22.1 C
ಬೆಂಗಳೂರು
September 21, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಎಸ್‌ಡಿಆರ್‌ಎಫ್‌ ಸಿಪಿಐ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಬೆಳಗಾವಿ : ಎಸ್‌ಡಿಆರ್‌ಎಫ್‌ ಸಿಪಿಐ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸಿಪಿಐ ಶ್ರೀಶೈಲ ಚೌಗಲೆ (37) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಬೆಳಗಾವಿಯ ಚನ್ನಮ್ಮ ನಗರದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಮನೆಯ ರೂಮ್‌ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಘಟನೆ ಸಂಬಂಧ ಎಸ್‌ಡಿಆರ್‌ಎಫ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಸ್ಥಳಕ್ಕೆ ಬಂದ ಸಿಬ್ಬಂದಿ ರೂಮ್‌ ಬಾಗಿಲು ಮುರಿದು ಆಸ್ಪತ್ರೆಗೆ ರವಾನೆ ಮಾಡಿದರು.

ಶ್ರೀಶೈಲ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತದೇಹವನ್ನು ಬೆಳಗಾವಿ ಬೀಮ್ಸ್‌ ಶವಾಗಾರಕ್ಕೆ ರವಾನಿಸಲಾಗಿದ್ದು, ನಗರದ ಉದ್ಯಮಬಾಗ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related posts

ಭಗವಂತನ ದಯೆಯಿಂದ ಒಳ್ಳೆ ಕಾಲ; ಕೋಟಿ ಕೋಟಿ ನಮಸ್ಕಾರಗಳು – ಇಕ್ಬಾಲ್ ಹುಸೇನ್

Kalpana Editor

ನನ್ನ ತಾಯಿ ಪ್ರೀತಿಯ ಚುಂಬನ; ಪುತ್ರ ರೇವಣ್ಣರಿಂದ ಅಮ್ಮನಿಗೆ ಅಂತಿನ ನಮನ..!

Kalpana Editor

ಮಾಜಿ ಸಚಿವ ನಾಗೇಂದ್ರ ಅಕ್ರಮಗಳ ಬಗ್ಗೆ ಚಾರ್ಜ್​ಶೀಟ್ ಸಲ್ಲಿಸಿದ ಸಿಬಿಐ

Kalpana Editor