29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನ, ಪೂಜೆಗೆ ನಿರ್ಬಂಧ..!

ಕಾರವಾರ : ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇಗುಲದ ಮಹಾಗಣಪತಿ ಗುಡಿಯಲ್ಲಿ ಇನ್ನುಮುಂದೆ ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ ದರ್ಶನ ಪಡೆಯುವಂತಿಲ್ಲ. ಅಲ್ಲದೆ, ನೇರವಾಗಿ ಪೂಜೆ, ಪಂಚಾಮೃತ ಅಭಿಷೇಕ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಗಣಪತಿ ಮೂರ್ತಿಯಲ್ಲಿ ಸವಕಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಸುಧಾ ತಳವಾರ ತಿಳಿಸಿದ್ದಾರೆ.

ಸಾವಿರಾರು ಭಕ್ತರು ಪ್ರತಿದಿನ ಸ್ಪರ್ಶ ದರ್ಶನ ಹಾಗೂ ಅಭಿಷೇಕ ನಡೆಸುತ್ತಿದ್ದ ಪರಿಣಾಮ ಮೂರ್ತಿಗೆ ಸವಕಳಿ ಉಂಟಾಗಿದ್ದು, ಇನ್ನುಮುಂದೆ ಅರ್ಚಕರು ಮಾತ್ರ ಪಾಳಿ ಪ್ರಕಾರ ನಿತ್ಯ ಪೂಜೆ ಹಾಗೂ ನೈವೇದ್ಯ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಭಕ್ತರಿಗೆ ದೂರದಿಂದಲೇ ದರ್ಶನ ಪಡೆಯಲು ಅವಕಾಶ ಮುಂದುವರಿಯಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಪುರಾತತ್ವ ಇಲಾಖೆಯ ಅನುಮತಿ ಪಡೆದು ಮುಂದಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಮೈಸೂರು ಆಗಮ ಪಂಡಿತರ ಅಭಿಪ್ರಾಯ ಪಡೆಯಲಾಗಿದ್ದು, ಧಾರ್ಮಿಕವಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, 2015ರಲ್ಲೇ ಸ್ಪರ್ಶ ಪೂಜೆಯನ್ನು ನಿಷೇಧಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪತ್ರ ನೀಡಿದ್ದರು ಎಂಬುದನ್ನೂ ಸುಧಾ ತಳವಾರ ತಿಳಿಸಿದ್ದಾರೆ. ಇದನ್ನೂ ಓದಿ : ಎಸ್‌ಐಆರ್ ಕರ್ತವ್ಯದಲ್ಲಿದ್ದ, ಶಿಕ್ಷಕಿ ಹೃದಯಾಘಾತಕ್ಕೆ ಬಲಿ..!

Related posts

ಪ್ರಿಯಕರನ ಜೊತೆ ಬಾಳಲು ಮಗಳನ್ನೇ ಕೊಂದ ತಾಯಿ – ಮೂರು ತಿಂಗಳ ಬಳಿಕ FIR ದಾಖಲು..!

Kalpana Editor

ಮನೆಯಲ್ಲಿ ಜರ್ಮ್ಸ್‌ ಹೆಚ್ಚಾಗದಂತೆ ತಡೆಯುವುದು ಹೇಗೆ..? ಕೆಲವು ಸರಳ ಸಲಹೆಗಳು..!

kknewskannada1987@gmail.com

ಈ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ಆರಂಭಿಸುತ್ತೇವೆ – ಸಿಎಂ ಡಿಕೆಶಿ

Kalpana Editor