28.9 C
ಬೆಂಗಳೂರು
June 10, 2026
kranthikidi.com
ಕ್ರೈಂತಾಜಾಸುದ್ದಿದೇಶ

ತ್ವಿಶಾ ಶರ್ಮಾ ಪ್ರಕರಣ; ಸಾಕ್ಷಿಯ ಮೇಲೆ ಪತಿ ಸ್ನೇಹಿತರಿಂದ ಹಲ್ಲೆ..!

ಭೋಪಾಲ್ : ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ನಟಿ ತ್ವಿಶಾ ಶರ್ಮಾ ಪ್ರಕರಣದ ಪ್ರಮುಖ ಸಾಕ್ಷಿಯ ಮೇಲೆ ಭೋಪಾಲ್‌ನಲ್ಲಿ ಆರೋಪಿ ಪತಿ ಸಮರ್ಥ್ ಸಿಂಗ್‌ನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ.

ಸಿಂಗ್ ಮನೆ ಬಳಿ ಸಲೂನ್ ನಡೆಸುತ್ತಿರುವ ನೀರಜ್ ದುಬೆ ಅವರ ಮೇಲೆ ಮೇ 30 ರಂದು ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆ ನಡೆಸಿದ ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ನೀರಜ್ ದುಬೆ ಅವರ ಸುತ್ತ ನಾಲ್ಕೈದು ಜನ ಸುತ್ತುವರಿದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು ದಾಖಲಾಗಿದೆ.

ಈ ಘಟನೆ ನಡೆದ ತಕ್ಷಣ, ದುಬೆ ಕಟಾರಾ ಹಿಲ್ಸ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ನನಗೆ ಜೀವ ಭಯವಿದೆ. ರಕ್ಷಣೆ ನೀಡಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಅವರಿಗೆ ಭರವಸೆ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ದಾಳಿಕೋರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ತ್ವಿಶಾ ಶರ್ಮಾ ಮೇ 12 ರಂದು ತನ್ನ ಅತ್ತೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ನಂತರ ಆಕೆಯ ಕುಟುಂಬವು ಆಕೆಯ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ನಿವೃತ್ತ ಜಡ್ಜ್ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿತ್ತು. ಈ ಸಂಬಂಧ ತ್ವಿಶಾ ಪತಿ ಹಾಗೂ ಅತ್ತೆಯನ್ನು ಬಂಧಿಸಲಾಗಿದೆ. ಅಪರಾಧದ ಸ್ಥಳದಲ್ಲಿ ತ್ವಿಶಾ ಸಾವಿನ ಘಟನೆಗಳನ್ನು ಮರುಸೃಷ್ಟಿಸಲು ಪೊಲೀಸರು ಆರೋಪಿಗಳನ್ನು ಮನೆಗೆ ಕರೆದುಕೊಂಡು ಬಂದಿದ್ದರು.

Related posts

ಯೋಗಿ ಜೀ ನಮ್ಮನ್ನು ಕ್ಷಮಿಸಿ; ಎನ್‌ಕೌಂಟರ್ ಭಯಕ್ಕೆ ಠಾಣೆಯಲ್ಲಿ ಪ್ರಮಾಣ ಮಾಡಿದ ರೌಡಿಗಳು

Kalpana Editor

ನೆಲಮಂಗಲ ತಾಲೂಕಿನಲ್ಲಿ ಚಿರತೆ ಹಾವಳಿ; ಜನರಲ್ಲಿ ಆತಂಕ..!

Kalpana Editor

ನೆಗೆಟಿವ್ ಟ್ರೋಲ್ ಮಾಡುವವರ ವಿರುದ್ಧ ‘ಪೆದ್ದಿ’ ಕಾನೂನು ಕ್ರಮ..!

Kalpana Editor