July 23, 2026
kranthikidi.com
ತಾಜಾಸುದ್ದಿದೇಶ

ರಾಕೆಟ್‌ ವಿಕ್ರಮ್‌-1 ಉಡಾವಣೆ ಯಶಸ್ವಿ – ನಭಕ್ಕೆ ಜಿಗಿದ ಮೊದಲ ಖಾಸಗಿ ರಾಕೆಟ್‌

ಆಂಧ್ರಪ್ರದೇಶ : ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಕಕ್ಷೀಯ ದರ್ಜೆಯ ರಾಕೆಟ್ ವಿಕ್ರಮ್-1, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಯಾಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ನಿರ್ಮಿಸಿದ ವಿಕ್ರಮ್ -1 ಮೂರು ಘನ-ಇಂಧನ ಹಂತಗಳು ಮತ್ತು ದ್ರವ ಕಕ್ಷೀಯ ಹೊಂದಾಣಿಕೆಯಿಂದ ಚಾಲಿತವಾಗಿದೆ. ಇದನ್ನು ಬೆಳಗ್ಗೆ 11:30 ಕ್ಕೆ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆಯಲ್ಲಿ ವಿಳಂಬವಾಯಿತು. ತಾಂತ್ರಿಕ ಸಮಸ್ಯೆ ಸರಿಪಡಿಸಿದ ಬಳಿಕ ಮಧ್ಯಾಹ್ನ 12:05 ಕ್ಕೆ ಉಡಾವಣೆ ಮಾಡಲಾಯಿತು.

‘ಮಿಷನ್ ಆಗಮನ್’ ಎಂದು ಹೆಸರಿಸಲಾದ ಈ ಪರೀಕ್ಷಾರ್ಥ ಉಡಾವಣೆಯು ದೇಶದ ವಾಣಿಜ್ಯ ಬಾಹ್ಯಾಕಾಶ ವಲಯಕ್ಕೆ ಒಂದು ಐತಿಹಾಸಿಕ ಮೈಲಿಗಲ್ಲು. ಇದನ್ನು ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಕಾರ್ಯಗತಗೊಳಿಸಿದೆ. ಪ್ರಧಾನಿ ಮೋದಿ ಕೈಬರಹದಲ್ಲಿ ‘ವಂದೇ ಮಾತರಂ’ ಎಂದು ಬರೆದಿರುವ ಪೋಸ್ಟ್‌ಕಾರ್ಡ್‌ ಅನ್ನೂ ವಿಕ್ರಮ್-1 ಬಾಹ್ಯಾಕಾಶಕ್ಕೆ ಕೊಂಡೊಯ್ದಿದೆ. ಕಂಪನಿಯ ತಂಡ, ಹೂಡಿಕೆದಾರರು, ನೀತಿ ನಿರೂಪಕರು, ವಿಶ್ವದಾದ್ಯಂತದ ಬೆಂಬಲಿಗರ ಶುಭಾಶಗಳನ್ನು ಸಹ ರಾಕೆಟ್‌ ಹೊತ್ತೊಯ್ದಿದೆ.

ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ವಿಕ್ರಮ್ -1 ರ ಚೊಚ್ಚಲ ಕಕ್ಷೆಯ ಉಡಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ದೇಶದ ಬಾಹ್ಯಾಕಾಶ ಪ್ರಯಾಣದಲ್ಲಿ ಐತಿಹಾಸಿಕ ಮೈಲುಗಲ್ಲು. ಭಾರತದ ಯುವಕರ ಪ್ರತಿಭೆ ಮತ್ತು ಉದ್ಯಮಶೀಲತಾ ಮನೋಭಾವದ ಪ್ರತಿಬಿಂಬ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ : ಟೀಂ ಇಂಡಿಯಾದ ಅಂಡರ್-19 ವಿಶ್ವಕಪ್ ವಿಜೇತ ಸ್ಟಾರ್‌ ಅರೆಸ್ಟ್‌…!

Related posts

ಸಕಲ ದೋಷ ನೋಡಿಕೊಂಡು ಡಿಕೆಶಿ ಮುನ್ನಡೆಯಬೇಕಾಗುತ್ತೆ; ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆ..!

Kalpana Editor

ಪುತ್ರ ಯತೀಂದ್ರ ಸಂಪುಟ ಸೇರ್ಪಡೆಗೆ ಕೊನೆಗೂ ಒಪ್ಪಿದ ಸಿದ್ದರಾಮಯ್ಯ

Kalpana Editor

ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್‌ ರಾಜ್‌ ಹೆಸರು ತಳುಕು – ನಟ ಸ್ಪಷ್ಟನೆ..!

Kalpana Editor