23.5 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜ್ಯ

ರಾಜ್ಯ ಮಹಿಳಾ ನಿಲಯ, ಸ್ವೀಕಾರ ಕೇಂದ್ರದಲ್ಲಿ ವ್ಯವಸ್ಥೆ ಸುಧಾರಣೆ; ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರಿಂದ ಮಹಿಳಾ ನಿಲಯ ಹಾಗೂ ಸ್ವೀಕಾರ ಕೇಂದ್ರಕ್ಕೆ ಮೂರನೇ ಬಾರಿ ಭೇಟಿಯಾಗಿದೆ. ನಿವಾಸಿಗಳ ಸುರಕ್ಷತೆ, ಆರೋಗ್ಯ, ಆಹಾರ ಮತ್ತು ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿದ್ದಾರೆ. ಹಿಂದಿನ ಭೇಟಿಯಲ್ಲಿ ಕಂಡುಬಂದ ಕುಡಿಯುವ ನೀರು, ಬಿಸಿ ನೀರು, ಟಿವಿ ಹಾಗೂ ಸಿಬ್ಬಂದಿ ಕಿರುಕುಳದ ದೂರುಗಳ ಕುರಿತು ಕ್ರಮ, ಪ್ರಸ್ತುತ ಕೇಂದ್ರದಲ್ಲಿ 39 ಮಂದಿ ನಿವಾಸಿಗಳು ಇದ್ದು, ಅವರಲ್ಲಿ 31 ಮಂದಿಗೆ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿವೆ ಎಂದರು.

ನಿವಾಸಿಗಳಿಗೆ ಬಿಸಿ ನೀರು, ಕುಡಿಯುವ ನೀರು ಹಾಗೂ ಜುಲೈಯಿಂದ ವಾರಕ್ಕೊಮ್ಮೆ ಮಾಂಸಾಹಾರ ನೀಡಲಾಗುತ್ತಿದೆ. ಪೌಷ್ಟಿಕಾಂಶದ ದೃಷ್ಟಿಯಿಂದ ಪ್ರತಿದಿನ ಮೊಟ್ಟೆ ಹಾಗೂ ಕಬ್ಬಿಣಾಂಶದ ಮಾತ್ರೆ ನೀಡುವಂತೆ ಸೂಚನೆ ಮಾಡಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ; ಆಸ್ಪತ್ರೆಗೆ ಕರೆದೊಯ್ಯಲು ವಿಶೇಷ ವಾಹನ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು. ಬಿಡುಗಡೆಯಾದ ಬಳಿಕವೂ ಎರಡು ವರ್ಷಗಳ ಕಾಲ ಪುನರ್ವಸತಿ ಮತ್ತು ಸುರಕ್ಷತೆ ಮೇಲ್ವಿಚಾರಣೆ ಮುಂದುವರಿಕೆಯಾಗಿದೆ.

ಮಹಿಳೆಯರ ನೋಂದಣಿ ಮತ್ತು ಬಿಡುಗಡೆ ದಾಖಲೆ ಪರಿಶೀಲನೆ ವೇಳೆ ಕೆಲವು ದಾಖಲೆಗಳಲ್ಲಿ ಗೊಂದಲ ಪತ್ತೆಯಾಗಿದೆ. ಹಾಜರಾತಿ, ರಜೆ, ಚಿಕಿತ್ಸೆ, ಬಿಡುಗಡೆ ಸೇರಿದಂತೆ ಸಂಪೂರ್ಣ ಮಾಹಿತಿಯ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಿವಾಸಿಗಳ ಪ್ರವೇಶದಿಂದ ಬಿಡುಗಡೆಯ ನಂತರದ ಮೇಲ್ವಿಚಾರಣೆಯವರೆಗೆ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಸೂಚನೆ. SOP ಪ್ರಕಾರ ಮನೆ ಕೆಲಸಕ್ಕೆ ತೆರಳಲು ಅವಕಾಶವಿದ್ದರೂ, ಕಳೆದ 5 ವರ್ಷಗಳಿಂದ ಈ ವ್ಯವಸ್ಥೆ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಡಿಸಿ ನೇತೃತ್ವದ ವ್ಯವಸ್ಥಾಪನಾ ಸಮಿತಿಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆಯಾಗಿದೆ. 2000ರಿಂದ 2019ರವರೆಗಿನ ಸ್ವೀಕಾರ ಕೇಂದ್ರದ ದಾಖಲಾತಿ ಮತ್ತು ಬಿಡುಗಡೆ ವಿವರಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ : ಹೈಕೋರ್ಟ್‌ನಲ್ಲೂ ದರ್ಶನ್‌ಗೆ ಹಿನ್ನಡೆ; ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ..!

Related posts

ಬಹುದಿನಗಳ ಕನಸು ನನಸು; ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್

kknewskannada1987@gmail.com

ಮಾರುವೇಷ ಧರಿಸಿ, ಬಸ್‌ಗಳಲ್ಲಿ ಸಚಿವ ಬೈರತಿ ಸುರೇಶ್‌ ಚೆಕ್ಕಿಂಗ್‌..!

Kalpana Editor

ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ..!

Kalpana Editor