20.8 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಬಿಎಸ್‌ವೈ ನಿವಾಸಕ್ಕೆ ಡಿಕೆಶಿ ಭೇಟಿ; ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ..!

ಬೆಂಗಳೂರು : ಮುಖ್ಯಮಂತ್ರಿಯಾಗಿ ಗದ್ದುಗೆಗೇರಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಪ್ರಮಾಣವಚನ ಸ್ವೀಕಾರಕ್ಕೂ ಮುನ್ನವೇ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಅಧಿಕೃತ ನಿವಾಸ ‘ಧವಳಗಿರಿ’ಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಪ್ರೀತಿಯಿಂದ ಪ್ರಮಾಣವಚನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನಿಸಿದರು. ಇದನ್ನೂ ಓದಿ : ಫ್ಲ್ಯಾಟ್ ಬೆಲ್ಲಿ ಆಸೆಗೆ ನನ್ನನ್ನು ನಾನೇ ಹಿಂಸಿಸಿಕೊಂಡಿದ್ದೆ, ಕೆಮಿಕಲ್ ಚಿಕಿತ್ಸೆ ಮಾಡಿಸಿ, ಕೂದಲು ಹಾಳು; ನಟಿ ತಾಪ್ಸಿ ಪನ್ನು

ಇದೇ ವೇಳೆ ರಾಜ್ಯದಲ್ಲಿ ಹೊಸ ಸರ್ಕಾರವನ್ನು ಯಶಸ್ವಿಯಾಗಿ ನಡೆಸಲು ಮತ್ತು ರಾಜ್ಯದ ಅಭಿವೃದ್ಧಿಗೆ ವಿರೋಧ ಪಕ್ಷದ ಕಡೆಯಿಂದ ಅಗತ್ಯ ಸಹಕಾರ ನೀಡಬೇಕೆಂದು ಹಿರಿಯ ನಾಯಕನಲ್ಲಿ ಕೋರಿಕೊಂಡರು.

ಇಂದು ಸಂಜೆ ಬೆಂಗಳೂರಿನ ರಾಜಭವನದ ಆವರಣದಲ್ಲಿರುವ ಭವ್ಯ ‘ಗಾಜಿನ ಮನೆ’ಯಲ್ಲಿ ಪ್ರಮಾಣವಚನ ಜರುಗಲಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ಯಡಿಯೂರಪ್ಪನವರನ್ನು ಡಿಕೆಶಿ ಖುದ್ದಾಗಿ ಆಹ್ವಾನಿಸಿದ್ದಾರೆ.

Related posts

ಲೋಕಸಭೆಯಲ್ಲಿ ಮತ್ತೆ ʻನೀಟ್‌ʼ ಗದ್ದಲ – ಕಲಾಪ ಮುಂದೂಡಿಕೆ..!

Kalpana Editor

ಸಿಎಂ ಆದ ಬಳಿಕ ಅಜ್ಜಯ್ಯನ ಮಠಕ್ಕೆ ಭೇಟಿ; ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿದ್ದ ಡಿಕೆಶಿ

Kalpana Editor

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್

Kalpana Editor