29.2 C
ಬೆಂಗಳೂರು
June 10, 2026
kranthikidi.com
ಆರೋಗ್ಯತಾಜಾಸುದ್ದಿ

ಮೈಗ್ರೇನ್ ಸಮಸ್ಯೆಗೂ, ಹೃದಯದ ಆರೋಗ್ಯಕ್ಕೂ ಸಂಬಂಧವಿದೆಯೇ..?!

ಈಗೀನ ದಿನಗಳಲ್ಲಿ ಹಲವರಿಗೆ ಪದೇಪದೇ ಮೈಗ್ರೇನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯ ತಲೆನೋವು ಎಂದು ಇದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇದೀಗ ಹೊಸ ಅಧ್ಯಯನವೊಂದು ಮೈಗ್ರೇನ್ ಮತ್ತು ಹೃದಯದ ಆರೋಗ್ಯದ ನಡುವೆ ಸಂಬಂಧ ಇರಬಹುದೆಂಬ ಸೂಚನೆ ನೀಡಿದೆ. ಸಾಮಾನ್ಯವಾಗಿ ಮೈಗ್ರೇನ್ ಅನ್ನು ತಲೆನೋವಿನ ಸಮಸ್ಯೆಯಾಗಿ ಪರಿಗಣಿಸಲಾಗುತ್ತದೆ.

ಆದರೆ ಇದರ ಪರಿಣಾಮ ಕೇವಲ ತಲೆನೋವಿನಲ್ಲೇ ಸೀಮಿತವಾಗಿರುವುದಿಲ್ಲ. ಮೈಗ್ರೇನ್ ಮತ್ತು ದೇಹದ ಇತರ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧವನ್ನು ತಿಳಿಯಲು ಹಲವು ಅಧ್ಯಯನಗಳು ನಡೆದಿವೆ. ಸ್ಪ್ರಿಂಗರ್ ನೇಚರ್ ಪ್ರಕಟಿಸಿರುವ ಅಧ್ಯಯನದ ಪ್ರಕಾರ, ಪದೇಪದೇ ಮೈಗ್ರೇನ್ ಸಮಸ್ಯೆ ಇರುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿರಬಹುದು.

ಮೈಗ್ರೇನ್ ವೇಳೆ ತೀವ್ರ ತಲೆನೋವು, ವಾಂತಿ ಬರುವ ಭಾವನೆ, ಬೆಳಕು ಅಥವಾ ಶಬ್ದಕ್ಕೆ ಹೆಚ್ಚು ಕಿರಿಕಿರಿಯಾಗುವುದು. ಮತ್ತೆ ಕೆಲವರಲ್ಲಿ ಇದು ದಿನನಿತ್ಯದ ಜೀವನ ಮತ್ತು ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಜಿ ಈ ರೀತಿಯ ಲಕ್ಷಣ ಕಂಡುಬಂದಾಗ ಅದನ್ನು ನಿರ್ಲಕ್ಷ್ಯ ಮಾಡದೆ ಸರಿಯಾಗಿ ಆರೈಕೆ ಮಾಡಿಕೊಳ್ಳುವುದು ಒಳ್ಳೆಯದು.

ಅಧ್ಯಯನದಲ್ಲಿ ಸಂಶೋಧಕರು ಮೈಗ್ರೇನ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸಿದ್ದಾರೆ. ಮೈಗ್ರೇನ್ ಇರುವವರಲ್ಲಿ ಕಾರ್ಡಿಯೋವಾಸ್ಕುಲರ್ ಡಿಸೀಸ್, ಕೊರೊನರಿ ಹೃದಯರೋಗ ಮತ್ತು ಇಸ್ಕೆಮಿಕ್ ಸ್ಟ್ರೋಕ್ ಅಪಾಯ ಹೆಚ್ಚಿರುವುದು ಕಂಡುಬಂದಿದೆ. ವಿಶೇಷವಾಗಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ. ಜೊತೆಗೆ ಧೂಮಪಾನ, ಒಬೆಸಿಟಿ, ಹೈ ಬ್ಲಡ್ ಪ್ರೆಶರ್ ಅಥವಾ ಇತರ ಹೃದಯ ಸಂಬಂಧಿ ಅಪಾಯಕಾರಕ ಅಂಶಗಳಿದ್ದರೆ ಅಪಾಯ ಇನ್ನಷ್ಟು ಹೆಚ್ಚಾಗಬಹುದು. ಇದನ್ನೂ ಓದಿ : ಶಿಕ್ಷಕರ ಕಿರುಕುಳ ಆರೋಪ; 4ನೇ ಮಹಡಿಯಿಂದ ಬಿದ್ದು, ವಿದ್ಯಾರ್ಥಿ ಆತ್ಮಹತ್ಯೆ..!

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು? – ತಲೆನೋವು ಸಡನ್ ಆಗಿ ತುಂಬಾ ತೀವ್ರವಾಗುವುದು, ಮಾತಾಡಲು ತೊಂದರೆ, ದೇಹದ ಒಂದು ಭಾಗದಲ್ಲಿ ದುರ್ಬಲತೆ, ತಲೆ ಸುತ್ತುವುದು, ಕಣ್ಣು ಮಸುಕಾಗುವುದು ಅಥವಾ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮೈಗ್ರೇನ್ ದೈನಂದಿನ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದರೆ ಅಥವಾ ಔಷಧಿಗಳ ನಂತರವೂ ಸಮಸ್ಯೆ ಮುಂದುವರಿದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮವಾಗಿದೆ.

ಮೈಗ್ರೇನ್ ನಿಯಂತ್ರಣಕ್ಕೆ ಏನು ಮಾಡಬೇಕು? – ಸಾಕಷ್ಟು ನಿದ್ರೆ, ನಿಯಮಿತ ಜೀವನಶೈಲಿ ಮತ್ತು ಒತ್ತಡ ನಿಯಂತ್ರಣ ಮೈಗ್ರೇನ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಮೈಗ್ರೇನ್ ಹೆಚ್ಚಿಸುವ ಕಾರಣಗಳನ್ನು ಗುರುತಿಸುವುದು ಕೂಡ ಮುಖ್ಯ. ಉದಾಹರಣೆಗೆ ತೀವ್ರ ಬೆಳಕು, ನಿದ್ರಾಹೀನತೆ ಅಥವಾ ಕೆಲವು ಆಹಾರ ಪದಾರ್ಥಗಳು ಸಮಸ್ಯೆಯನ್ನು ಹೆಚ್ಚಿಸಬಹುದು. ಪರ್ಯಾಯವಾಗಿ ಸಾಕಷ್ಟು ನೀರು ಕುಡಿಯುವುದು, ಸಮತೋಲನಯುತ ಆಹಾರ ಸೇವಿಸುವುದು ಮತ್ತು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ. ಸಮಸ್ಯೆ ಮುಂದುವರಿದರೆ ತಜ್ಞರ ಸಲಹೆ ಪಡೆಯುವುದು ಅಗತ್ಯವಾಗಿದೆ.

Related posts

ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಿಲ್ಲ; ಶೋಭಾ ಕರಂದ್ಲಾಜೆ

Kalpana Editor

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮಲಯಾಳಂ ಸಲೀಂ ಕುಮಾರ್ ಇನ್ನಿಲ್ಲ..!

Kalpana Editor

ಶಾಂತಿ ಮಾತುಕತೆ ಬೆನ್ನಲ್ಲೇ ಟ್ರಂಪ್​ಗೆ ಮೊಜ್ತಬಾ ಖಮೇನಿ ಎಚ್ಚರಿಕೆ..!

Kalpana Editor