26.5 C
ಬೆಂಗಳೂರು
October 8, 2026
kranthikidi.com
ಕ್ರೈಂತಾಜಾಸುದ್ದಿದೇಶ

ಕೇತನ್‌ ಜೊತೆ ಎಂಗೇಜ್‌ಮೆಂಟ್‌, ಲವ್ವರ್ ಜೊತೆ ರಹಸ್ಯ ಮದುವೆ – ಬಯಲಾಗ್ತಿದೆ ಕ್ರಿಮಿನಲ್‌ ಸಿಯಾ ಪುರಾಣ

ಮುಂಬೈ : ಭಾವಿ ಪತಿ ಕೇತನ್‌ ಅಗರ್ವಾಲ್‌ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಸಿಯಾ ಗೋಯಲ್‌ ಹಾಗೂ ಚೇತನ್‌ ಚೌಧರಿ ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಸಿಯಾ ಮತ್ತು ಚೇತನ್ ನಾಲ್ಕು ತಿಂಗಳ ಹಿಂದೆ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ರಹಸ್ಯವಾಗಿ ವಿವಾಹವಾಗಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪುಣೆ ಗ್ರಾಮೀಣ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎನ್ನಲಾದ ಗೋಯಲ್ ಅವರ ಇಬ್ಬರು ಕಾಲೇಜು ಸ್ನೇಹಿತರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಫೋಟೋ ಒಂದರಲ್ಲಿ ಆರೋಪಿಗಳು ಹಾರಗಳನ್ನು ಧರಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಇನ್‌ಸ್ಟಾಗ್ರಾಮ್ ಖಾತೆಯಿಂದ ಅಳಿಸಲಾದ ಫೋಟೋಗಳನ್ನು ರಿಕವರಿ ಮಾಡಲು ಪೊಲೀಸರ ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ.

ಜೂನ್ 18 ರಂದು ಲೋಹಗಡ ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರಿಯಕರ ಚೇತನ್ ಚೌಧರಿ (22) ತಳ್ಳಿ ಕೊಲೆಗೈದಿದ್ದರು. ಈ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರ ದೃಢಪಟ್ಟಿದೆ. ಗೋಯಲ್ ಮತ್ತು ಚೌಧರಿ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಮಲೆನಾಡಲ್ಲಿ ಮಳೆಯಬ್ಬರ – ಜೋಗ ಜಲಪಾತಕ್ಕೆ ಜೀವಕಳೆ..!

Related posts

ಹಿಡಕಲ್ ಜಲಾಶಯ ಭರ್ತಿ – ಇಂದು ನೀರು ಬಿಡುಗಡೆ ಸಾಧ್ಯತೆ..!

kknewskannada1987@gmail.com

ಪಿಆರ್​ಸಿ ಜಟಾಪಟಿ; ಆದೇಶ ವಾಪಸ್ ಪಡೆಯುವಂತೆ ಆರ್​​ ಅಶೋಕ್ ಆಗ್ರಹ..!

Kalpana Editor

ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನ..!

Kalpana Editor