22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಬೆಂಗಳೂರಲ್ಲಿ ಮತ್ತೆ ಜೆಸಿಬಿ ಘರ್ಜನೆ; ಕೆ.ಆರ್.‌ ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ..!

ಬೆಂಗಳೂರು : ಇಂದು ಕೆ.ಆರ್ ಮಾರ್ಕೆಟ್‌ನಲ್ಲಿ ಜೆಬಿಸಿಗಳು ಘರ್ಜನೆ ಮಾಡಿದ್ದು, ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ 150 ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ‌. ಅನಧಿಕೃತವಾಗಿ ಅಂಗಡಿ ನಿರ್ಮಾಣ ಮಾಡಿ ಬಾಡಿಗೆಗೆ ಬಿಡುವ ಮಾಫಿಯಾ ಕಡಿವಾಣಕ್ಕೆ ಕೇಂದ್ರ ನಗರ ಪಾಲಿಕೆ ಮುಂದಾಗಿದೆ.

ಬೆಂಗಳೂರಿನ ಕೇಂದ್ರ ನಗರ ಪಾಲಿಕೆಯ ಕೆ.‌ಆರ್ ಮಾರ್ಕೆಟ್‌ನಲ್ಲಿ ತೆರವು ಕಾರ್ಯಾಚರಣೆ ಭರ್ಜರಿಯಾಗಿ ನಡೆದಿದೆ. ಕೆ.ಆರ್ ಮಾರ್ಕೆಟ್ ಪ್ಲೈಓವರ್ ಕೆಳಗಡೆ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ಸುಮಾರು 150 ಅಂಗಡಿಗಳನ್ನ ತೆರವು ಮಾಡುವಂತಹ ಕಾರ್ಯ ಕೇಂದ್ರ ನಗರ ಪಾಲಿಕೆ ಮಾಡಿದೆ. ಹಲವು ವರ್ಷಗಳಿಂದ ಅನಧಿಕೃತವಾಗಿ ಅಂಗಡಿಗಳ ನಿರ್ಮಾಣ ಮಾಡಿ ವ್ಯಾಪಾರ ಮಾಡಲಾಗುತ್ತಿದೆ. ಕೋರ್ಟ್‌ನಿಂದ ಪರ್ಮಿಷನ್ ಪಡೆದು ತೆರವು ಮಾಡುವಂತಹ ಕೆಲಸ‌ ನಡೆಯುತ್ತಿದೆ‌.

15 ದಿನಗಳ ಹಿಂದೆಯೇ ಅನಧಿಕೃತ ಅಂಗಡಿ ನಿರ್ಮಾಣ ಮಾಡಿದ್ದವರಿಗೆ ತೆರವು ಮಾಡುತ್ತೇವೆ ಎಂದು ಕೇಂದ್ರ ನಗರ ಪಾಲಿಕೆ ಮಾಹಿತಿ ನೀಡಿದೆ. ಆದರೆ, ಅಂಗಡಿಗಳನ್ನು ತೆರವು ಮಾಡಿರಲಿಲ್ಲ. ಇಂದು ತೆರವು ಮಾಡುವಂತಹ ಕೆಲಸ ಆಗುತ್ತಿದೆ. 2 ದಿನದಲ್ಲಿ ತೆರವು ಮುಗಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಧಿಕೃತ ಅಂಗಡಿಗಳನ್ನ ನಿರ್ಮಾಣ ಮಾಡಿ ಬಾಡಿಗೆಗೆ ಬಿಡುವ ಮಾಫಿಯಾ ಇದೆ. ಅಂತಹ ಮಾಫಿಯಾಗೆ ಕಡಿವಾಣ ಹಾಕುತ್ತೇವೆ. ಯಾವುದೇ ಕಾರಣಕ್ಕೂ ಅನಧಿಕೃತ ಅಂಗಡಿಗಳ ತೆರವು ಮಾಡುವ ಕೆಲಸ ನಿಲ್ಲಲ್ಲ. 150 ಅಂಗಡಿಗಳನ್ನು ತೆರವು ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ, ಈ ಕೆಲಸ ಮಾಡಿ ನೆಮ್ಮದಿಯ ನಿದ್ರೆ ಮಾಡುವಿರಿ..!

Related posts

ಹೈಕಮಾಂಡ್‌ಗೆ ಸಿದ್ದರಾಮಯ್ಯ ಚೆಕ್‌ಮೇಟ್ – ಸಿಎಂ ಒಪ್ಪಿಸಲು ಜಾರ್ಜ್‌ಗೆ ರಾಹುಲ್‌ ಟಾಸ್ಕ್‌..!

Kalpana Editor

ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿ ಎಂದು ನಿಖಿಲ್ ಖಡಕ್ ಎಚ್ಚರಿಕೆ..!

Kalpana Editor

ರಾಜ್ಯಸಭೆ ಚುನಾವಣೆ ಚರ್ಚೆಗೆ ಸಿಎಂ ದೆಹಲಿಗೆ; ಸಚಿವ ಈಶ್ವರ ಖಂಡ್ರೆ

Kalpana Editor