23.6 C
ಬೆಂಗಳೂರು
September 21, 2026
kranthikidi.com
ಕ್ರೀಡೆತಾಜಾಸುದ್ದಿಸಿನಿಮಾ

ಗೋಲಿ ಆಡೋಕೂ ಬರ್ತಾ ಇರಲಿಲ್ಲ – ಸೂರ್ಯವಂಶಿ ಬಗ್ಗೆ ಅಮಿತಾಭ್ ಮಾತು..!

15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಅಬ್ಬರದ ಆಟಕ್ಕೆ ಇಡೀ ದೇಶವೇ ಫಿದಾ ಆಗಿದೆ. ಐಪಿಎಲ್​​ನಲ್ಲಿ ಆರ್​​ಆರ್ ಪರ ಆಡಿದ ಅವರು, ದಾಖಲೆಯ ಮೇಲೆ ದಾಖಲೆ ಬರೆದಿದ್ದಾರೆ. ಬಾಲಿವುಡ್‌ನ ನಟ ಅಮಿತಾಭ್ ಬಚ್ಚನ್ ಅವರು ವೈಭವ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ವೈಭವ್ ಅವರ ಖುಷಿಯನ್ನು ಹೆಚ್ಚಿಸಿದೆ.

ಅಮಿತಾಭ್ ಬಚ್ಚನ್ ಅವರು ಬಾಲಿವುಡ್ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರಿಂದ ಆಶೀರ್ವಾದ ಸಿಕ್ಕರೆ ಸಾಕು ಎಂದು ಅನೇಕರು ಬಯಸುತ್ತಾ ಇರುತ್ತಾರೆ. ಈಗ ವೈಭವ್​​ಗೆ ಹೊಗಳಿಕೆ ಹಾಗೂ ಆಶೀರ್ವಾದ ಎರಡೂ ಒಂದರಲ್ಲೇ ಸಿಕ್ಕಿದೆ. ‘ನನಗೆ 15 ವರ್ಷವಿದ್ದಾಗ ಗೋಲಿ ಆಡಲು ಸಹ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಈ ಹುಡುಗ ಈ ವಯಸ್ಸಿಗೆ ಇಷ್ಟು ಅದ್ಭುತವಾಗಿ ಆಡುತ್ತಿದ್ದಾನೆ’ ಎಂದು ಬಿಗ್ ಬಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಮಿತಾಭ್ ಮಾತ್ರವಲ್ಲದೆ ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡೂಲ್ಕರ್ ಕೂಡ ಇತ್ತೀಚೆಗೆ ಟ್ವಿಟರ್ ಖಾತೆಯಲ್ಲಿ ವೈಭವ್ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದ್ದಾರೆ. ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ 15 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಈ ವರ್ಷದ ಅಂಕಿ-ಅಂಶ ಅಚ್ಚರಿ ತರಿಸುವಂತಿದೆ.

Related posts

ಟೋಲ್ ವಿರೋಧಿಸಿ, ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ರಾಜ್ಯ ರೈತ ಸಂಘ ಕರೆ..!

Kalpana Editor

ಬೈಜುಸ್ ಸಂಸ್ಥಾಪಕ ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ..!

Kalpana Editor

ಅದಾನಿ ಕಂಪನಿಗೆ ಗುಡ್‌ನ್ಯೂಸ್‌ – ಕ್ರಿಮಿನಲ್‌ ಆರೋಪ ಕೈಬಿಟ್ಟ ಅಮೆರಿಕ..!

kknewskannada1987@gmail.com