kranthikidi.com
ತಾಜಾಸುದ್ದಿರಾಜ್ಯ

ಡಿ.ಕೆ.ಶಿವಕುಮಾರ್ ರಾಜ್ಯದ 25ನೇ ಮುಖ್ಯಮಂತ್ರಿಗಳಾಗಿ ಪದಗ್ರಹಣ ಹಿನ್ನೆಲೆ; ಸಾವಿರಾರು ಜನರಿಗೆ ಅನ್ನದಾನ ಹಾಗೂ 50 ಸಾವಿರ ಸಿಹಿ ವಿತರಣೆ..!

ಬೆಂಗಳೂರು : ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ಮೋದಿ ಆಸ್ಪತ್ರೆ ಮತ್ತು ಮಂಜುನಾಥನಗರ, ರಾಜೀವ್ ಗಾಂಧಿ ವೃತ್ತ , ಕುವೆಂಪು ವೃತ್ತ , ಬಸವಣ್ಣ ವೃತ್ತ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ ಪ್ರತಿಮೆ ಆನಂದ ವೃತ್ತ ಹಾಗೂ ಬೆಂಗಳೂರಿನ ಹಲವೆಡೆ ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿರುವ ಶ್ರೀ ಡಿ.ಕೆ.ಶಿವಕುಮಾರ್ ರವರ ಈ ಶುಭ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಾವಿರಾರು ಜನರಿಗೆ ಅನ್ನದಾನ, ಸಿಹಿ ವಿತರಣೆ ಕಾರ್ಯಕ್ರಮವನ್ನು ಎಂಇಐ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್ ರವರ ತಂಡ ಸೇರಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜನಾರ್ಧನ್, ಆನಂದ್ ಪರಿಸರ ರಾಮಕೃಷ್ಣ, ಪ್ರಕಾಶ್, ಸಲೀಮ್, ಕುಶಾಲ್ ಹರವೇಗೌಡ, ಪುಟ್ಟರಾಜು, ನಿರಂಜನ್, ಚಂದ್ರು,ಹೇಮರಾಜು, ಸುಂಕದಕಟ್ಟೆ ನವೀನ್, ಓಬಳೇಶ್, ರಂಜೀತ್ ಅರವಿಂದ್ ಅಯ್ಯಂಗಾರ್, ರವಿಕುಮಾರ್ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿ ಹಲವೆಡೆ ಸಿಹಿ ಹಂಚಲಾಯಿತು.

ಇದೇ ಸಂದರ್ಭದಲ್ಲಿ ಎಸ್.ಮನೋಹರ್ ರವರು ಮಾತನಾಡಿ ಶ್ರೀ ಡಿ.ಕೆ.ಶಿವಕುಮಾರ್ ರವರು ಕಳೆದ 40ವರ್ಷಗಳಿಂದ ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತರಾಗಿ ಎನ್.ಎಸ್.ಯು.ಐ ಮತ್ತು ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂಘಟನೆ, ನಾಯಕತ್ವ, ಹೋರಾಟಕ್ಕೆ ಮತ್ತೊಂದು ಹೆಸರು ಶ್ರೀ ಡಿ.ಕೆ.ಶಿವಕುಮಾರ್. ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಾಮೂಹಿಕ ನಾಯಕತ್ವದಲ್ಲಿ ಶ್ರೀ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಕಾರ್ಯಕರ್ತರೊಂದಿಗೆ ಶ್ರಮಪಟ್ಟು ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ 6 ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ಕೊಡುಗೆ ನೀಡಿ ಗ್ಯಾರಂಟಿ ಯೋಜನೆಗಳು ಕೋಟ್ಯಂತರ ಜನರು ಫಲಾನುಭವಿಗಳು ಇದನ್ನ ಸ್ವಾಗತಿಸಿ ಸದುಪಯೋಗಪಡಿಸಿಕೊಂಡಿದ್ದಾರೆ. ರಾಜ್ಯದ ಅಭಿವೃದ್ದಿ ಮತ್ತು ಬೆಂಗಳೂರು ನಗರದ ಕುರಿತು ಅಪಾರ ಅನುಭವವುಳ್ಳ ಡಿ.ಕೆ.ಶಿವಕುಮಾರ್ ರವರ ಸಾರಥ್ಯದಲ್ಲಿ ರಾಜ್ಯ ಅಭಿವೃದ್ಧಿಯಾಗಲಿ ಮತ್ತು ಜನರ ಆಶೀರ್ವಾದ ಅವರ ಮೇಲೆ ಇರಲಿ ಎಂದು ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Related posts

ಭೀಮಾತೀರದಲ್ಲಿ ಸಾಮೂಹಿಕ ಹತ್ಯೆ ಕೇಸ್‌ – 12 ಆರೋಪಿಗಳ ಅರೆಸ್ಟ್‌..!

Kalpana Editor

ಎಸ್.ಜಾನಕಿ ಅವರ ಕುಟುಂಬ ಸದಸ್ಯರಿಗೆ ಸಿಎಂ ಡಿಕೆಶಿ ಕರೆ ಮಾಡಿ ಸಾಂತ್ವನ; ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರಕ್ಕೆ ಸೂಚನೆ..!

Kalpana Editor

ಕೇತನ್‌ ಜೊತೆ ಎಂಗೇಜ್‌ಮೆಂಟ್‌, ಲವ್ವರ್ ಜೊತೆ ರಹಸ್ಯ ಮದುವೆ – ಬಯಲಾಗ್ತಿದೆ ಕ್ರಿಮಿನಲ್‌ ಸಿಯಾ ಪುರಾಣ

Kalpana Editor