ ಸಿಟಿ ರವಿ ಆಗ್ರಹ..!

ಬೆಂಗಳೂರು : ಪೊಲೀಸ್ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆಯಲ್ಲಿ ಉಂಟಾದ ಗೊಂದಲದ ಪರಿಣಾಮ ಬಿಜೆಪಿ ಪರಿಷತ್‌ ಸದಸ್ಯ ಸಿ.ಟಿ ರವಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, OMR ಶೀಟ್ ಗೊಂದಲ ಮತ್ತು ಅಸಮರ್ಥ ವ್ಯವಸ್ಥೆಯಿಂದ ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದ್ದಾರೆ.

ಅಭ್ಯರ್ಥಿಗಳು ನಡೆಸಿರುವ ಪ್ರತಿಭಟನೆ ರಾಜ್ಯ ಸರ್ಕಾರದ ವೈಫಲ್ಯಕ್ಕೆ ನೀಡಿರುವ ಇನ್ನೊಂದು ಸರ್ಟಿಫಿಕೇಟ್. ರಾಜ್ಯದ ಗೃಹ ಸಚಿವರು ಬೇರೆಯವರಿಗೆ ಸರ್ಟಿಫಿಕೇಟ್ ಕೊಡುತ್ತಾ, ತನ್ನ ಇಲಾಖೆಯ ಕೆಲಸವನ್ನು ಕಡೆಗಣಿಸಿದ್ದರಿಂದ ಇಂತಹ ಸ್ಥಿತಿ ಬಂದಿದೆ ಎಂದು ಟೀಕಿಸಿದ್ದಾರೆ. ಗೊಂದಲ ಉಂಟಾದ ಪರೀಕ್ಷಾ ಕೇಂದ್ರಗಳ ಅಭ್ಯರ್ಥಿಗಳಿಗೆ ಯಾವುದೇ ವಿಳಂಬ ಮಾಡದೆ ಮರು ಪರೀಕ್ಷೆ ನಡೆಸಬೇಕು.

ಜೊತೆಗೆ, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ಮುಖ್ಯಮಂತ್ರಿಗಳು ರಾಜ್ಯದ ಯುವಕರಿಗೆ ನ್ಯಾಯ ಒದಗಿಸಬೇಕು. ಈ ಗೊಂದಲಕ್ಕೆ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ : ಅದ್ಧೂರಿ ಕರಗ ಮಹೋತ್ಸವ; ಚಾಮುಂಡೇಶ್ವರಿಗೆ ಮಡಿಲಕ್ಕಿ ಸೇವೆ ಸಲ್ಲಿಸಿದ, ಇಕ್ಬಾಲ್ ಹುಸೇನ್

Related posts

ಹಠಾತ್ ಬಿರುಗಾಳಿ ಸಹಿತ ಮಳೆ; ಏರ್‌ಪೋರ್ಟ್‌ನಲ್ಲಿ ಏರ್‌ಇಂಡಿಯಾ ವಿಮಾನಗಳು ಜಖಂ

Kalpana Editor

ಗೃಹಲಕ್ಷ್ಮಿ ಹಣ ಬಾಕಿ ಬಗ್ಗೆ ಸ್ಪಷ್ಟನೆ ಕೊಡಿ; ಹಂಗಾಮಿ ಸಿಎಂಗೆ ಸುರೇಶ್ ಕುಮಾರ್ ಪತ್ರ

Kalpana Editor

ಭೀಮನ ಮೇಲೆ ಕಲ್ಲು ತೂರಾಟ; ಕಾರ್ಮಿಕನೊಬ್ಬ ವಿರುದ್ಧ ಸ್ಥಳೀಯರು ಗರಂ

Kalpana Editor