22.2 C
ಬೆಂಗಳೂರು
August 6, 2026
kranthikidi.com
ಆರೋಗ್ಯತಾಜಾಸುದ್ದಿದೇಶ

ಹಾಲೇತರ ಪನೀರ್ ನಿಷೇಧ; ನಿಯಮ ಉಲ್ಲಂಘಿಸಿದರೆ ಜೈಲು..!

ಮುಂಬೈ : ನಾವು ಸೇವಿಸುವ ಆಹಾರ ಎಷ್ಟು ಕಲಬೆರಕೆ ಆಗುತ್ತಿದೆ ಎಂದರೆ ಯಾವುದು ಅಸಲಿ, ಯಾವುದು ನಕಲಿ ಎಂದು ಗುರುತಿಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇದೀಗ ಹಾಲೇತರ ಪನೀರ್ ಅಥವಾ ಅನಲಾಗ್ ಪನೀರ್ ಬಳಕೆಯ ಮೇಲೆ ನಿಷೇಧ ಹೇರಿದೆ. ನೋಡಲು ಹಾಲಿನ ಪನೀರ್ ರೀತಿಯೇ ಇರುವ ಅನಲಾಗ್ ಪನೀರ್ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ಆರೋಗ್ಯದ ಕಾಳಜಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಛತ್ತೀಸ್‌ಗಢದ ನಂತರ ಇಂತಹ ನಿಷೇಧವನ್ನು ಹೇರಿದ 2ನೇ ರಾಜ್ಯ ಮಹಾರಾಷ್ಟ್ರವಾಗಿದೆ. ಮಹಾರಾಷ್ಟ್ರ ರಾಜ್ಯದಾದ್ಯಂತ ಅನಲಾಗ್ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಾಣಿಕೆ, ಸಗಟು ಮತ್ತು ಚಿಲ್ಲರೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧ ಹೇರಿದರೂ ಅನಲಾಗ್ ಪನೀರ್ ಬಳಸುವವರಿಗೆ ಆಹಾರ ಭದ್ರತೆ ಮತ್ತು ಮಾನದಂಡಗಳ ಕಾಯ್ದೆ 2006ರ ಅಡಿಯಲ್ಲಿ ಅಪರಾಧದ ತೀವ್ರತೆಗೆ ಅನುಗುಣವಾಗಿ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ.

ಸಾಮಾನ್ಯ ಉಲ್ಲಂಘನೆ : 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಸಲಾಗುತ್ತದೆ. ಅಸುರಕ್ಷಿತ ಆಹಾರದಿಂದ ಸಾವು ಸಂಭವಿಸಿದರೆ: ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಗ್ರಾಹಕರಿಗೆ ವಂಚನೆ : ಅನಲಾಗ್ ಪನೀರ್ ಅನ್ನು ಅಸಲಿ ಹಾಲಿನ ಪನೀರ್ ಎಂದು ನಂಬಿಸಿ ಮಾರಾಟ ಮಾಡುವುದು ಗ್ರಾಹಕರನ್ನು ಹಾದಿತಪ್ಪಿಸುವ ಮತ್ತು ಕಾನೂನುಬಾಹಿರ ವ್ಯಾಪಾರ ಜಾಲಕ್ಕೆ ಸೇರುತ್ತದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಎಚ್ಚರಿಸಿದೆ.

ಏನಿದು ‘ಅನಲಾಗ್’ ಪನೀರ್? : ಅನಲಾಗ್ ಪನೀರ್ ಎಂಬುದು ಸಾಂಪ್ರದಾಯಿಕ ಹಾಲಿನ ಕೊಬ್ಬಿನ (ಮಲೈ) ಬದಲಿಗೆ ಸಸ್ಯಜನ್ಯ ಎಣ್ಣೆ (ಪಾಮ್ ಆಯಿಲ್), ಸ್ಟಾರ್ಚ್ ಹಾಗೂ ಇತರ ರಾಸಾಯನಿಕಗಳನ್ನು ಬಳಸಿ ತಯಾರಿಸುವ ಹಾಲೇತರ ಪನೀರ್ ಉತ್ಪನ್ನವಾಗಿದೆ. ಆಹಾರ ಭದ್ರತಾ ಪ್ರಾಧಿಕಾರದ (FSSAI) ನಿಯಮಾವಳಿಗಳ ಪ್ರಕಾರ, ಪನೀರ್ ಅನ್ನು ಕೇವಲ ಹಾಲಿನಿಂದ ಮಾತ್ರ ತಯಾರಿಸಬೇಕು.

ಅದರಲ್ಲಿ ಯಾವುದೇ ಪಿಷ್ಟ (ಸ್ಟಾರ್ಚ್) ಅಥವಾ ಹಾಲೇತರ ಕೊಬ್ಬನ್ನು ಸೇರಿಸುವಂತಿಲ್ಲ. FSSAI ಅನಲಾಗ್ ಪನ್ನೀರ್ ಮಾರಾಟಕ್ಕೆ ಅವಕಾಶ ನೀಡುತ್ತದೆಯಾದರೂ, ಅದನ್ನು ‘ಅನಲಾಗ್’ ಎಂದೇ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ. ಆದರೆ, ಹೆಚ್ಚಿನ ಹೋಟೆಲ್ ಹಾಗೂ ವ್ಯಾಪಾರಿಗಳು ಇದನ್ನು ಅಸಲಿ ಪನೀರ್ ಎಂದೇ ಮಾರಿ ವಂಚಿಸುತ್ತಿದ್ದರು.

ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಅನಲಾಗ್ ಪನೀರ್ ನಿಷೇಧಿಸುವಂತೆ ಶಾಸಕರು ಒತ್ತಾಯಿಸಿದ್ದರು. ಪ್ರಸ್ತುತ ಜುಲೈ 30ರ ಆದೇಶದ ಮೂಲಕ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಮೇ ತಿಂಗಳಿನಿಂದ ಮಹಾರಾಷ್ಟ್ರದಾದ್ಯಂತ ನಕಲಿ ಹಾಲು ಮತ್ತು ಪನೀರ್ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ (FDA) ಭಾರಿ ದಾಳಿಗಳನ್ನು ನಡೆಸುತ್ತಿದೆ. ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಸುಮಾರು 1,400 ಕೆಜಿ ನಕಲಿ ಪನೀರ್ ಅನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ : ವಿರಾಮದ ಬಳಿಕ ಕಮ್‌ಬ್ಯಾಕ್ ಆದ ನಟ ವಿಕ್ರಂ ರವಿಚಂದ್ರನ್

Related posts

ನಾಳೆಯಿಂದ (ಜು.13) ಬರಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ..!

Kalpana Editor

ಮಾಜಿ ಸಿಎಂ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ನಿಧನ..!

Kalpana Editor

ಕಾವೇರಿ ನೀರಿನ ವಿಚಾರ; ಕಾನೂನು ತಜ್ಞರು, ವಿರೋಧ ಪಕ್ಷಗಳ ಸಲಹೆ ಬಳಿಕ ಮುಂದಿನ ತೀರ್ಮಾನ: ಸಿಎಂ ಡಿಕೆ ಶಿವಕುಮಾರ್

Kalpana Editor