August 26, 2026
kranthikidi.com
ತಾಜಾಸುದ್ದಿರಾಜ್ಯ

ಬೆಂಗಳೂರಿಗೆ ಕೆಂಪೇಗೌಡರ ಅಪ್ರತಿಮ ಕೊಡುಗೆ, ಬಿ.ವೈ.ವಿಜಯೇಂದ್ರ

ಬೆಂಗಳೂರು : ಬೆಂಗಳೂರು ನಗರವನ್ನು ರಾಷ್ಟ್ರಮಟ್ಟ ಮಾತ್ರವಲ್ಲದೇ, ಅಂತರರಾಷ್ಟ್ರೀಯ ಮಟ್ಟದಲ್ಲೂ ನೆನಪು ಮಾಡಲು ನಾಡಪ್ರಭು ಕೆಂಪೇಗೌಡರೇ ಕಾರಣ ಎನ್ನಲು ಹೆಮ್ಮೆ ಎನಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಇಂದು ಸದಾಶಿವನಗರದ ಕೆಂಪೇಗೌಡ ಗಡಿ ಗೋಪುರ ಉದ್ಯಾನವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ಸಮಾಜಸೇವಕ ಆರ್.ಪಿ.ರವಿಶಂಕರ್ ಅವರ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, 517 ವರ್ಷಗಳ ನಂತರದಲ್ಲೂ ನಾಡಪ್ರಭು ಕೆಂಪೇಗೌಡರನ್ನು ನಾವು ನೆನಪಿಸುತ್ತಿದ್ದೇವೆ ಎಂದರೆ, ಅವರು ಬೆಂಗಳೂರು ನಗರ- ನಾಡಿಗೆ ಕೊಟ್ಟ ಕೊಡುಗೆಯನ್ನು ಊಹಿಸಲು ಸಾಧ್ಯ ಎಂದು ನುಡಿದರು.

ನಾಡಪ್ರಭು ಕೆಂಪೇಗೌಡರ ಹೆಸರು ಕೇವಲ ಕರ್ನಾಟಕ, ದೇಶ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ಚರ್ಚೆ ಅಗುವಂತೆ ಆಗಬೇಕೆಂಬ ಸದುದ್ದೇಶದಿಂದ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಧ್ಯಯನ ಕೇಂದ್ರಕ್ಕೆ 50 ಕೋಟಿ ಕೊಟ್ಟಿದ್ದರು. ಪ್ರತಿಮೆ ನಿರ್ಮಾಣಕ್ಕೆ ಹಣ ಕೊಟ್ಟದ್ದಲ್ಲದೇ, ಪಾರ್ಕ್ ನಿರ್ಮಿಸಲು ತಿಳಿಸಿದ್ದರು. ಅಷ್ಟೇ ಅಲ್ಲ; ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹೆಸರು ಇಡುವ ಚರ್ಚೆ ಆಗುವ ಸಂದರ್ಭದಲ್ಲಿ ಈ ವಿಮಾನನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರೇ ಶ್ರೇಷ್ಠ ಎಂದು ತೀರ್ಮಾನ ತೆಗೆದುಕೊಂಡವರು ಆಗಿನ ಸಿಎಂ ಯಡಿಯೂರಪ್ಪನವರು ಎಂದು ವಿವರಿಸಿದರು.

ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಪ್ರೇರೇಪಣೆ ನಮ್ಮೆಲ್ಲರ ಮೇಲಿರಲಿ ಎಂದು ಆಶಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಮಾನನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದ್ದ ವಿಚಾರವನ್ನು ಪ್ರಸ್ತಾಪಿಸಿ ಮೆಚ್ಚುಗೆ ಸೂಚಿಸಿದರು.

ಯಡಿಯೂರಪ್ಪನವರು ಎರಡನೇ ಬಾರಿ ಅವರು ಸಿಎಂ ಆಗಿದ್ದಾಗ ವಿಮಾನನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು. 108 ಅಡಿಯ ಪ್ರತಿಮೆಗೆ 65 ಕೋಟಿ, ಥೀಮ್ ಪಾರ್ಕಿಗೆ 20 ಕೋಟಿ, ನಾಡಪ್ರಭು ಕೆಂಪೇಗೌಡರ ವೀರಸಮಾಧಿಗೆ ಜಮೀನು ಸ್ವಾಧೀನಕ್ಕೆ 10 ಕೋಟಿ ನೀಡಿದ್ದರು ಎಂದು ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಕೇಂದ್ರಕ್ಕೆ ಅವಶ್ಯಕ ಹಣ ಬಿಡುಗಡೆ ಮಾಡಿದ್ದರು ಎಂದು ತಿಳಿಸಿದರು. ಪ್ರತಿ ಗ್ರಾಮದಿಂದ ಮೃತ್ತಿಕೆಯನ್ನೂ ತರಲಾಗಿತ್ತು. ಇದು ಯಡಿಯೂರಪ್ಪನವರ ನೇತೃತ್ವ; ಮಾತ್ರವಲ್ಲದೇ ಹೃದಯವಂತಿಕೆಯ ಕೆಲಸ ಎಂದು ತಿಳಿಸಿದರು. ರಕ್ಷಣಾ ವೇದಿಕೆಯ ಅಧ್ಯಕ್ಷ ಶಿವರಾಮೇಗೌಡ, ಮಂಜುನಾಥ್, ಡಾ.ರಾಜೇಶ್, ಜಯಪಾಲ್, ಸುಮಂಗಲಾ ಕೇಶವ್ ಮೊದಲಾದ ಪ್ರಮುಖರು ವೇದಿಕೆಯಲ್ಲಿದ್ದರು. ಇದನ್ನೂ ಓದಿ : ಕೋತಿಗಳಿಗೆ ಹೆದರಿ ಬೆಟ್ಟದಿಂದ ಕಾಲುಜಾರಿ ಬಿದ್ದು ಮಹಿಳೆ ಸಾವು..!

Related posts

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್ – ಆಡಿಯೋ ಸಂಚಲನ..!

Kalpana Editor

ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಹೆಡ್​​ಫೋನ್ ಧರಿಸಿ ಬಂದ ಪವಿತ್ರಾ ಗೌಡ, ಜಡ್ಜ್ ತರಾಟೆ..!

kknewskannada1987@gmail.com

ಗೃಹಲಕ್ಷ್ಮಿ ಯೋಜನೆ ಹಗರಣ ಆರೋಪ; ಸಿಬಿಐ ತನಿಖೆಗೆ ಸಿಟಿ ರವಿ ಪಟ್ಟು..!

Kalpana Editor