22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಬೆಂಗಳೂರು ರಸ್ತೆ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ – ಸಿಎಂ ಡಿಕೆಶಿ

ಬೆಂಗಳೂರು : ನಗರದ ರಸ್ತೆ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ನೂತನ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರ ಬಳಿಕ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಈ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಬೆಂಗಳೂರು ನಗರ ರಸ್ತೆ ಅಭಿವೃದ್ಧಿಗೆ ಡಾಂಬರೀಕರಣ ಮಾಡಲು 2 ಸಾವಿರ ಕೋಟಿ ಅನುದಾನ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ : ಸಿದ್ದರಾಮಯ್ಯ ಪದತ್ಯಾಗದ ಬೆನ್ನಲ್ಲೇ, ಒಬಿಸಿಗೆ ಕಾಂಗ್ರೆಸ್​​ ಬಂಪರ್..!

ಈಗ ನಡೆಯುತ್ತಿರುವ ಕೆಲಸ ಬಿಟ್ಟು ಹೊಸ ರಸ್ತೆಗೆ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ ನೀಡಲಾಗುವುದು. 3-4 ತಿಂಗಳಲ್ಲಿ ಇದನ್ನ ಮಾಡ್ತೀವಿ ಎಂದರು. ಬೆಂಗಳೂರು ಕಸ ತೆಗೆಯೋಕೂ ಚಾಲೆಂಜ್ ಬಂತು. ರೈತರ ಸಮಸ್ಯೆಗೆ ನಮ್ಮ ಆದ್ಯತೆ. ಎಲ್ಲರನ್ನು ಕರೆದು ಮಾತಾಡಿ ನಿರ್ಧಾರ ಮಾಡ್ತೀವಿ. ರೈತನಿಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಹೇಳಿದರು.

Related posts

ತಿರುಪತಿ ತಿಮ್ಮಪ್ಪನ ಆರತಿಯಲ್ಲಿ ಇನ್ಮುಂದೆ ಕರ್ನಾಟಕ ವಿಐಪಿಗಳಿಗೂ ಚಾನ್ಸ್ – ಸಿಎಂ ಮಹತ್ವದ ಘೋಷಣೆ..!

Kalpana Editor

ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ದೆಹಲಿ ವಿದ್ಯಾರ್ಥಿಗಳ ಪರ ನಿಂತ ನಟಿ ಆಲಿಯಾ ಭಟ್..!

Kalpana Editor

ನಮಗೇ ಕುಡಿಯೋಕೆ ನೀರಿಲ್ಲ, ಅವರಿಗೆ ಕೊಡಿ ಅಂದ್ರೆ ಹೇಗೆ..? – ಡಿಸಿಎಂ ಪರಮೇಶ್ವರ್

Kalpana Editor