26.4 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

‘ನನ್ನ ದೇವರನ್ನೇ ಕಳೆದುಕೊಂಡೆ’: ತಾಯಿ ನೆನೆದು ಗಳ ಗಳತೆ ಅತ್ತ ಹೆಚ್​​.ಡಿ.ರೇವಣ್ಣ

ಹಾಸನ : ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಾಯಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಡೆಯಲಿರುವ ಜಾಗವನ್ನು ಶಾಸಕ ಹೆಚ್​​.ಡಿ. ರೇವಣ್ಣ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ಅಮ್ಮನನ್ನು ನೆನೆದು ಅವರು ಭಾವುಕರಾಗಿದ್ದಾರೆ.

ತಾಯಿ ಚೆನ್ನಮ್ಮ ನನಗೆ ದೇವತೆ ಸಮಾನ. ನನ್ನ ದೇವರನ್ನೇ ಕಳೆದುಕೊಂಡೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಎಷ್ಟೋ ಜನರಿಗೆ ಅನ್ನ ಹಾಕಿದ ಕೈಅವರದು. ಕೊನೆಯದಾಗಿ ತಿರುಪತಿ ಪ್ರಸಾದ ಕೊಟ್ಟು ಮಾತನಾಡಿಸಿದ್ದೆ. ವೈದ್ಯರು ನಿನ್ನೆ ಬೆಳಗ್ಗೆ ಚೆನ್ನಮ್ಮ ಗುಣಮುಖ ಆಗ್ತಾರೆ ಎಂದಿದ್ದರು. ಆದರೆ ಅವರು ಬದುಕಿಬರಲಿಲ್ಲ ಎಂದು ಹೇಳುತ್ತಲೇ ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ರೇವಣ್ಣ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗದ ಹಿರಿಯ ನಟಿ ಸರೋಜಾ ಶ್ರೀಶೈಲನ್ ಇನ್ನಿಲ್ಲ..!

Related posts

ಪ್ರಧಾನಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಪ್ರಾಮಾಣಿಕತೆಯಿಂದ ಕೂಡಿಲ್ಲ – ವಾಂಗ್ಚುಕ್ ಪತ್ನಿ ವಾಗ್ದಾಳಿ..!

Kalpana Editor

ʼನನಗಿನ್ನೂ 15 ವರ್ಷ, ನನ್ನನ್ನು ಕ್ಷಮಿಸಿʼ – ಪ್ರಧಾನಿ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಕ್ಕೆ, ಅಪ್ರಾಪ್ತೆ ಕ್ಷಮೆಯಾಚನೆ..!

Kalpana Editor

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ; ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ..!

Kalpana Editor