20.4 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿಸಿನಿಮಾ

ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ನಲ್ಲಿ 2 ಅವಾರ್ಡ್ ಗೆದ್ದ ರಿಷಬ್

ಆಸ್ಟ್ರೇಲಿಯಾದಲ್ಲಿ ನಡೆದ 17ನೇ ಆವೃತ್ತಿಯ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ ಚಲನಚಿತ್ರೋತ್ಸವದಲ್ಲಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತೀಯ ಚಿತ್ರರಂಗದ ವೈವಿಧ್ಯಮಯ ಕಥೆಗಳು, ನಟನೆ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಗೌರವಿಸುವ ಈ ಸಮಾರಂಭದಲ್ಲಿ ಕನ್ನಡದ ಹೆಮ್ಮೆಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ದಕ್ಷಿಣ ಮತ್ತು ಉತ್ತರ ಭಾರತದ ಹಲವು ದಿಗ್ಗಜ ಕಲಾವಿದರು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ‘ಕಾಂತಾರ: ಚಾಪ್ಟರ್ 1’ ಸಿನಿಮಾಗಾಗಿ ರಿಷಬ್ ಶೆಟ್ಟಿ ಅವರು ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ಜೊತೆಗೆ, ಭಾರತೀಯ ಸಿನಿಮಾಗೆ ನೀಡಿರುವ ವಿಶಿಷ್ಟ ಕೊಡುಗೆ ಮತ್ತು ಸಾಂಸ್ಕೃತಿಕ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ಅವರಿಗೆ ಪ್ರತಿಷ್ಠಿತ ‘ಲೀಡರ್‌ಶಿಪ್ ಇನ್ ಸಿನಿಮಾ’ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

ಭಾರತೀಯ ಚಿತ್ರರಂಗದ ಹಿರಿಯ ನಟಿ ರೇಖಾ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟಿ ರಾಣಿ ಮುಖರ್ಜಿ ಅವರ 30 ವರ್ಷಗಳ ಯಶಸ್ವಿ ಚಿತ್ರಜೀವನದ ಪಯಣವನ್ನು ವಿಶೇಷವಾಗಿ ಅಭಿನಂದಿಸಲಾಯಿತು. ನಟ ಪಂಕಜ್ ತ್ರಿಪಾಠಿ ಅವರಿಗೆ ‘ಆರ್ಟಿಸ್ಟ್ ಆಫ್ ಡಿಸ್ಟಿಂಕ್ಷನ್’ ಗೌರವ ಸಿಕ್ಕಿದೆ.

IFFM 2026 ವಿಜೇತರ ಸಂಪೂರ್ಣ ಪಟ್ಟಿ : ಅತ್ಯುತ್ತಮ ಸಿನಿಮಾ: ಲೋಕಾ ಚಾಪ್ಟರ್ 1: ಚಂದ್ರ, ಅತ್ಯುತ್ತಮ ಸಿನಿಮಾ (ವಿಶೇಷ ಉಲ್ಲೇಖ): ದಿ ಗ್ರೇಟ್ ಶಂಸುದ್ದೀನ್ ಫ್ಯಾಮಿಲಿ, ಅತ್ಯುತ್ತಮ ಇಂಡಿ ಸಿನಿಮಾ: ನಾಟ್ ಎ ಹೀರೊ, ಇಂಡಿ ಸಿನಿಮಾ (ವಿಶೇಷ ಉಲ್ಲೇಖ): ಕಿಕ್ಕ್ರನ್ ದೇ ಫುಲ್, ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ (ಕಾಂತಾರ: ಚಾಪ್ಟರ್ 1), ಅತ್ಯುತ್ತಮ ನಟ: ದುಲ್ಕರ್ ಸಲ್ಮಾನ್ (ಕಾಂತಾ), ಅತ್ಯುತ್ತಮ ನಟಿ: ಕೀರ್ತಿ ಕುಲ್ಹಾರಿ (ಫುಲ್ ಪ್ಲೇಟ್), ಸಾಕ್ಷ್ಯಚಿತ್ರ : ಫ್ಲೈಯಿಂಗ್ ಟೈಗರ್ಸ್ (ಮಧುಶ್ರೀ ದತ್ತಾ), ಪೀಪಲ್ಸ್ ಚಾಯ್ಸ್ ಪ್ರಶಸ್ತಿ: ಸೈಯಾರಾ (ಹಿಂದಿ), ರೈನ್‌ಬೋ ಸ್ಟೋರಿಟೆಲ್ಲರ್ ಪ್ರಶಸ್ತಿ: ಲಾಲಾ ಅಂಡ್ ಪಾಪಿ..,

ವೆಬ್ ಸರಣಿ ವಿಭಾಗ : ಅತ್ಯುತ್ತಮ ನಟ : ವಿಜಯ್ ವರ್ಮಾ (ಮಟ್ಕಾ ಕಿಂಗ್), ಅತ್ಯುತ್ತಮ ನಟಿ : ರಸಿಕಾ ದುಗಲ್ (ದೆಹಲಿ ಕ್ರೈಮ್ ಋತು 3), ಅತ್ಯುತ್ತಮ ಸರಣಿ : ಫ್ರೀಡಮ್ ಅಟ್ ಮಿಡ್‌ನೈಟ್ – ಸೀಸನ್ 2.., ಇದನ್ನೂ ಓದಿ : ಬ್ರಿಕ್ಸ್ ಶೃಂಗಸಭೆ; ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭಾರತಕ್ಕೆ ಭೇಟಿ..!

Related posts

ಬದರಿನಾಥ್ ದೇಣಿಗೆ ಕಳವು – ಪ್ರಮುಖ ಆರೋಪಿ ಡೆಹ್ರಾಡೂನ್‌ನಲ್ಲಿ ಬಂಧನ..!

Kalpana Editor

ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು; ಡಿಕೆಶಿ ಪಟ್ಟಾಭಿಷೇಕಕ್ಕೆ ಟೈಂ ಫಿಕ್ಸ್‌..!

Kalpana Editor

ಮಾತುಕತೆ ಏನಿದ್ರೂ ನನ್ನ ಮತ್ತು ವಿದ್ಯಾರ್ಥಿಗಳ ನಡುವೆ; ಬಾರ್‌ಕೌನ್ಸಿಲ್‌ ಹಸ್ತಕ್ಷೇಪಕ್ಕೆ ಸಿಜೆಐ ಕೆಂಡಾಮಂಡಲ..!

kknewskannada1987@gmail.com