kranthikidi.com
ತಾಜಾಸುದ್ದಿರಾಜ್ಯ

ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಮೊದಲ ‘ಬ್ಲೂ ಲೈನ್’ ರೈಲು ಆಗಮನ

ಬೆಂಗಳೂರು : ಬ್ಲೂ ಲೈನ್ ಬೆಂಗಳೂರಿಗರ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗ. ಈ ವರ್ಷ ಡಿಸೆಂಬರ್​ನಲ್ಲಿ ಓಪನ್ ಮಾಡಲು ಬಿಎಂಆರ್​ಸಿಎಲ್​ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬೆನ್ನಲ್ಲೇ ಕೆಂಪೇಗೌಡ ಏರ್​ಪೋರ್ಟ್ ಮಾರ್ಗಕ್ಕೆ ಮೊದಲ ರೈಲು ಬಂದಿದೆ. ಇಂದು ಬೆಳಿಗ್ಗೆ ಬೈಯಪ್ಪನಹಳ್ಳಿ ಡಿಪೋಗೆ ಟ್ರೈನ್ ಸೆಟ್​ ತಲುಪಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್ ನೀಡಿದೆ.

ಬ್ಲೂ ಲೈನ್ ಮೆಟ್ರೋ ಮಾರ್ಗವು ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ​ವರೆಗೆ ಸಂಪರ್ಕ ಕಲ್ಪಿಸಲಿದ್ದು, ಇದು ನಗರದ ಜನರಿಗೆ ಮತ್ತು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 58.19 ಕಿಮೀ ವಿಸ್ತೀರ್ಣದ ಬ್ಲೂ ಲೈನ್ ಮೆಟ್ರೋ ಮಾರ್ಗಕ್ಕೆ ಬೆಂಗಳೂರಿನ ಬೆಮಲ್‌ನಲ್ಲಿ ರೈಲುಗಳನ್ನು ಆರ್ಡರ್ ಮಾಡಲಾಗಿದೆ. ಈ ಮಾರ್ಗಕ್ಕಾಗಿ 38 ಡ್ರೈವರ್ ಲೆಸ್​ ರೈಲುಗಳಿಗಾಗಿ ಆರ್ಡರ್ ನೀಡಲಾಗಿದೆ. ಇದನ್ನೂ ಓದಿ : ಸಿಎಂ ಆದ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಸಿಎಂ ಡಿಕೆ ಶಿವಕುಮಾರ್

ಬ್ಲೂ ಲೈನ್​​ಗೆ ಇನ್ನು ಎರಡು ಮೆಟ್ರೋ ರೈಲು ಬರಬೇಕಿದೆ. ಈ ವರ್ಷ ಡಿಸೆಂಬರ್‌ನಲ್ಲಿ 19.75 ಕಿಮೀ ಉದ್ದದ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದವರೆಗಿನ ಮೊದಲ ಹಂತವನ್ನು ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಸಿಲ್ಕ್ ಬೋರ್ಡ್ ಟು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ 58.19 ಕಿಮೀ ವಿಸ್ತೀರ್ಣವಿದ್ದು, ಈ ಮಾರ್ಗದಲ್ಲಿ 30 ಮೆಟ್ರೋ ಸ್ಟೇಷನ್​​ಗಳಿರಲಿವೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರ 19.75 ಕಿಮೀ ಮಾರ್ಗದಲ್ಲಿ 13 ಸ್ಟೇಷನ್​​ಗಳಿರಲಿದ್ದು, ಕೆ.ಆರ್ ಪುರ ಟು ಏರ್​ಪೋರ್ಟ್​​ವರೆಗೆ 38.44 ಕಿಮೀ ಮಾರ್ಗದಲ್ಲಿ 17 ಮೆಟ್ರೋ ಸ್ಟೇಷನ್​ ಗಳಿರಲಿವೆ. ನೀಲಿ ಮಾರ್ಗವನ್ನು ಬರೋಬ್ಬರಿ 14,788 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

Related posts

ಧರ್ಮೇಂದ್ರ, ಮಮ್ಮುಟ್ಟಿ ಸೇರಿ ಹಲವರಿಗೆ ಇಂದು ಪದ್ಮ ಪ್ರಶಸ್ತಿ ಪ್ರದಾನ..!

Kalpana Editor

ರಾಕೆಟ್‌ ವಿಕ್ರಮ್‌-1 ಉಡಾವಣೆ ಯಶಸ್ವಿ – ನಭಕ್ಕೆ ಜಿಗಿದ ಮೊದಲ ಖಾಸಗಿ ರಾಕೆಟ್‌

Kalpana Editor

ಭಾರತಕ್ಕೆ ಮುಂಗಾರು ಪ್ರವೇಶ; ಕೇರಳದಲ್ಲಿ ಆರೆಂಜ್ ಅಲರ್ಟ್ ಘೋಷಣೆ..!

Kalpana Editor