kranthikidi.com
ತಾಜಾಸುದ್ದಿದೇಶ

ಭಾರತ ಆಪರೇಷನ್ ಸಿಂಧೂರ್ 2.0ಗೆ ತಯಾರಿ; ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ನವದೆಹಲಿ : ಭಾರತೀಯ ಸೇನೆ ಯು ಯಾವುದೇ ಕ್ಷಣದಲ್ಲೂ ಎದುರಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ‘ಆಪರೇಷನ್ ಸಿಂಧೂರ್ 2.0’ ಕಾರ್ಯಾಚರಣೆಗೆ ಸಂಪೂರ್ಣ ಸಜ್ಜಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಕುತಂತ್ರಗಳ ವಿರುದ್ಧ ಭಾರತೀಯ ಸೇನೆ ತಳೆದಿದ್ದ ಕಠಿಣ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾತನಾಡಿದ ಸೇನಾ ಮುಖ್ಯಸ್ಥರು, ಆಪರೇಷನ್ ಸಿಂಧೂರ್ ಇನ್ನೂ ಕೊನೆಗೊಂಡಿಲ್ಲ, ಅದು ಮುಂದುವರೆಯುತ್ತಲೇ ಇದೆ. ಪ್ರಸ್ತುತ ಗಡಿಯಲ್ಲಿರುವ ಸ್ಥಿತಿಯು ಯುದ್ಧದ ನಡುವಿನ ಒಂದು ತಾತ್ಕಾಲಿಕ ವಿರಾಮವಷ್ಟೇ ಎಂದು ಬಣ್ಣಿಸಿದ್ದಾರೆ. ಮೂರೂ ಪಡೆಗಳ ಮಹಾ ಜಂಟಿ ಸಿದ್ಧತೆ ಪಾಕಿಸ್ತಾನದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಗಡಾಫಿ ಶೈಲಿಯಲ್ಲಿ ಎಚ್ಚರಿಕೆ ನೀಡಿರುವ ಜನರಲ್ ದ್ವಿವೇದಿ, ಭಾರತೀಯ ಮಿಲಿಟರಿಯ ಸನ್ನದ್ಧತೆಯನ್ನು ಎತ್ತಿ ತೋರಿಸಿದ್ದಾರೆ.

ಆಪರೇಷನ್ ಸಿಂಧೂರ್ 2.0 ಸಂಭವಿಸಿದಲ್ಲಿ, ಕೇವಲ ಸೇನೆ ಮಾತ್ರವಲ್ಲದೆ ಭಾರತೀಯ ವಾಯುಪಡೆ ಮತ್ತು ನೌಕಾಪಡೆಯೂ ಜಂಟಿಯಾಗಿ ಅತ್ಯಂತ ಪ್ರಬಲ ದಾಳಿ ನಡೆಸಲು ಸಜ್ಜಾಗುತ್ತಿವೆ. ಪ್ರಸ್ತುತ ನಾವು ಮೂರೂ ಪಡೆಗಳ ನಡುವೆ ಸಿನರ್ಜಿ (ಪರಸ್ಪರ ಸಮನ್ವಯತೆ) ಹೆಚ್ಚಿಸುವ ಹಾಗೂ ಮುಂದಿನ ಸವಾಲಿಗೆ ನಮ್ಮನ್ನು ಸಿದ್ಧಪಡಿಸಿಕೊಳ್ಳುವತ್ತ ದಿನದ 24 ಗಂಟೆಯೂ ಗಮನಹರಿಸುತ್ತಿದ್ದೇವೆ ಎಂದರು.

ಇಂದಿನ ಆಧುನಿಕ ಯುದ್ಧಭೂಮಿ ಸಂಪೂರ್ಣ ಮುಕ್ತವಾಗಿದೆ, ನಮ್ಮ ಪ್ರತಿಯೊಂದು ನಡೆಯೂ ಶತ್ರುಗಳಿಗೆ ತಿಳಿಯುತ್ತದೆ. ಆದ್ದರಿಂದ, ನಮ್ಮ ಸೈನಿಕರ ನಿಯೋಜನೆ, ಸುರಕ್ಷತೆ ಮತ್ತು ಗಡಿ ನಿವಾಸಿಗಳ ರಕ್ಷಣೆಯ ಬಗ್ಗೆ ನಾವು ಅತ್ಯಂತ ಜಾಗರೂಕರಾಗಿದ್ದೇವೆ ಎಂದಿದ್ದಾರೆ.

ಕಳೆದ ವರ್ಷ (2025ರ ಏಪ್ರಿಲ್ 22 ರಂದು) ದಕ್ಷಿಣ ಕಾಶ್ಮೀರದ ಸುಂದರ ಪ್ರವಾಸಿ ತಾಣವಾದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಅಟ್ಟಹಾಸ ಮೆರೆದು 26 ಜನರನ್ನು ಬಲಿ ಪಡೆದಿದ್ದರು. ಭಾರತದ ದಿಟ್ಟ ಪ್ರತಿಕಾರ: ಈ ಹೇಡಿತನದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು 2025 ರ ಮೇ 7 ಮತ್ತು 8 ರ ಮಧ್ಯರಾತ್ರಿ ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂಧೂರ್’ ಎಂಬ ಬೃಹತ್ ಮಿಲಿಟರಿ ಮರುದಾಳಿಯನ್ನು ನಡೆಸಿ ಶತ್ರುಗಳ ಬೆನ್ನೆಲುಬು ಮುರಿದಿತ್ತು.

Related posts

ಕೋಲ್ಕತ್ತಾದಿಂದ ಬೆಂಗಳೂರಿಗೆ ಐಷಾರಾಮಿ ಬಸ್ ಸೇವೆ ಆರಂಭ..!

Kalpana Editor

ಕೋಯಿಕ್ಕೋಡ್‌ದಲ್ಲಿ ನಿಫಾ ಸೋಂಕು ದೃಢ – ಕೇರಳದಲ್ಲಿ ಹೈ ಅಲರ್ಟ್..!

Kalpana Editor

ಬಿಡದಿ ರೈತರ ಹೋರಾಟ: ರೈತರ ಮೇಲಿನ ಎಫ್‌ಐಆರ್ ವಾಪಸ್ ಪಡೆಯಲಿ, ಯೋಜನೆ ಕೈಬಿಡಲಿ – ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

Kalpana Editor