29.2 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿರಾಜ್ಯ

ಸಿದ್ದರಾಮಯ್ಯ ಪದತ್ಯಾಗದ ಬೆನ್ನಲ್ಲೇ, ಒಬಿಸಿಗೆ ಕಾಂಗ್ರೆಸ್​​ ಬಂಪರ್..!

ಬೆಂಗಳೂರು : ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ ನಿನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಜೊತೆಗೆ 13 ಜನ ಸಚಿವರಾಗಿಯೂ ಪ್ರತಿಜ್ಞಾವಿಧಿ ಪಡೆದಿದ್ದಾರೆ. ಹೀಗಿದ್ದರೂ ಸಿಎಂ ಕುಚಿರ್ಯಿಂದ ಸಿದ್ದರಾಮಯ್ಯರನ್ನು ಇಳಿಸಿರುವುದು ಪಕ್ಷಕ್ಕೆ ಯಾವುದಾದರೂ ರೀತಿಯಲ್ಲಿ ಹೊಡೆತ ನೀಡಬಹುದೆಂಬ ಆತಂಕ ಕಾಂಗ್ರೆಸ್​​ ಹೈಕಮಾಂಡ್​​ಗಿದೆ.

ಹೀಗಾಗಿಯೇ ಭಾರಿ ಲೆಕ್ಕಾಚಾರ ಹಾಕಿರುವ ವರಿಷ್ಠರು ಒಬಿಸಿಗಳಿಗೆ ಬಂಪರ್​​ ನೀಡಿದ್ದಾರೆ. ಒಬಿಸಿಗೆ ಸೇರಿರುವ ಸಿದ್ದರಾಮಯ್ಯ ಅವರ ಪದತ್ಯಾಗದ ಬೆನ್ನಲ್ಲೇ ಕಾಂಗ್ರೆಸ್​​ ಹೈಕಮಾಂಡ್​​ ಮಹತ್ವದ ನಿರ್ಣಯ ಕೈಗೊಂಡಿದೆ. ರಾಜ್ಯದಲ್ಲಿ ನಡೆಯಲಿರುವ ಪರಿಷತ್​​ ಚುನಾವಣೆ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಅವರೆಲ್ಲರೂ ಒಬಿಸಿಗೆ ಸೇರಿದವರೆ ಎನ್ನುವುದು ವಿಶೇಷವಾಗಿದೆ.

ಇಷ್ಟೇ ಅಲ್ಲದೆ ನಿನ್ನೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 13 ಮಂದಿಯ ಪೈಕಿ ಯತೀಂದ್ರ ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಕೂಡ ಇದೇ ಒಬಿಸಿಗೆ ಸೇರಿದವರಾಗಿದ್ದಾರೆ. ವಿಧಾನ ಪರಿಷತ್​​ ಚುನಾವಣೆ ಅಭ್ಯರ್ಥಿಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಬಿ.ಕೆ. ಹರಿಪ್ರಸಾದ್​​ಗೆ ನೀಡಿರುವುದು ಸಿದ್ದರಾಮಯ್ಯ ಪದತ್ಯಾಗದ ಬಳಿಕ ಪರ್ಯಾಯ ನಾಯಕತ್ವಕ್ಕೆ ಕಾಂಗ್ರೆಸ್​​ ಹೈಕಮಾಂಡ್​ ಹೆಚ್ಚಿನ ಒತ್ತು ನೀಡುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.ಇದನ್ನೂ ಓದಿ : ಯೋಗಿ ಜೀ ನಮ್ಮನ್ನು ಕ್ಷಮಿಸಿ; ಎನ್‌ಕೌಂಟರ್ ಭಯಕ್ಕೆ ಠಾಣೆಯಲ್ಲಿ ಪ್ರಮಾಣ ಮಾಡಿದ ರೌಡಿಗಳು

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಿದ ಬಳಿಕ ಅದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್​​ ಆಗದಂತೆ ಮತ್ತು ವೋಟ್​​ ಬ್ಯಾಂಕ್​​ ಕೈ ತಪ್ಪದಂತೆ ಆರಂಭದಿಂದಲೂ ಹೈಕಮಾಂಡ್​​ ನಾಯಕರು ತಂತ್ರ ರೂಪಿಸಿದ್ದರು. ಹೀಗಾಗಿ ಇವುಗಳೆಲ್ಲವೂ ಅದರದೇ ಭಾಗ ಎಂಬ ಮಾತುಗಳೀಗ ಕೇಳಿಬಂದಿವೆ.

Related posts

ಲಕ್ಷ್ಮಿ ಭಂಡಾರ್ ಯೋಜನೆ, 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ – ಸಿಎಂ ಸುವೇಂದು ಘೋಷಣೆ..!

Kalpana Editor

ಕರ್ನಾಟಕದ 4 ರಾಜ್ಯಸಭೆ, 7 ಪರಿಷತ್ ಸ್ಥಾನಗಳ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ..!

Kalpana Editor

ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಠರಾವು ರದ್ದು..!

Kalpana Editor