29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಇನ್ಮುಂದೆ ಬಸ್ ಟಿಕೆಟ್‌ಗಳ ಮೇಲೂ ಬರಲಿದೆ ಜಾಹೀರಾತು..!

ಬೆಂಗಳೂರು : ನೌಕರರ ವೇತನ ಪರಿಷ್ಕರಣೆ ಹಾಗೂ ಬಾಕಿ ಪಾವತಿಸಲು ಹಣವಿಲ್ಲದೆ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಂ‌ಟಿಸಿ, ಸಾಲದ ಸುಳಿಯಿಂದ ಹೊರಬರಲು ಇದೀಗ ಹೊಸ ಆದಾಯದ ಮೂಲ ಹುಡುಕಿದೆ. ಈಗಾಗಲೇ ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸುತ್ತಿರುವ ನಿಗಮ, ಈಗ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೇಲೂ ಜಾಹೀರಾತು ಮುದ್ರಿಸಲು ಟೆಂಡರ್ ಆಹ್ವಾನಿಸಿದೆ.

ಪ್ರತಿದಿನ ಸುಮಾರು 6,275 ಬಸ್‌ಗಳಲ್ಲಿ 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಬೃಹತ್ ನೆಟ್‌ವರ್ಕ್ ಬಳಸಿಕೊಂಡು ಒಂದು ವರ್ಷದ ಅವಧಿಗೆ ಟಿಕೆಟ್ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗಿದೆ. ಬಿಎಂಟಿಸಿ ಸದ್ಯ ವಾರ್ಷಿಕವಾಗಿ ಜಾಹೀರಾತುಗಳಿಂದ 57.48 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಈ ಹೊಸ ಯೋಜನೆಯಿಂದ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಪ್ರಯಾಣಿಕರ ಆಗ್ರಹ ಆದಾಯ ಕ್ರೋಡೀಕರಣಕ್ಕೆ ಇದು ಒಳ್ಳೆಯ ನಿರ್ಧಾರ. ಆದರೆ ಟಿಕೆಟ್‌ಗಳ ಮೇಲೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಜಾಹೀರಾತುಗಳಿರಲಿ. ಗುಟ್ಕಾ, ಪಾನ್ ಮಸಾಲಾ, ಮದ್ಯ ಅಥವಾ ಯಾವುದೇ ಅಶ್ಲೀಲ ಜಾಹೀರಾತುಗಳನ್ನು ಹಾಕಬೇಡಿ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಈ ಬೇಡಿಕೆಗೆ ಪೂರಕವಾಗಿ ತಂಬಾಕು, ಮಾದಕ ದ್ರವ್ಯ ಹಾಗೂ ಅಶ್ಲೀಲ ವಸ್ತುಗಳ ಜಾಹೀರಾತುಗಳಿಗೆ ನಿಗಮ ಕಡ್ಡಾಯ ನಿಷೇಧ ಹೇರಿದೆ. ಒಟ್ಟಿನಲ್ಲಿ, ನೌಕರರ ಬೇಡಿಕೆ ಈಡೇರಿಸಲು ಪರದಾಡುತ್ತಿರುವ ಬಿಎಂಟಿಸಿಗೆ ಈ ಟಿಕೆಟ್ ಜಾಹೀರಾತು ತಂತ್ರ ಕೈಹಿಡಿಯಲಿದೆಯೇ ಎಂದು ಕಾದುನೋಡಬೇಕಿದೆ.

Related posts

ಮಾನ ಹರಾಜು ಹಾಕಿದ ಬೆಂಗಳೂರು ಪೊಲೀಸರು; PSI ಸೇರಿ ಮೂವರ ಅರೆಸ್ಟ್‌…!

Kalpana Editor

ಕರಾವಳಿಯಲ್ಲಿ ಭಾರೀ ಮಳೆ – ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ನುಗ್ಗಿದ ನೀರು

Kalpana Editor

ಶಾಸಕ ಎನ್‌ವೈ ಗೋಪಾಲಕೃಷ್ಣಗೆ ತಪ್ಪಿದ ಮಂತ್ರಿಗಿರಿ; ಬೆಂಬಲಿಗರ ಆಕ್ರೋಶ..!

kknewskannada1987@gmail.com