28.5 C
ಬೆಂಗಳೂರು
October 7, 2026
kranthikidi.com
ತಾಜಾಸುದ್ದಿರಾಜ್ಯ

ಕರ್ನಾಟಕ ಬಂದ್ ಗೊಂದಲದ ಗೂಡು; ಕನ್ನಡ ಸಂಘಟನೆಗಳ ಮಧ್ಯೆ ಮೂಡಿದ ಭಿನ್ನಮತ, ವಾಟಾಳ್ ಬಿಗಿಪಟ್ಟು..!

ಬೆಂಗಳೂರು : ಆಗಸ್ಟ್ 13ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಆಚರಣೆ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಹಾಗೂ ದ್ವಂದ್ವ ನಿಲುವು ವ್ಯಕ್ತವಾಗಿದೆ. ಬಂದ್ ನಡೆಸಲೇಬೇಕೆಂದು ವಾಟಾಳ್ ನಾಗರಾಜ್ ಪಟ್ಟು ಹಿಡಿದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಪ್ರಮುಖ ಸಂಘಟನೆಗಳು ಹಿಂದೆ ಸರಿದಿರುವುದರಿಂದ ಬಂದ್ ಯಶಸ್ಸಿನ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ತಮಿಳುನಾಡು ಕ್ಯಾತೆಗೆ ಈಗಾಗಲೇ 10 ಟಿಎಂಸಿಗೂ ಹೆಚ್ಚು ನೀರು ಹರಿಸಲಾಗಿದ್ದು, ಕೇಳಿದ್ದಕ್ಕಿಂತ ಹೆಚ್ಚಿನ ನೀರು ಹರಿದುಹೋಗಿದೆ. ಅಲ್ಲದೆ ರಾಜ್ಯದಲ್ಲಿಯೂ ಉತ್ತಮ ಮಳೆಯಾಗಿದೆ. ನೀರು ಹರಿದು ಹೋದ ಮೇಲೆ ಈಗ ಬಂದ್ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಇದು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟುಮಾಡುತ್ತದೆ” ಎನ್ನುವುದು ಬಂದ್ ವಿರೋಧಿಸುತ್ತಿರುವ ಸಂಘಟನೆಗಳ ವಾದವಾಗಿದೆ.

ಪ್ರವೀಣ್ ಶೆಟ್ಟಿ ಹಾಗೂ ಶಿವರಾಮೇಗೌಡ ಬಣಗಳು ಬಂದ್ ನಿರ್ಧಾರದಿಂದ ಸಂಪೂರ್ಣ ಯು-ಟರ್ನ್ ಹೊಡೆದಿದ್ದು, ಬಂದ್ ವ್ಯರ್ಥ ಎಂಬ ತೀರ್ಮಾನಕ್ಕೆ ಬಂದಿವೆ. ಈ ಗೊಂದಲಗಳ ನಡುವೆ, ಇಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ವಾಟಾಳ್ ನಾಗರಾಜ್ (ಕನ್ನಡ ಒಕ್ಕೂಟ) ಬಂದ್ ನಡೆಸಲೇಬೇಕೆಂದು ಬಿಗಿಪಟ್ಟು ಹಿಡಿದಿದ್ದರೆ ಪ್ರವೀಣ್ ಶೆಟ್ಟಿ ಹಾಗೂ ಶಿವರಾಮೇಗೌಡ ಬಣ ಯು-ಟರ್ನ್ ಹೊಡೆದಿದ್ದು ಬಂದ್ ವ್ಯರ್ಥ ಎಂದು ನಿರ್ಧಾರ ಎಂದು ಹೇಳಿವೆ. ಹೋಟೆಲ್ ಸಂಘಟನೆ, ಓಲಾ-ಉಬರ್ ನೈತಿಕ ಬೆಂಬಲ ನೀಡಿವೆ.

ಬಂದ್‌ ಘೋಷಣೆಯಾದ ಸಮಯದಲ್ಲೇ ಕರವೇ ನಾರಾಯಣಗೌಡ ಅವರು ಆಗಸ್ಟ್ 13 ರ ಬಂದ್​ಗೆ ಬೆಂಬಲ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪ್ರಕಟಿಸುವ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ದೆಡೆ ವಾಟಾಳ್ ನಾಗರಾಜ್ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರೆ, ಮತ್ತೊಂದೆಡೆ ಪ್ರಮುಖ ಕನ್ನಡ ರಕ್ಷಣಾ ವೇದಿಕೆಗಳು ಬೆಂಬಲ ಹಿಂತೆಗೆದುಕೊಂಡಿರುವುದು ಬಂದ್ ಹೋರಾಟವನ್ನು ಕ್ಷೀಣಿಸುವಂತೆ ಮಾಡಿದೆ. ಪ್ರಮುಖ ಸಂಘಟನೆಗಳ ಬೆಂಬಲವಿಲ್ಲದೆ ಆಗಸ್ಟ್ 13ರ ಬಂದ್ ಸಂಪೂರ್ಣ ಯಶಸ್ವಿಯಾಗುವುದು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ, ಪತ್ನಿಗೆ ಕೊಲೆ ಬೆದರಿಕೆ..!

Related posts

ಸ್ವಾತಂತ್ರ್ಯ ದಿನಾಚರಣೆ ವೇಳೆ ಶಾಲೆಯ ಕಾಂಕ್ರೀಟ್‌ ಛಾವಣಿ ಕುಸಿತ – ಓರ್ವ ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

kknewskannada1987@gmail.com

ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್ ರಾಜೀನಾಮೆ..!

kknewskannada1987@gmail.com

ಇಂದಿನಿಂದ 23ನೇ ಆವೃತ್ತಿಯ FIFA ವಿಶ್ವಕಪ್ ಆರಂಭ..!

Kalpana Editor