24.1 C
ಬೆಂಗಳೂರು
October 11, 2026
kranthikidi.com
ತಾಜಾಸುದ್ದಿರಾಜ್ಯ

ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನ..!

ಚಿತ್ರದುರ್ಗ : ತಾಲೂಕಿನ ಗೊಡಬನಹಾಳ್ ಗ್ರಾಮಸ್ಥರಲ್ಲಿ ಹಲವು ದಿನಗಳಿಂದ ಭೀತಿ ಹುಟ್ಟಿಸಿದ್ದ ಚಿರತೆಯನ್ನ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಗೊಡಬನಹಾಳ್ ಗ್ರಾಮದ ಜಮೀನಲ್ಲಿ ಅವಿತಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಹೊಂಚು ಹಾಕಿ ಸೆರೆ ಹಿಡಿದಿದ್ದಾರೆ. ಇದರಿಂದ ಸುತ್ತಮುಲಿನ ಗ್ರಾಮಸ್ಥರೂ ನಿಟ್ಟುಸಿರುವ ಬಿಟ್ಟಿದ್ದಾರೆ.

ಹಲವು ದಿನಗಳಿಂದಲೂ ಗೊಡಬನಹಾಳ್ ಗ್ರಾಮಸ್ಥರನ್ನ ಕಾಡಿದ್ದ ಚಿರತೆ, ಎಲ್ಲೆಂದರಲ್ಲಿ ಕುರಿ-ಮೇಕೆಗಳನ್ನ ಹೊತ್ತೊಯ್ಯುತ್ತಿತ್ತು. ಇದರಿಂದ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿ ಅರಣ್ಯ ಇಲಾಖೆಗೂ ತಲೆನೋವಾಗಿತ್ತು. ಕೊನೆಗೆ ಹರಸಾಹಸ ಪಟ್ಟು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯಾಧಿಕಾರಿ ಗೋಪ್ಯಾನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಜಮೀನಿನಲ್ಲಿ ಸೇರಿಕೊಂಡಿದ್ದ ಚಿರತೆಯನ್ನ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದೆ. ಈ ದೃಶ್ಯವನ್ನು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನ ಕಣ್ತುಂಬಿಕೊಂಡಿದ್ದಾರೆ. ಸೆರೆಹಿಡಿದ ಚಿರತೆ ಆಡುಮಲ್ಲೇಶ್ವರ ಮೃಗಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ : ಬಿಡದಿ ಬಿಕ್ಕಟ್ಟು – ಮುಖ್ಯಮಂತ್ರಿ ಜತೆ ಚರ್ಚೆಗೆ ನಾನು ಈಗಲೂ ಸಿದ್ಧ ಎಂದ ಹೆಚ್.ಡಿ.ಕುಮಾರಸ್ವಾಮಿ

Related posts

ದಾಖಲೆ ಬರೆದ ಪ್ರಧಾನಿ ಮೋದಿಗೆ ನಟ ಸುದೀಪ್, ರಿಷಬ್ ಶೆಟ್ಟಿ ಶುಭಾಶಯ..!

Kalpana Editor

ಬಂಡೀಪುರ & ನಾಗರಹೊಳೆ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ, ರಾಜ್ಯ ಸರ್ಕಾರ ನಿರ್ಧಾರ..!

Kalpana Editor

ಬಹುದಿನಗಳ ಕನಸು ನನಸು; ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್

kknewskannada1987@gmail.com