28.4 C
ಬೆಂಗಳೂರು
October 5, 2026
kranthikidi.com
ತಾಜಾಸುದ್ದಿರಾಜ್ಯ

ಕೊಲೆ ಆರೋಪಿ ಪವಿತ್ರಾಗೌಡ ಜೈಲಲ್ಲಿ ಬೇರೆ ಸೆಲ್‌ಗೆ ಶಿಫ್ಟ್‌..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪವಿತ್ರಾಗೌಡ ರನ್ನ ಬ್ಯಾರಕ್ ಶಿಫ್ಟ್ ಮಾಡಲಾಗಿದೆ. ಇಬ್ಬರ ಬ್ಯಾರಕ್‌ನಲ್ಲಿದ್ದ ಆರೋಪಿಯನ್ನು 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ. ಮೂಲಕ ಪವಿತ್ರಗೌಡಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಶಾಕ್ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ಕೋರ್ಟ್‌ನಲ್ಲಿದೆ. ಟ್ರಯಲ್ ನಡೆಯುವಾಗ ಎಲ್ಲಾ ಆರೋಪಿಗಳು ವಿಸಿ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಬೇಕು. ಕಳೆದ ಮೂರು ದಿನಗಳ ಹಿಂದೆ ಎಲ್ಲಾ ಆರೋಪಿಗಳು ಹಾಜರಾದ ಬಳಿಕ ತಡವಾಗಿ ಪವಿತ್ರಾಗೌಡ ಹಾಜರಾಗಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಷ್ಟೇ ಅಲ್ಲದೇ ಪವಿತ್ರಾಗೌಡ ವಿಸಿಯಲ್ಲಿ ಹಾಜರಾಗಿದ್ದಾಗ ಕಿವಿಯಲ್ಲಿ ಏರ್‌ಬಡ್ಸ್ ಬಳಕೆ ಮಾಡಿದ್ದರು. ನ್ಯಾಯಾಧೀಶರು ಮಹಿಳಾ ಬ್ಯಾರಕ್‌ನಲ್ಲಿ ಏರ್‌ಬಡ್ಸ್ ಬಳಕೆ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಏರ್‌ಬಡ್ಸ್ ಬಳಕೆ ಮಾಡಿರುವ ಬಗ್ಗೆ ಜೈಲು ಅಧಿಕಾರಿಗಳಿಂದ ನ್ಯಾಯಾಧೀಶರು ಸ್ಪಷ್ಟನೆ ಕೇಳಿದ್ದರು. ಈ ಎಲ್ಲಾ ಕಾರಣಗಳಿಂದ ಪವಿತ್ರಾಗೌಡ ಬ್ಯಾರಕ್‌ನ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ : ಇಂದು ಕೊಡಗಿಗೆ ಸಿಎಂ ಡಿಕೆಶಿ ಭೇಟಿ; ನಲಪಾಡ್ ವಿವಾಹ ಸಮಾರಂಭದಲ್ಲಿ ಭಾಗಿ ಸಾಧ್ಯತೆ..!

Related posts

ಮುಂಬೈನಲ್ಲಿ ಭಾರೀ ಮಳೆಯ ಅಬ್ಬರ; ಜನಜೀವನ ಅಸ್ತವ್ಯಸ್ತ..!

Kalpana Editor

ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ; ನಾಲ್ವರ ಅರೆಸ್ಟ್‌..!

Kalpana Editor

ಡಿ.ಕೆ.ಶಿವಕುಮಾರ್ ರಾಜ್ಯದ 25ನೇ ಮುಖ್ಯಮಂತ್ರಿಗಳಾಗಿ ಪದಗ್ರಹಣ ಹಿನ್ನೆಲೆ; ಸಾವಿರಾರು ಜನರಿಗೆ ಅನ್ನದಾನ ಹಾಗೂ 50 ಸಾವಿರ ಸಿಹಿ ವಿತರಣೆ..!

Kalpana Editor