August 2, 2026
kranthikidi.com
ತಾಜಾಸುದ್ದಿದೇಶರಾಜ್ಯ

ಭಾರತಕ್ಕೆ ಮುಂಗಾರು ಪ್ರವೇಶ; ಕೇರಳದಲ್ಲಿ ಆರೆಂಜ್ ಅಲರ್ಟ್ ಘೋಷಣೆ..!

ಮೂರು ದಿನ ತಡವಾಗಿ ಕೊನೆಗೂ ಭಾರತಕ್ಕೆ ಮುಂಗಾರು ಪ್ರವೇಶವಾಗಿದೆ. ನೈಋತ್ಯ ಮುಂಗಾರು ಮಾರುತಗಳು ಇಂದು ಕೇರಳವನ್ನು ಅಧಿಕೃತವಾಗಿ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ. ಜೂನ್ ಮೊದಲ ವಾರದಲ್ಲೇ ಮುಂಗಾರು ನಿಗದಿತ ಸಮಯಕ್ಕೆ ಸರಿಯಾಗಿ ಕೇರಳ ಕರಾವಳಿಯನ್ನು ತಲುಪಿದ್ದು, ದೇಶಾದ್ಯಂತ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ. ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ರಾಜ್ಯಾದ್ಯಂತ ‘ಆರೆಂಜ್ ಅಲರ್ಟ್’ ಘೋಷಿಸಿದೆ.

ಭಾರತದ ಒಟ್ಟಾರೆ, ಮಳೆಯ ಪ್ರಮಾಣದಲ್ಲಿ ಶೇ. 70ಕ್ಕಿಂತ ಹೆಚ್ಚು ಮಳೆ ಈ ನೈಋತ್ಯ ಮುಂಗಾರಿನಿಂದಲೇ ಸಿಗುತ್ತದೆ. ದೇಶದ ಅರ್ಧಕ್ಕಿಂತ ಹೆಚ್ಚು ಕೃಷಿ ಭೂಮಿ ಇಂದಿಗೂ ಮಳೆಯನ್ನೇ ಆಶ್ರಯಿಸಿರುವುದರಿಂದ, ಮುಂಗಾರು ಸಮಯಕ್ಕೆ ಸರಿಯಾಗಿ ಆರಂಭವಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಇದು ದೇಶದ ಜಲಾಶಯಗಳ ನೀರಿನ ಮಟ್ಟವನ್ನು ಹೆಚ್ಚಿಸುವುದಲ್ಲದೆ, ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಲಿದೆ. ಇದೀಗ ಮುಂಗಾರು ಮಾರುತಗಳು ಯಾವುದೇ ಅಡೆತಡೆಯಿಲ್ಲದೆ ಕೇರಳವನ್ನು ಪ್ರವೇಶಿಸಿದ್ದು, ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದಾದ್ಯಂತ ಮಳೆಯ ಪ್ರಮಾಣ ತೀವ್ರಗೊಳ್ಳಲಿದೆ.

ಕೇರಳಕ್ಕೆ ಮುಂಗಾರು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮಾರುತಗಳು ಕರ್ನಾಟಕದ ಕರಾವಳಿ ಭಾಗವನ್ನು ತಲುಪಲಿವೆ. ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದ 2 ರಿಂದ 3 ದಿನಗಳಲ್ಲಿ (ಅಂದರೆ ಜೂನ್ ಮೊದಲ ವಾರದ ಅಂತ್ಯದೊಳಗೆ) ಮುಂಗಾರು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳನ್ನು ಪ್ರವೇಶಿಸುತ್ತದೆ. ಜೂನ್ ಎರಡನೇ ವಾರದ ಆರಂಭದ ವೇಳೆಗೆ ಮುಂಗಾರು ಮಾರುತಗಳು ಇಡೀ ಕರ್ನಾಟಕವನ್ನು ಆವರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ : ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಮೊದಲ ‘ಬ್ಲೂ ಲೈನ್’ ರೈಲು ಆಗಮನ

ಮುಂಗಾರು ಮಾರುತಗಳು ಕರ್ನಾಟಕದ ಕರಾವಳಿ ಭಾಗವಾದ ಮಂಗಳೂರನ್ನು ಈಗಾಗಲೇ ಸ್ಪರ್ಶಿಸಿರುವುದರಿಂದ, ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ತೀವ್ರಗೊಳ್ಳಲಿದೆ. ಮುಂಗಾರು ಮಾರುತಗಳು ಕರ್ನಾಟಕದ ಕರಾವಳಿ ಭಾಗವಾದ ಮಂಗಳೂರನ್ನು ಈಗಾಗಲೇ ಸ್ಪರ್ಶಿಸಿರುವುದರಿಂದ, ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ತೀವ್ರಗೊಳ್ಳಲಿದೆ.

Related posts

ಭಾರೀ ಮಳೆಗೆ ಕುಸಿದ ರಸ್ತೆ, ಅಪ್ಪಳಿಸಿದ ಪ್ರವಾಹ; ಮುಂಬೈ-ಪುಣೆ ಸಂಪರ್ಕ ಕಟ್‌

Kalpana Editor

ತಿರುಪತಿ ತಿಮ್ಮಪ್ಪನ ಆರತಿಯಲ್ಲಿ ಇನ್ಮುಂದೆ ಕರ್ನಾಟಕ ವಿಐಪಿಗಳಿಗೂ ಚಾನ್ಸ್ – ಸಿಎಂ ಮಹತ್ವದ ಘೋಷಣೆ..!

Kalpana Editor

ಬೆಂಗಳೂರಲ್ಲಿ ಕಸದ ಗಾಡಿಗಳ ಟ್ರ್ಯಾಕ್‌ಗೆ ಹೊಸ ರೂಟ್; ಕೋರಮಂಗಲದಲ್ಲಿ ಪ್ರಾಯೋಗಿಕ ಆ್ಯಪ್‌ಗೆ ಚಾಲನೆ..!

Kalpana Editor