20.8 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಿಲ್ಲ; ಶೋಭಾ ಕರಂದ್ಲಾಜೆ

ಬೆಂಗಳೂರು : ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಖುರ್ಚಿ ಕಾದಾಟ ವಿಚಾರವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಗ್ಯಾರಂಟಿಯಿಲ್ಲ ಎಂದರು.

ಮೂರು ವರ್ಷದ ಸರ್ಕಾರದಲ್ಲಿ 2.5 ವರ್ಷ ಸಿಎಂ ಬದಲಾವಣೆ ಬಗ್ಗೆಯೆ ಚರ್ಚೆಯಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ. ಒಂದು ಕಡೆ ಬರಗಾಲ ಮತ್ತೊಂದು ಕಡೆ ನೆರೆ ಬರುತ್ತಿದೆ. ಬೆಂಗಳೂರು ಮಳೆಯಿಂದ ಮುಳುಗುತ್ತಿದೆ, ಗಾರ್ಬೆಜ್‌ನ ಹಗರಣ ನಡೆಯುತ್ತಿದೆ. ಇವೆಲ್ಲವನ್ನೂ ಬಿಟ್ಟು ಖುರ್ಚಿಗಾಗಿ ಹೊಡೆದಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಖುರ್ಚಿ ಉಳಿಸುವ ಯತ್ನ ಮಾಡುತ್ತಿದ್ದರೆ, ಡಿಕೆಶಿ ಸಿಎಂ ಆಗುವ ಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ರಾಜ್ಯದ ಜನರು ಬಡವರಾಗಿದ್ದಾರೆ. ಯಾವುದೆ ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ, ಅಭಿವೃದ್ಧಿಗೆ ಹಣವಿಲ್ಲ. ಜನರ ಕೆಲಸ ಮಾಡಲು 135 ಸೀಟ್ ಗೆಲ್ಲಿಸಿದ್ದಾರೆ, ಜನರ ಕೆಲಸ ಮಾಡಿ ಎಂದು ಕಿಡಿಕಾರಿದರು.

Related posts

ನನ್ನ ತಾಯಿ ಪ್ರೀತಿಯ ಚುಂಬನ; ಪುತ್ರ ರೇವಣ್ಣರಿಂದ ಅಮ್ಮನಿಗೆ ಅಂತಿನ ನಮನ..!

Kalpana Editor

ರೇವಣ್ಣ ಮೇಲೆ ರೇಪ್‌ ಆರೋಪ ಹೊರಿಸಲು ಆಗಲ್ಲ – ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಗರಂ ‌

Kalpana Editor

ನೀಟ್ ಪ್ರತಿಭಟನೆ ಬಿಸಿ: ರಾಮಾಯಣ ಟ್ರೇಲರ್ ಬಿಡುಗಡೆ ಮುಂದಕ್ಕೆ..!

Kalpana Editor