28.2 C
ಬೆಂಗಳೂರು
July 11, 2026
kranthikidi.com
ಆರೋಗ್ಯತಾಜಾಸುದ್ದಿ

ನಿದ್ರೆ ಚೆನ್ನಾಗಿ ಬರಬೇಕು ಅಂದ್ರೆ ತಪ್ಪದೆ ಈ ಆಹಾರ ಸೇವಿಸಿ…!

ಈಗಿನ ದಿನಗಳಲ್ಲಿ ಅನೇಕರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ಅನೇಕರು ಗಾಢ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ. ರಾತ್ರಿ ತಡವಾಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವುದು, ನಿದ್ರೆ ಮಾಡುವ ಸಮಯ ಬದಲಾಗುವುದು, ಒತ್ತಡ, ಅತಿಯಾದ ಕ್ಯಾಫಿನ್ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆ ನಿದ್ರೆಯ ಗುಣಮಟ್ಟವನ್ನು ಹದಗೆಡಿಸಬಹುದು.

ಆದರೆ ದೀರ್ಘಕಾಲ ನಿದ್ರೆಯ ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಹಾಗಾದರೆ ನಿದ್ರೆ ಚೆನ್ನಾಗಿ ಬರಲು ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ರೀತಿಯ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉತ್ತಮ ನಿದ್ರೆಗೆ ಈ 5 ಆಹಾರಗಳು ಸಹಕಾರಿ : ಸಾಮಾನ್ಯವಾಗಿ ಬಾದಾಮಿಯಲ್ಲಿ ಮೆಗ್ನೀಷಿಯಂ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಇವು ದೇಹವನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಸಹಾಯ ಮಾಡಬಹುದು.

ಅಖರೋಟ್ : ಇದರಲ್ಲಿ ಮೆಲಟೋನಿನ್, ಒಮೆಗಾ-3 ಫ್ಯಾಟಿ ಆಮ್ಲಗಳು ಮತ್ತು ಆರೋಗ್ಯಕರ ಕೊಬ್ಬುಗಳಿದ್ದು, ನಿದ್ರೆಯ ಚಕ್ರವನ್ನು ಸಮತೋಲನದಲ್ಲಿಡಲು ನೆರವಾಗುತ್ತವೆ.

ಕಿವಿ ಹಣ್ಣು : ವಿಟಮಿನ್ ಸಿ, ಫೋಲೇಟ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ನಿದ್ರೆ ಬೇಗ ಬರಲು ಹಾಗೂ ನಿದ್ರೆಯ ಗುಣಮಟ್ಟ ಸುಧಾರಿಸಲು ಸಹಕಾರಿ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಕೊಬ್ಬಿನಾಂಶ ಹೆಚ್ಚಿರುವ ಮೀನು : ಸಾಲ್ಮನ್ ಮತ್ತು ಮ್ಯಾಕರಲ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಹಾಗೂ ವಿಟಮಿನ್ ಡಿ ಸಮೃದ್ಧವಾಗಿದ್ದು, ಉತ್ತಮ ನಿದ್ರೆ ಹಾಗೂ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಬಹುದು.

ಕ್ಯಾಮೊಮೈಲ್ ಟೀ : ಕ್ಯಾಫಿನ್ ರಹಿತ ಈ ಹರ್ಬಲ್ ಟೀಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಿ ಗಾಢ ನಿದ್ರೆಗೆ ನೆರವಾಗಬಹುದು.

ಉತ್ತಮ ನಿದ್ರೆಗಾಗಿ ಈ ಅಭ್ಯಾಸಗಳೂ ಮುಖ್ಯ : ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಮತ್ತು ಎದ್ದೇಳಿ. ಮಲಗುವ ಒಂದು ಗಂಟೆ ಮೊದಲು ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆಯನ್ನು ತಪ್ಪಿಸಿ. ಸಂಜೆ ನಂತರ ಚಹಾ, ಕಾಫಿ ಹಾಗೂ ಕ್ಯಾಫಿನ್ ಇರುವ ಪಾನೀಯಗಳನ್ನು ಕಡಿಮೆ ಮಾಡಿ. ರಾತ್ರಿ ಹಗುರವಾದ ಆಹಾರ ಸೇವಿಸಿ. ಮಲಗುವ ಕೋಣೆಯನ್ನು ಶಾಂತ ಮತ್ತು ಆರಾಮದಾಯಕವಾಗಿಡಿ. ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ, ಆದರೆ ಮಲಗುವ ಮುನ್ನ ಭಾರೀ ವ್ಯಾಯಾಮ ಮಾಡಬೇಡಿ. ನಿದ್ರೆಯ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಅಥವಾ ಹಗಲಿನಲ್ಲಿ ನಿರಂತರ ಆಯಾಸ ಕಂಡುಬಂದರೆ, ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ. ಇದನ್ನೂ ಓದಿ : ಕೇತನ್‌ ಜೊತೆ ಎಂಗೇಜ್‌ಮೆಂಟ್‌, ಲವ್ವರ್ ಜೊತೆ ರಹಸ್ಯ ಮದುವೆ – ಬಯಲಾಗ್ತಿದೆ ಕ್ರಿಮಿನಲ್‌ ಸಿಯಾ ಪುರಾಣ

Related posts

ಕಾಡುಗೋಡಿ ಮಗು ಕೊಲೆ ಪ್ರಕರಣ; ಮೂವರು ಪೊಲೀಸರ ತಲೆದಂಡ..!

Kalpana Editor

ಸುಲಭ ರೀತಿಯಲ್ಲಿ ಹೋಟೆಲ್ ಶೈಲಿಯ ಮೇಥಿ ಪನ್ನೀರ್ ಕರಿ

Kalpana Editor

ಹೆಚ್​​.ಸಿ. ಮಹದೇವಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ; ರಾಜ್ಯಪಾಲರಿಗೆ ದೂರು ಸಲ್ಲಿಕೆ..!

Kalpana Editor