28.9 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಮಾಜಿ ಪ್ರಧಾನಿಯನ್ನ ರಾಜ್ಯ ಸಭೆಗೆ ಕಳುಹಿಸೋಕೆ ಬಿಜೆಪಿಯವರು ಒಪ್ಪಿಲ್ಲ; ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು : ಮಾಜಿ ಪ್ರಧಾನಮಂತ್ರಿ ಶ್ರೀ ಎಚ್.ಡಿ. ದೇವೇಗೌಡ ಅವರಿಗೆ ರಾಜ್ಯಸಭಾ ನಾಮನಿರ್ದೇಶನ ನಿರಾಕರಿಸಿ, ಅದರ ಬದಲಿಗೆ ತನ್ನ ರಾಜ್ಯ ಉಪಾಧ್ಯಕ್ಷರು ಹಾಗೂ “ಜಿಲ್ಲಾ ಕಟ್ಟಡ ನಿರ್ಮಾಣ” ವಿಭಾಗದ ಉಸ್ತುವಾರಿಯಾಗಿರುವ ಶ್ರೀ ಎಂ. ನಾಗರಾಜ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಮತ್ತು ಅದರ ನಾಯಕತ್ವವು ಜೆಡಿಎಸ್‌ಗೆ ಪದೇ ಪದೇ ಮಾಡುತ್ತಿರುವ ಅವಮಾನವನ್ನು, ಕೇವಲ ಯಾವುದೇ ಬೆಲೆಯಲ್ಲಾದರೂ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಶ್ರೀ ಎಚ್.ಡಿ. ಕುಮಾರಸ್ವಾಮಿ ನಿರಂತರವಾಗಿ ಸಹಿಸಿಕೊಳ್ಳುತ್ತಿರುವುದು ಆಶ್ಚರ್ಯಕರವೂ, ಕಣ್ಣು ತೆರೆಸುವಂತದ್ದೂ ಆಗಿದೆ. ಈ ಅವಮಾನವನ್ನೂ ಒಪ್ಪಿಕೊಳ್ಳುವುದು ಪರಮಾವಧಿಯ ರಾಜಕೀಯ ಶರಣಾಗತಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನು ನೆನಪಿಸಿಕೊಳ್ಳಬೇಕು, ನೆನಪಿನಲ್ಲಿ ಇಟ್ಟುಕೊಳ್ಳಬೇಕು – 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಅವರು ಶ್ರೀ ಎಚ್.ಡಿ. ದೇವೇಗೌಡರನ್ನು ಸೋಲಿಸಿದ್ದರು. ಬಳಿಕ, ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಕರ್ನಾಟಕದ ಮಾಜಿ ಪ್ರಧಾನಮಂತ್ರಿಯ ಸ್ಥಾನಮಾನಕ್ಕೆ ಗೌರವ ನೀಡಿ ಕಾಂಗ್ರೆಸ್ ಪಕ್ಷ ಹಾಗೂ ಶ್ರೀಮತಿ ಸೋನಿಯಾ ಗಾಂಧಿಯವರು ಶ್ರೀ ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಬೆಂಬಲ ನೀಡಿದ್ದರು.

ಶ್ರೀ ದೇವೇಗೌಡರು ಈ ಹಿಂದೆ ಬಿಜೆಪಿಯ ವಿರುದ್ಧ ತಮ್ಮ ತೀವ್ರ ವಿರೋಧವನ್ನು ಹಲವು ಬಾರಿ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದರೆ ಅವರನ್ನು “ತ್ಯಜಿಸುತ್ತೇನೆ” ಎಂದು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೂ, 2023ರ ಅಕ್ಟೋಬರ್‌ನಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತು. ನಂತರ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಮೋದಿ ಸರ್ಕಾರದಲ್ಲಿ ಭಾರೀ ಕೈಗಾರಿಕೆಗಳ ಕೇಂದ್ರ ಸಚಿವರಾದರು. ಇದನ್ನೂ ಓದಿ : ಬಸ್ – ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ..!

