29.9 C
ಬೆಂಗಳೂರು
October 10, 2026
kranthikidi.com
ತಾಜಾಸುದ್ದಿಸಿನಿಮಾ

‘ಜಂತರ್ ಮಂತರ್ ಪ್ರತಿಭಟನೆಯಲ್ಲಿ ಇದ್ದ ಬಹುತೇಕರು ಜೆನ್ ಜಿ ಅಲ್ಲ’ – ಕಂಗನಾ ರಣಾವತ್

ಪ್ರತಿಭಟನಾ ನಿರತರನ್ನು ‘ಜನರೇಷನ್ ಗಟರ್’ ಎಂದು ಕರೆದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಇದೀಗ ತಮ್ಮ ಹೇಳಿಕೆಗೆ ಮತ್ತೊಂದು ಸ್ಪಷ್ಟನೆ ನೀಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಬಗ್ಗೆ ಕಂಗನಾ ಅವರು ಮೊದಲಿನಿಂದಲೂ ಒಂದಲ್ಲಾ ಒಂದು ರೀತಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈಗ ಅವರು ತಮ್ಮ ಮೊದಲಿನ ಹೇಳಿಕೆಗಳಿಗೆ ಸಮರ್ಥನೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಂಗನಾ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಈ ದೇಶದ ಯುವಕರ ಬಗ್ಗೆ ಮಾತನಾಡುತ್ತಿದ್ದೀರಾ? ಜೆನ್ ಜಿ ಜನಸಂಖ್ಯೆ ಸುಮಾರು 30ರಿಂದ 35 ಕೋಟಿ ಇದೆ. ಆದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೆರೆದಿದ್ದ 10 ಸಾವಿರ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಶಬಾನಾ ಆಜ್ಮಿ ವಯಸ್ಸಿನವರಾಗಿದ್ದರು. ಅಲ್ಲಿ ವಿವಿಧ ವಯೋಮಾನದ ಜನರಿದ್ದರು. ಕೇವಲ 2 ಸಾವಿರದಷ್ಟು ಮಾತ್ರ ಜೆನ್ ಜಿ ಯುವಕರಿದ್ದರು. ಹಾಗಿರುವಾಗ ಇದನ್ನು ಇಡೀ ದೇಶದ ಜೆನ್ ಜಿ ನಡೆಸಿದ ಪ್ರತಿಭಟನೆ ಎಂದು ಹೇಗೆ ಕರೆಯುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಕಂಗನಾ ರಣಾವತ್ ಅವರು, ‘ನಾನು ಅಲ್ಲಿ ನೆರೆದಿದ್ದ ನಿರ್ದಿಷ್ಟ ಗುಂಪನ್ನು ಉದ್ದೇಶಿಸಿ ಮಾತ್ರ ಹೇಳಿಕೆ ನೀಡಿದ್ದೆ. ಇಡೀ ಯುವ ಪೀಳಿಗೆಯನ್ನು ನಿಂದಿಸಿರುವ ಒಂದೇ ಒಂದು ಸಾಲನ್ನು ತೋರಿಸಿ ಎಂದು ನಿಮಗೆ ಬಹಿರಂಗ ಸವಾಲು ಹಾಕುತ್ತೇನೆ. ನನ್ನ ವಿರುದ್ಧ ಅನಗತ್ಯ ಅಜೆಂಡಾ ಚಲಾಯಿಸಬೇಡಿ, ನಾನು ಕೂಡ ಯುವತಿಯಾಗಿದ್ದು, ಯುವಕರ ವಿರುದ್ಧವಿಲ್ಲ’ ಎಂದು ಹೇಳಿದ್ದಾರೆ. ಜುಲೈ 20 ರಂದು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ 75 ವರ್ಷದ ಹಿರಿಯ ನಟಿ ಶಬಾನಾ ಆಜ್ಮಿ ಭಾಗವಹಿಸಿದ್ದರು. ಪ್ರತಿಭಟನಾಕಾರರೊಂದಿಗೆ ಟ್ರಕ್‌ನಲ್ಲಿ ಪ್ರಯಾಣಿಸುತ್ತಿರುವ ಹಾಗೂ ಬ್ಯಾರಿಕೇಡ್‌ಗಳನ್ನು ದಾಟುತ್ತಿರುವ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಟ ಪ್ರಕಾಶ್ ರಾಜ್ ಕೂಡ ಅವರೊಂದಿಗಿದ್ದರು.

ಕಳೆದ ತಿಂಗಳು ಜೆನ್ ಜಿ ಪ್ರತಿಭಟನೆಯ ವಿಡಿಯೋಗಳನ್ನು ಟೀಕಿಸಿದ್ದ ಕಂಗನಾ, “ನನ್ನ ಜೀವನದಲ್ಲಿ ಇಷ್ಟೊಂದು ಅಸಹ್ಯಕರ ವಾತಾವರಣವನ್ನು ಎಲ್ಲೂ ನೋಡಿರಲಿಲ್ಲ. ಪ್ರತಿಭಟನೆಯ ರೀಲ್ಸ್‌ಗಳು ವಾಂತಿ ಬರುವಂತಿವೆ. ಅವರು ಬಳಸುತ್ತಿರುವ ಭಾಷೆ ತೀರಾ ಅಸಭ್ಯವಾಗಿದೆ. ನಾನು ಅವರನ್ನು ಜನರೇಷನ್ ಗಟಾರ ಎಂದು ಕರೆಯುತ್ತೇನೆ. ವ್ಯವಸ್ಥೆಗೆ ಕೊಡುಗೆ ನೀಡಲು ಅವರ ಬಳಿ ಏನೂ ಇಲ್ಲ. ಅವರು ಓದಿನಲ್ಲೂ ಮುಂದಿಲ್ಲ’ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ : ರಾಜ್ಯ ಮಹಿಳಾ ನಿಲಯ, ಸ್ವೀಕಾರ ಕೇಂದ್ರದಲ್ಲಿ ವ್ಯವಸ್ಥೆ ಸುಧಾರಣೆ; ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ

Related posts

ನೂತನ ಸಚಿವರ ಪ್ರಮಾಣ ವಚನಕ್ಕೆ ಸಜ್ಜಾದ ಲೋಕಭವನ..!

kknewskannada1987@gmail.com

ಲೈಂಗಿಕ ದೌರ್ಜನ್ಯ ಪ್ರಕರಣ; ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ದೋಷಿ

kknewskannada1987@gmail.com

ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಇಂದು ಸಲೀಂ ಅಹಮದ್ ಆಯ್ಕೆ..!

kknewskannada1987@gmail.com