28.4 C
ಬೆಂಗಳೂರು
October 5, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

15,000 ರೂ. ಲಾಭ,75 ಲಕ್ಷ ಹೂಡಿಕೆ ಮಾಡಿ ಕೈಸುಟ್ಟುಕೊಂಡ ಯುವಕ..!

ದಾವಣಗೆರೆ : ಸೈಬರ್‌ ವಂಚಕರು ಹಾಕಿದ ಗಾಳಕ್ಕೆ ಜಗಳೂರು ತಾಲೂಕಿನ ಗೌರಿಪುರ ಗ್ರಾಮದ ಯುವಕನೊಬ್ಬ 75 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ. ಸೈಬರ್‌ ವಂಚಕರು ಯವುವಕನ ಬಳಿ ಹಣ ಹೂಡಿಕೆ ಮಾಡಿದರೆ ಅಧಿಕ ಬಡ್ಡಿ ನೀಡುವುದಾಗಿ ನಂಬಿಸಿದ್ದಾರೆ. ಅದರಂತೆ ‌5,000 ರೂ. ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ.

ಬಳಿಕ 15,000 ರೂ. ಲಾಭ ನೀಡಿದ್ದಾರೆ. ಇದರಿಂದ ಖುಷಿಯಾದ ಯುವಕ 75 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದಾನೆ. ಆದರೆ ಯಾವುದೇ ಲಾಭ ಬಂದಿಲ್ಲ. ವಂಚಕರು ಸಂಪರ್ಕಕ್ಕೂ ಸಿಕ್ಕಿಲ್ಲ. ಬಳಿಕ ಆತನಿಗೆ ವಂಚನೆಗೊಳಗಾಗಿರುವುದು ಅರಿವಾಗಿದೆ. ಈ ಸಂಬಂಧ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ಯುವಕ ಆನ್‌ಲೈನ್ ಗೇಮ್ ವ್ಯಾಮೋಹಿಯಾಗಿದ್ದ. ಸಾಮಾಜಿಕ ಜಾಲತಾಣಗಳ ಜಾಹೀರಾತಿನ ಆಕರ್ಷಣೆಗೆ ಒಳಗಾಗಿ ಹಣ ಹೂಡಿಕೆ ಮಾಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ : ಕೊಲೆ ಆರೋಪಿ ಪವಿತ್ರಾಗೌಡ ಜೈಲಲ್ಲಿ ಬೇರೆ ಸೆಲ್‌ಗೆ ಶಿಫ್ಟ್‌..!

Related posts

ವಂಡರ್‌ಲಾ ರೆಸಾರ್ಟ್‌ನಲ್ಲಿರೋ ‘ಕೈ’ ಶಾಸಕರನ್ನು ಕರೆತರಲು ಬಸ್‌ಗಳ ವ್ಯವಸ್ಥೆ..!

Kalpana Editor

ಹಾಲೇತರ ಪನೀರ್ ನಿಷೇಧ; ನಿಯಮ ಉಲ್ಲಂಘಿಸಿದರೆ ಜೈಲು..!

kknewskannada1987@gmail.com

ಆಟವಾಡ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ಮಗು – ಸ್ಥಿತಿ ಗಂಭೀರ..!

Kalpana Editor