22.6 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿರಾಜ್ಯ

ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ; ಜೂ. 18ರಂದು ಎಲೆಕ್ಷನ್​​..!

ಬೆಂಗಳೂರು : ರಾಜ್ಯಸಭಾ ಚುನಾವಣೆಯ ಘೋಷಣೆ ಬೆನ್ನಲ್ಲೇ ಕರ್ನಾಟಕದ ವಿಧಾನಪರಿಷತ್ ಎಲೆಕ್ಷನ್​​ಗೂ ದಿನಾಂಕ ಪ್ರಕಟಗೊಂಡಿದೆ. ಜೂನ್ 26ರಂದು ತೆರವಾಗಲಿರುವ ಪರಿಷತ್​​ನ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್​​ನ 3, ಬಿಜೆಪಿಯ 3 ಮತ್ತು ಜೆಡಿಎಸ್​​ನ ಒಂದು ಸದಸ್ಯರ ಅವಧಿ ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಆಕಾಂಕ್ಷಿಗಳು ಅಲರ್ಟ್​​ ಆಗಿದ್ದು, ಸ್ಥಾನ ಗಿಟ್ಟಿಸಲು ಕಾರ್ಯಕತಂತ್ರ ಶುರುಮಾಡಿದ್ದಾರೆ.

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ವೇಳಾಪಟ್ಟಿ, ಚುನಾವಣೆ ಅಧಿಸೂಚನೆ: ಜೂನ್​​ 01, ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಜೂನ್​​ 08, ನಾಮಪತ್ರ ಪರಿಶೀಲನೆ: ಜೂನ್​​ 09, ನಾಮಪತ್ರ ಹಿಂಪಡೆಯಲು ಕೊನೇ ದಿನ: ಜೂನ್​​ 11, ಮತದಾನ: ಜೂನ್​​ 18, ಫಲಿತಾಂಶ: ಜೂನ್​​ 18..,

ಬಿ.ಕೆ. ಹರಿಪ್ರಸಾದ್​​, ನಾಸೀರ್​​ ಅಹ್ಮದ್​​, ತಿಪ್ಪಣ್ಣ, ಪ್ರತಾಪ್​​ ಸಿಂಹ ನಾಯಕ್​​, ಎನ್​​. ನಾಗರಾಜು (ಎಂಟಿಬಿ), ಸುನಿಲ್​​ ವಲ್ಯಾಪುರ ಮತ್ತು ಗೋವಿಂದರಾಜು ಅವರ ಅಧಿಕಾರ ಅವಧಿಯು ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಇನ್ನು ವಿಧಾನ ಸಭೆಯ ಹಾಲಿ ಬಲಾಬಲವನ್ನು ಗಮನಿಸಿದರೆ ತೆರವಾಗಲಿರುವ 7 ಸ್ಥಾನಗಳ ಪೈಕಿ 5 ಸ್ಥಾನಗಳು ಕಾಂಗ್ರೆಸ್​​ ಮತ್ತು 2 ಸ್ಥಾನಗಳು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಆ ಮೂಲಕ ಕಾಂಗ್ರೆಸ್​​ 2 ಸ್ಥಾನಗಳನ್ನು ಹೆಚ್ಚಿಸಿಕೊಂಡರೆ, ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್​​ ತಲಾ 1 ಸ್ಥಾನಗಳನ್ನು ಕಳೆದುಕೊಳ್ಳುವ ಲೆಕ್ಕಾಚಾರ ಇದೆ.

Related posts

ಕರ್ನಾಟಕಕ್ಕೆ ಮುಂಗಾರು ಎಂಟ್ರಿ – ವರುಣನ ಅಬ್ಬರ, ಧರೆಗುರುಳಿದ ಮರ ಜನಜೀವನ ಅಸ್ತವ್ಯಸ್ತ..!

Kalpana Editor

ಸ್ಥಾನಮಾನ ಹೆಚ್ಚಾದಂತೆ ವಿರೋಧಿಗಳೂ ಹೆಚ್ಚಾಗುತ್ತಾರೆ; ವಿವಾದದಲ್ಲಿ ರಣವೀರ್‌ಗೆ ಕಂಗನಾ ಬೆಂಬಲ..!

Kalpana Editor

ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ; ಮೂವರ ದುರ್ಮರಣ..!

Kalpana Editor