26.4 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಬಿಜೆಪಿಯಿಂದ ಹೊರಬಂದು ಅಣ್ಣಾಮಲೈ ಆಂದೋಲನ; 14 ಲಕ್ಷ ಜನ ಬೆಂಬಲ..!

ಚೆನ್ನೈ : ತಮಿಳುನಾಡಿನ ರಾಜ್ಯ ರಾಜಕಾರಣದಲ್ಲಿ ಅಣ್ಣಾಮಲೈ ತಮ್ಮ 2.0 ರಾಜಕಾರಣವನ್ನು ಶುರು ಮಾಡಿದ್ದಾರೆ. ಬಿಜೆಪಿಯಿಂದ ಆಚೆ ಬಂದಿರುವ ಅಣ್ಣಾಮಲೈ, ‘ವಿ ದಿ ಲೀಡರ್ಸ್’ ಅಂದ್ರೆ ನಾವೇ ನಾಯಕರು ಎಂಬ ಆಂದೋಲನಕ್ಕೆ ಚಾಲನೆ ಕೊಟ್ಟಿದ್ದಾರೆ. ಬನ್ನಿ ಹೆಜ್ಜೆಯಿಡೋಣ, ಕ್ರಮ ತೆಗೆದುಕೊಳ್ಳೋಣ ಬದಲಾವಣೆ ತರೋಣ ಎಂದು ಎಕ್ಸ್ ಖಾತೆಯಲ್ಲಿ ಕರೆಕೊಟ್ಟಿರುವ ಅಣ್ಣಾಮಲೈ, ತಮ್ಮ ರಾಜಕೀಯ ಆಂದೋಲನಕ್ಕೆ ಸೇರಿಕೊಳ್ಳಲು ಕರೆ ಕೊಟ್ಟಿದ್ದಾರೆ.

ಅಣ್ಣಾಮಲೈ ಕರೆಕೊಟ್ಟ ಬೆನ್ನಲ್ಲಿಯೇ ಒಟ್ಟು 14 ಲಕ್ಷ ಜನರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಆಂದೋಲನಕ್ಕೆ ಕೈಜೋಡಿಸಿದ್ದಾರೆ. ಇನ್ನೂ ಕೂಡ ನೋಂದಣಿಗಳು ಆಗುತ್ತಲೇ ಇವೆ. ಈ ಒಂದು ಆಂದೋಲನದ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಅಣ್ಣಾಮಲೈ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ : ನಿರ್ಮಾಪಕರ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ಕೇಸ್; ವಿಚಾರಣೆ ಮುಂದೂಡಿಕೆ..!

ಡಿಎಂಕೆ ಪ್ರಭಾವನ್ನು ವಿಜಯ್ ಬಹುತೇಕ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಎಐಎಡಿಎಂಕೆ ಪಕ್ಷವನ್ನು ಪಕ್ಕಕ್ಕೆ ತಳ್ಳಿ ಆ ಜಾಗಕ್ಕೆ ತಮ್ಮ ಪಕ್ಷ ತರಲು ಅಣ್ಣಾಮಲೈ ಯತ್ನಿಸುತ್ತಿದ್ದು, ಮತ್ತೆ ತಮಿಳುನಾಡಿನಲ್ಲಿ ಎರಡು ಹೊಸ ಪ್ರಭಾವಿ ರಾಜಕೀಯ ಶಕ್ತಿಕೇಂದ್ರಗಳ ಸ್ಥಾಪನೆಯಾಗಲಿವೆಯಾ ಅನ್ನೋ ಕುತೂಹಲ ಮೂಡಿದೆ.

Related posts

ಬಿಡದಿ ಟೌನ್‌ಶಿಪ್ ಯೋಜನೆ; ಭೂಮಿ ಕೊಡಲು ಸಿದ್ಧರಿರುವ ರೈತರ ಜಮೀನು ಪಡೆಯುತ್ತೇವೆ – ಸಿಎಂ ಡಿಕೆಶಿ

kknewskannada1987@gmail.com

ವಯನಾಡಿನಲ್ಲಿ ಭೂಕುಸಿತ; ಕಾರ್ಮಿಕರು ಬಲಿ – ಸಿಎಂ ಸತೀಶನ್‌ ತುರ್ತು ಸಭೆ..!

Kalpana Editor

ರಾಜ್ಯದ ನೂತನ ಡಿಸಿಎಂ ಆಗಿ ಜಿ. ಪರಮೇಶ್ವರ್‌ ಪ್ರಮಾಣವಚನ ಸ್ವೀಕಾರ..!

Kalpana Editor