20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ನಾನು ರೈತರ ಪರ, ಮಂಡ್ಯದವಳು; ಕರ್ನಾಟಕ ಬಂದ್‌ಗೆ ನಟಿ ರಮ್ಯಾ ಬೆಂಬಲ

ಬೆಂಗಳೂರು : ಆಗಸ್ಟ್ 13ರ ಅಖಂಡ ಕರ್ನಾಟಕ ಬಂದ್‌ಗೆ ನಟಿ ರಮ್ಯಾ ಸಾಥ್ ನೀಡಿದ್ದಾರೆ. ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದಾರೆ. ಕಾವೇರಿ ನೀರಿನ ಹೋರಾಟ ತೀವ್ರಗೊಳ್ಳುತ್ತಿರುವ ನಡುವೆಯೇ, ಕಾವೇರಿ ಕೊಳ್ಳದಲ್ಲಿ ಮಳೆಯಾಗುತ್ತಿದೆ.

ಆಗಸ್ಟ್ 13ರಂದು ಕರೆ ನೀಡಲಾಗಿರುವ ಅಖಂಡ ಕರ್ನಾಟಕ ಬಂದ್‌ಗೆ ನಟಿ ರಮ್ಯಾ ಬೆಂಬಲ ಘೋಷಿಸಿದ್ದಾರೆ. ನಾನು ಮಂಡ್ಯದವಳು. ಕಾವೇರಿ ವಿಚಾರ ಬಂದಾಗ ರೈತರ ಪರವಾಗಿ ನಿಲ್ಲುವುದು ನನ್ನ ಜವಾಬ್ದಾರಿ. ನನ್ನ ಬೆಂಬಲ ಖಂಡಿತ ಇರುತ್ತದೆ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ.

ಕಾವೇರಿ ವಿಚಾರವಾಗಿ ಈ ಹಿಂದೆಯೂ ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕಾವೇರಿ ನೀರಿನ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಚರ್ಚೆಯಾಗುತ್ತಿದ್ದಾಗಲೂ ಅಲ್ಲಿದ್ದೆ ಎಂದು ರಮ್ಯಾ ಹೇಳಿದ್ದಾರೆ. ರೈತರ ಹಿತದ ಪ್ರಶ್ನೆ ಬಂದಾಗ ಯಾವುದೇ ಹಿಂಜರಿಕೆಯಿಲ್ಲದೆ ಬೆಂಬಲ ನೀಡುತ್ತೇನೆ. ಇದನ್ನು ಮತ್ತೆ ಹೇಳಬೇಕಾದ ಅಗತ್ಯವೇ ಇಲ್ಲ. ನಾನು ಯಾವಾಗಲೂ ರೈತರ ಪರವಾಗಿಯೇ ಇರುತ್ತೇನೆ ಎಂದಿದ್ದಾರೆ.

ಕಾವೇರಿ ವಿಚಾರ ಮತ್ತೆ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಯ ಕೇಂದ್ರವಾಗಿರುವ ಬೆನ್ನಲ್ಲೇ, ನಟಿ ರಮ್ಯಾ ಅವರ ಈ ಹೇಳಿಕೆ ಹೋರಾಟಕ್ಕೆ ಮತ್ತಷ್ಟು ಬಲ ನೀಡುವ ಸಾಧ್ಯತೆ ಮೂಡಿಸಿದೆ. ಆಗಸ್ಟ್ 13ಕ್ಕೆ ಬಂದ್ ನಡೆದರೆ ನಟಿ ರಮ್ಯಾ ಬೀದಿಗಿಳಿದು ಕಾವೇರಿ ಪರ ಹೋರಾಟ ಮಾಡುತ್ತಾರಾ? ಕೇವಲ ಬೆಂಬಲ ನೀಡುತ್ತಾರಾ ಅಂತ ಕಾದು ನೋಡಬೇಕಿದೆ. ರಮ್ಯಾರ ಬೆಂಬಲವನ್ನ ಕನ್ನಡಪರ ಹೋರಾಟಗಾರರು ಸ್ವಾಗತಿಸಿದ್ದು, ಬಂದ್‌ಗೆ ಮತ್ತಷ್ಟು ಬಲ ಸಿಕ್ಕಿದೆ. ಇದನ್ನೂ ಓದಿ : ಕೆಮಿಕಲ್ ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆ; ಉಸಿರುಗಟ್ಟಿ ಕಾರ್ಮಿಕರ ದುರ್ಮರಣ..!

Related posts

ಫುಟ್‌ಪಾತ್ ತೆರವಿಗೆ ಜನರು ಸಹಕಾರ ಕೊಡಬೇಕು – ಡಿಸಿಎಂ ಜಿ. ಪರಮೇಶ್ವರ್‌

Kalpana Editor

ಸಿಎಂ ಆದ ಡಿಕೆಶಿ ಮೊದಲ ದಿನವೇ ಸಚಿವರಿಗೆ ಎಚ್ಚರಿಕೆ..!

Kalpana Editor

ಕಲ್ಲು ಕ್ವಾರಿ ದುರಂತ; ನಿಯಮ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ – ಸಿಎಂ ಡಿ ಕೆ ಶಿವಕುಮಾರ್

Kalpana Editor