28.9 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿರಾಜ್ಯ

ಅಜ್ಜಯ್ಯನ ಗದ್ದುಗೆಗೆ ಡಿಕೆಶಿ ಭೇಟಿ; ಪದಗ್ರಹಣಕ್ಕೂ ಮುನ್ನ ಸಲಹೆ, ಎಚ್ಚರಿಕೆ..!

ಬೆಂಗಳೂರು : ರಾಜ್ಯಪಾಲರ ಭೇಟಿ ಬಳಿಕ ಡಿಕೆ ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ, ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಜ್ಜಯ್ಯ ಎಚ್ಚರಿಕೆ ನೀಡಿದ್ದು, ಕೆಲ ಸಲಹೆ ಕೂಡ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ ರಾಜ್ಯಪಾಲರ ಭೇಟಿ ಬಳಿಕ ನೇರವಾಗಿ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಡಿಕೆಶಿ, ಪತ್ನಿ ಉಷಾ ಹಾಗೂ ಡಿಕೆ ಸುರೇಶ್‌ ಭೇಟಿ ನೀಡಿದ್ದಾರೆ. ಈ ವೇಳೆ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡಿದ್ದಾರೆ.

ಈ ವೇಳೆ ಅಜ್ಜಯ್ಯ ಕೆಲ ಸಲಹೆ ಹಾಗೂ ಎಚ್ಚರಿಕೆ ನೀಡಿದ್ದಾರೆ. ದೊಡ್ಡ ಮಟ್ಟಿಗಿನ ಸಂಭ್ರಮಾಚರಣೆ ಬೇಡ, ಯೋಚನೆ ಮಾಡಿ ತೀರ್ಮಾನಿಸಿ. ಮಳೆಗೆ ಪರಿಹಾರವಿದೆ, ಆದರೆ ಸಮಯ, ಸಂದರ್ಭದ ತೀರ್ಮಾನ ನಿಮ್ಮ ಕೈಯಲ್ಲಿದೆ ಎಂದು ಎಚ್ಚರಿಕೆ ನೀಡಿರುವುದು ಡಿಕೆಶಿಗೆ ಸ್ವಲ್ಪ ನಿರಾಸೆ ತಂದಿದೆ. ಜೂ.3ರಂದು ಎರಡು ಸಮಯ ಚೆನ್ನಾಗಿದೆ. ಯಾವಾಗಾದರೂ ಮಾಡಬಹುದು. ವಿಧಾನಸೌಧದ ಗ್ರಾಂಡ್ ಸ್ಟೆಪ್ ಮೇಲೆ ಮಾಡಬೇಕಾ? ಬೇಡ್ವಾ? ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಯೋಚಿಸಿ ಎಂದು ಸಲಹೆ ನೀಡಿದ್ದಾರೆ ಎಂದು ಎನ್ನಲಾಗಿದೆ.

ಇತ್ತೀಚಿಗೆ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾತನಾಡದಂತೆ ಡಿಕೆಶಿಗೆ ಎಚ್ಚರಿಕೆ ಕೊಟ್ಟಿದ್ದರು. ಮಾತಾಡಿದರೆ ಮುತ್ತು ಒಡೆದು ಹೋಗಲಿದೆ. ಅರ್ಥಾತ್ ಕೆಲಸ ಕೆಡಲಿದೆ ಎಂಬ ಸಂದೇಶವನ್ನು ನೀಡಿದ್ದರು. ಇದಕ್ಕೂ ಮೊದಲು ದೆಹಲಿಗೆ ಹೋಗುವ ಮುನ್ನ ಡಿಸಿಎಂ ಡಿಕೆಶಿ ಒಂದೇ ದಿನ ಎರಡು ಬಾರಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಅಜ್ಜಯ್ಯನ ದರ್ಶನ ಪಡೆದು ಆಶೀರ್ವಾದ ಪಡೆದಿದ್ದರು. ಅಜ್ಜಯ್ಯನ ಅಪ್ಪಣೆ ಪಡೆಯದೇ ನಾನು ಯಾವ ಕೆಲಸವನ್ನೂ ಮಾಡಲ್ಲ ಎಂದು ಈ ಹಿಂದೆ ಡಿಕೆಶಿ ಹಲವು ಬಾರಿ ಹೇಳಿದ್ದರು.

Related posts

ಹಠಾತ್ ಬಿರುಗಾಳಿ ಸಹಿತ ಮಳೆ; ಏರ್‌ಪೋರ್ಟ್‌ನಲ್ಲಿ ಏರ್‌ಇಂಡಿಯಾ ವಿಮಾನಗಳು ಜಖಂ

Kalpana Editor

ರಾಜ್ಯದಲ್ಲಿ ವರದಿಯಾಗಿದ್ದ, ಎಬೋಲಾ ವೈರಸ್‌ ಪ್ರಕರಣಗಳು ನೆಗೆಟಿವ್; ದಿನೇಶ್ ಗುಂಡೂರಾವ್ ಸ್ಪಷ್ಟನೆ..!

Kalpana Editor

ಪಾಕ್‌ಗೆ ಬಿಸಿ ಮುಟ್ಟಿಸಲು ಮತ್ತೆ ರೆಡಿ; ಭಾರತಕ್ಕೆ ಬಂದಿಳಿದ ಮತ್ತೊಂದು ಸುದರ್ಶನ ಚಕ್ರ

Kalpana Editor