ಈಗ, 2026ರ ಜೂನ್ 7ರಂದು, ಬಿಜೆಪಿ ಮಾಜಿ ಪ್ರಧಾನಮಂತ್ರಿ ಶ್ರೀ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭಾ ನಾಮನಿರ್ದೇಶನ ನೀಡುವುದನ್ನು ನಿರಾಕರಿಸಿ, ತನ್ನ ಪಕ್ಷದ ಪದಾಧಿಕಾರಿಯನ್ನೇ ಆಯ್ಕೆ ಮಾಡಿದೆ. ಇದು ಏನನ್ನು ಹೇಳುತ್ತದೆ? ಅಧಿಕಾರಕ್ಕಾಗಿ ಯಾವುದೇ ಬೆಲೆ, ಅಧಿಕಾರಕ್ಕಾಗಿ ಎಲ್ಲವನ್ನೂ ತ್ಯಾಗ ಎಂದು. ಇಂದು ಕರ್ನಾಟಕದ ಜೆಡಿಎಸ್‌ನ ಏಕೈಕ ರಾಜಕೀಯ ಧ್ಯೇಯ ಇದೇ ಎಂಬುದು ಸ್ಪಷ್ಟವಾಗಿದೆ.

ಒಬ್ರು ಮಾಜಿ ಪ್ರಧಾನಿ ಅವರನ್ನ ರಾಜ್ಯ ಸಭೆಗೆ ಕಳುಹಿಸೋಕೆ ಬಿಜೆಪಿಯವರು ಒಪ್ಪಿಲ್ಲ, ರಾಜ್ಯಕ್ಕೆ ಎಂತ ಅನ್ಯಾಯ ಇದು. ಜೆಡಿಎಸ್ ಇಷ್ಟೊಂದು ವೀಕ್ ಆಗಬಾರದಿತ್ತು. ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದುಕೊಂಡು ದೇವೇಗೌಡರನ್ನ ರಾಜ್ಯ ಸಭೆಗೆ ಆಯ್ಕೆ ಮಾಡಿಸೋಕೆ ಆಗಲಿಲ್ಲ ಅಂದ್ರೆ ಏನು ಅನ್ನೋದು..? ದೇವೆಗೌಡರು ಅಂದ್ರೆ ರೈತರ ಧ್ವನಿ ಮಣ್ಣಿನ ಮಗ. ಅಂತವರು ರಾಜ್ಯಸಭೆಗೆ ಬೇಡ ಅಂತ ಬಿಜೆಪಿ ತೀರ್ಮಾನ ಮಾಡುತ್ತೆ ಅಂದ್ರೆ ರಾಜ್ಯಕ್ಕೆ ಇದಕ್ಕಿಂತ ಅವಮಾನ ಬೇರೆ ಇಲ್ಲ.

ದೇಶದಲ್ಲಿ ಈಗ ಬದುಕಿರುವ ಏಕೈಕ ಮಾಜಿ ಪ್ರಧಾನಿ‌ ನಮ್ಮ ದೇವೇಗೌಡರು. ಅವರನ್ನ ರಾಜ್ಯ ಸಭೆಗೆ ಆಯ್ಕೆ ಮಾಡೋದು ಬಿಜೆಪಿಯವರಿಗೆ ಇಷ್ಟ ಇಲ್ಲ ಅಂದ್ರೆ ಬಿಜೆಪಿಯವರು ಮನಸ್ಥಿತಿ ಇನ್ನು ಎಂತದ್ದಿರಬಹುದು. ಜೆಡಿಎಸ್ ನವರಿಗೆ ಸ್ವಲ್ಪನಾದರು ಸ್ಚಾಭಿಮಾನ ಇದ್ದರೆ ಮೊದಲು ಬಿಜೆಪಿ ಮೈತ್ರಿ ಬಿಟ್ಟು ಹೊರಗೆ ಬರಲಿ ಎಂದು ಹೇಳಿದ್ದಾರೆ.

Related posts

ಗೋಲಿ ಆಡೋಕೂ ಬರ್ತಾ ಇರಲಿಲ್ಲ – ಸೂರ್ಯವಂಶಿ ಬಗ್ಗೆ ಅಮಿತಾಭ್ ಮಾತು..!

Kalpana Editor

ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

Kalpana Editor

ನಟ ಅಜಿತ್ ತಾಯಿ ಮೋಹಿನಿ ಮಣಿ ನಿಧನ; ಅಂತಿಮ ದರ್ಶನಕ್ಕೆ ವ್ಯವಸ್ಥೆ..!

Kalpana Editor