August 25, 2026
kranthikidi.com
ತಾಜಾಸುದ್ದಿರಾಜ್ಯ

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆ.17ರವರೆಗೆ ವಿಸ್ತರಣೆ..!

ಬೆಂಗಳೂರು : ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ಬಂದಿದ್ದು, ಇದೀಗ ಚುನಾವಣಾ ಆಯೋಗ ಆ.8ಕ್ಕೆ ಇದ್ದ ಮನೆ ಮನೆ ಪರಿಶೀಲನೆಯನ್ನು ಆಗಸ್ಟ್ 17ರವರೆಗೂ ವಿಸ್ತರಣೆ ಮಾಡಿ ಆದೇಶಿಸಿದೆ. ಇದರ ಮದ್ಯೆ ಆತಂಕಪಡುವಂತಹ ವಿಚಾರ ಬಯಲಾಗಿದೆ. ಬೆಂಗಳೂರಿನಲ್ಲಿ 49 ಲಕ್ಷ ಮತದಾರರನ್ನ ಮತದಾರರ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ 1.3 ಕೋಟಿ ಮತದಾರರು ಇದ್ದು, ಅದರಲ್ಲಿ ಡೆತ್ ಅದವರು, ಶಿಫ್ಟ್ ಆದವರು, ಈಗಾಗಲೇ ಎನ್ರೋಲ್ ಆಗಿರುವರು, ಶಾಶ್ವತವಾಗಿ ಬೇರೆ ಕಡೆ ಹೋಗಿರವವರನ್ನು 49 ಲಕ್ಷ ಅಂತಾ ಗುರುತಿಸಲಾಗಿದೆ. ಬೆಂಗಳೂರಿನಲ್ಲಿ 49 ಲಕ್ಷ ಮತದಾರರು ಹೆಸರು ಡೀಲಿಟ್ ಆಗುವ ಸಾಧ್ಯತೆ ಇದ್ದು, ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಎಡಿಎಸ್‌ಎಸ್‌ಒ ಅಂತಾ ಗುರುತು ಮಾಡಿರೋ ಪ್ರಕರಣಗಳನ್ನ ಮಾರ್ಕ್ ಮಾಡಿ ಮಹಜರು ಮಾಡೋದಕ್ಕೆ ಸೂಚನೆ ನೀಡಲಾಗಿದೆ.

ಜೊತೆಗೆ ಎರಡೆರಡು ಬಾರಿ ಮಾರ್ಕಿಂಗ್ ಮಾಡಲು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇದ್ದ ವಿದ್ಯಾರ್ಥಿಗಳು, ಸೈನಿಕರು, ಬೇರೆ ರಾಜ್ಯದಿಂದ ವೃತ್ತಿಗೆ ಅಂತಾ ಬಂದವರು ತುಂಬಾ ಮಂದಿ ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಆಗಾಗಿ ಮತದಾರರು ತುಂಬಾ ಜನ ಡೀಲಿಟ್ ಆಗ್ತಾ ಇದ್ದಾರೆ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ ರಾವ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ : ಕರ್ನಾಟಕ ಬಂದ್ ಗೊಂದಲದ ಗೂಡು; ಕನ್ನಡ ಸಂಘಟನೆಗಳ ಮಧ್ಯೆ ಮೂಡಿದ ಭಿನ್ನಮತ, ವಾಟಾಳ್ ಬಿಗಿಪಟ್ಟು..!

Related posts

ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಠರಾವು ರದ್ದು..!

Kalpana Editor

ಹಠಾತ್ ಬಿರುಗಾಳಿ ಸಹಿತ ಮಳೆ; ಏರ್‌ಪೋರ್ಟ್‌ನಲ್ಲಿ ಏರ್‌ಇಂಡಿಯಾ ವಿಮಾನಗಳು ಜಖಂ

Kalpana Editor

ಮೊಟ್ಟೆ ದರ ಏರಿಕೆ; ಇದು ಸರ್ಕಾರಿ ಶಾಲೆಯ ʻಒಂದು ಮೊಟ್ಟೆಯ ಕಥೆʼ..!

Kalpana Editor