August 25, 2026
kranthikidi.com
ತಾಜಾಸುದ್ದಿರಾಜ್ಯ

ತಮಿಳುನಾಡು ಬಸ್‌ಗಳಿಗೆ ತಾತ್ಕಾಲಿಕ ತಡೆ ತೆರವು; ಎಂದಿನಂತೆ ಸಂಚಾರ..!

ಬೆಂಗಳೂರು : ಕರ್ನಾಟಕ ಬಂದ್ ಹಿನ್ನೆಲೆ ತಮಿಳುನಾಡಿನಿಂದ ಬೆಂಗಳೂರಿಗೆ ಬರುವ ಹಾಗೂ ಇಲ್ಲಿಂದ ತಮಿಳುನಾಡಿಗೆ ತೆರಳುವ ಬಸ್‌ಗಳ ಸಂಚಾರಕ್ಕೆ ಪೊಲೀಸರು ನೀಡಿದ್ದ ತಾತ್ಕಾಲಿಕ ತಡೆಯನ್ನು ತೆರವುಗೊಳಿಸಿದ್ದಾರೆ.

ಬೆಂಗಳೂರಿನಲ್ಲಿ ಯಾವುದೇ ಬಂದ್ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ ತಮಿಳುನಾಡು ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಂದ್‌ನ ಸ್ವರೂಪ ನೋಡಿಕೊಂಡು ಬಸ್‌ಗಳ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಸದ್ಯ ಪರಿಸ್ಥಿತಿ ಸಹಜವಾಗಿರುವುದರಿಂದ ಎಂದಿನಂತೆ ಬಸ್‌ಗಳನ್ನು ಓಡಿಸಲು ಸೂಚಿಸಲಾಗಿದೆ.

ತಮಿಳುನಾಡು ಸಾರಿಗೆ ವ್ಯವಸ್ಥೆಯ ಇಲ್ಲಿನ ವ್ಯವಸ್ಥಾಪಕರಿಗೂ ಬಸ್‌ಗಳ ಸಂಚಾರ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಸದ್ಯ ತಮಿಳುನಾಡಿನ ಬಸ್‌ಗಳು ಯಾವುದೇ ಅಡಚಣೆ ಇಲ್ಲದೆ ಸಂಚಾರ ಮಾಡುತ್ತಿವೆ. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ತಮಿಳುನಾಡಿನ ವಿವಿಧ ಭಾಗಗಳತ್ತ ಬಸ್‌ಗಳು ಎಂದಿನಂತೆ ಹೊರಡುತ್ತಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಕರ್ನಾಟಕ ಬಂದ್‌ – ಮಂಡ್ಯ, ರಾಮನಗರದಲ್ಲಿ ಪ್ರತಿಭಟನೆಯ ಕಾವು..!

Related posts

ಎಸ್.ಜಾನಕಿ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿ – ಬೊಮ್ಮಾಯಿ

Kalpana Editor

ಲಕ್ಷ್ಮಿ ಭಂಡಾರ್ ಯೋಜನೆ, 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ – ಸಿಎಂ ಸುವೇಂದು ಘೋಷಣೆ..!

Kalpana Editor

ಕೆಆರ್‌ಪುರಂ ತ್ರಿವಳಿ ಹತ್ಯೆ ಕೇಸ್; ಪುದುಚೇರಿಯಲ್ಲಿ ಹಂತಕಿ ಶ್ವೇತಾ ಅರೆಸ್ಟ್‌..!

Kalpana Editor