28.5 C
ಬೆಂಗಳೂರು
July 13, 2026
kranthikidi.com
ತಾಜಾಸುದ್ದಿದೇಶ

ಗಿನ್ನೀಸ್ ದಾಖಲೆಗಾಗಿ ಮೊಮ್ಮಗಳಿಗೆ ಕಾರು ಚಲಾಯಿಸಲು ಕೊಟ್ಟ ತಾತ; ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ FIR

ಹೈದರಾಬಾದ್ : ಗಿನ್ನೀಸ್ ದಾಖಲೆ ನಿರ್ಮಿಸಲು 6 ವರ್ಷದ ಮೊಮ್ಮಗಳಿಗೆ ಕಾರು ಚಲಾಯಿಸಲು ಬಿಟ್ಟಿದ್ದ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ನೆನ್ನೆ (ಭಾನುವಾರ) ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿಶ್ವದ ಅತ್ಯಂತ ಕಿರಿಯ ಚಾಲಕಿ ಎಂಬ ಗಿನ್ನೀಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಸಬ್ ಇನ್ಸ್‌ಪೆಕ್ಟರ್‌ ಪೂಜಾರಿ ತಿರುಪತಿ ಅವರು ಜನಸಂದಣಿಯುಳ್ಳ ರಸ್ತೆಯಲ್ಲಿ ಕಾರು ಚಲಾಯಿಸಲು ಬಿಟ್ಟಿದ್ದರು ಎಂದು ತಿಳಿದುಬಂದಿದೆ.

ಈ ಸ್ಥಳೀಯರ ಮಾಹಿತಿ ಪ್ರಕಾರ, ತಮ್ಮ ಮಗುವನ್ನು ಕಾರಿನ ಸ್ಟೀರಿಂಗ್ ಮುಂದೆ (ಡ್ರೈವಿಂಗ್ ಸೀಟಿನಲ್ಲಿ) ಕೂರಿಸಿಕೊಂಡು ವಾಹನವನ್ನು ನಿಧಾನವಾಗಿ ಚಲಾಯಿಸುತ್ತಿದ್ದರು. ಇದರಿಂದಾಗಿ ಅಲ್ಲಿ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಲ್ಲಿದ್ದ ವ್ಯಕ್ತಿಯೊಬ್ಬರು ಮಗುವನ್ನು ಹೀಗೆ ಕೂರಿಸಿಕೊಂಡು ಓಡಿಸುವುದು ಅಪಾಯಕಾರಿಯಲ್ಲವೇ? ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಅದಕ್ಕೆ ಸಬ್ ಇನ್ಸ್‌ಪೆಕ್ಟರ್‌ ಕೋಪಗೊಂಡು, ಇದು ನನ್ನ ಇಷ್ಟ, ನನ್ನನ್ನು ಕೇಳಲು ನೀವ್ಯಾರು?” ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಪೊಲೀಸರಿಗೂ ಇದು ಅನ್ವಯಿಸುತ್ತದೆ. ತಕ್ಷಣ ಈ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ಆ ಮಗುವಿನ ಸುರಕ್ಷತೆಯ ಬಗ್ಗೆ ಮಾತ್ರವಲ್ಲದೆ, ಆ ರಸ್ತೆಯಲ್ಲಿ ಓಡಾಡುತ್ತಿದ್ದ ಇತರ ವಾಹನ ಸವಾರರು ಮತ್ತು ಪಾದಚಾರಿಗಳ ಜೀವಕ್ಕೂ ಅಪಾಯವಿದೆ ಎಂದಿದ್ದಾರೆ.

ನರಸಿಂಗಿ ಪೊಲೀಸರು ಆ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನರ ಜೀವಕ್ಕೆ ಅಪಾಯ ತಂದೊಡ್ಡುವುದು ಮತ್ತು ಕಾನೂನುಬಾಹಿರವಾಗಿ ಡ್ರೈವಿಂಗ್ ಮಾಡಲು ಬಿಟ್ಟಿರುವುದಕ್ಕಾಗಿ ಬಿಎನ್‌ಎಸ್ ಸೆಕ್ಷನ್ 180 ಹಾಗೂ ಮೋಟರ್ ವಾಹನ ಕಾಯ್ದೆ 184 ಅಡಿಯಲ್ಲಿ ಕೇಸ್ ದಾಖಲಾಗಿದೆ. ವಿಚಾರಣೆ ವೇಳೆ ಆ ಅಧಿಕಾರಿ, ಅದು ಆಟೋಮ್ಯಾಟಿಕ್ ಕಾರ್ ಆಗಿದ್ದರಿಂದ ಕಾರು ನನ್ನ ನಿಯಂತ್ರಣದಲ್ಲೇ ಇತ್ತು.

ಅಲ್ಲದೇ, ತನ್ನ ಮೊಮ್ಮಗಳಿಗೆ ಗಿನ್ನೆಸ್ ರೆಕಾರ್ಡ್ ಮಾಡಲು ತರಬೇತಿ ನೀಡುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ತೆಲಂಗಾಣದ ಡಿಜಿಪಿ ಸಿ.ವಿ. ಆನಂದ್ ಅವರು, ಆರೋಪಿ ಸಬ್ ಇನ್ಸ್‌ಪೆಕ್ಟರ್‌ ನನ್ನು ತಕ್ಷಣ ಕೆಲಸದಿಂದ ಅಮಾನತು ಮಾಡುವಂತೆ ಸೈಬರಾಬಾದ್ ಪೊಲೀಸ್ ಕಮಿಷನರ್‌ಗೆ ಆದೇಶಿಸಿದ್ದಾರೆ. ಅಲ್ಲದೆ, ಇಲಾಖಾ ಮಟ್ಟದ ತನಿಖೆಗೂ ಆದೇಶ ನೀಡಲಾಗಿದೆ. ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ಆರತಿಯಲ್ಲಿ ಇನ್ಮುಂದೆ ಕರ್ನಾಟಕ ವಿಐಪಿಗಳಿಗೂ ಚಾನ್ಸ್ – ಸಿಎಂ ಮಹತ್ವದ ಘೋಷಣೆ..!

Related posts

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಬಹಳ ಗಂಭೀರ ವಿಷಯ; ಕರ್ನಾಟಕ ಹೈಕೋರ್ಟ್​​

Kalpana Editor

‘ಡಿಕೆಶಿ ಸಿಎಂ ಹುದ್ದೆಗೆ ಅರ್ಹರು’: ಶುರುವಾಯ್ತು ಪೋಸ್ಟರ್ ಅಭಿಯಾನ..!

Kalpana Editor

ಮತ್ತಷ್ಟು ಯಶಸ್ಸು ನಿಮ್ಮದಾಗಲಿ; ಡಿಕೆ ಶಿವಕುಮಾರ್‌ಗೆ ಸೋನಿಯಾ ಗಾಂಧಿ ಶುಭ ಹಾರೈಕೆ..!

Kalpana Editor